Advertisement
ರಡಾರ್ ವ್ಯವಸ್ಥೆಗಿಂತಲೂ ಇದು ಸ್ವಲ್ಪ ಭಿನ್ನವಾಗಿದ್ದು, ಎಲೆಕ್ಟ್ರೋ ಆಪ್ಟಿಕಲ್ ಸಿಸ್ಟಮ್ ಮೂಲಕ ಈ ಯಂತ್ರ ಕೆಲಸ ಮಾಡುವುದರಿಂದ ದೆಹಲಿ ಮುಖ್ಯ ಕಚೇರಿಯಿಂದಲೇ ಭಾರತದ ಎಲ್ಲ ಗಡಿ ಭಾಗದ ಭದ್ರತೆಯ ನಿಯಂತ್ರಣ ಮಾಡಬಹುದಾಗಿದೆ. 25 ಕಿ.ಮೀ ವ್ಯಾಪ್ತಿಯಲ್ಲಿ ಸಮುದ್ರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೂ ಅದರ ವಿಡಿಯೋ ಮತ್ತು ಛಾಯಾಚಿತ್ರ ತಕ್ಷಣವೇ ಸಿಗಲಿದೆ. 360 ಡಿಗ್ರಿ ವ್ಯಾಪ್ತಿಯನ್ನು ಹೊಂದಿದ ಕ್ಯಾಮರಾ ಇದರಲ್ಲಿದೆ. ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ದೇಶದ ಕರಾವಳಿಯ ಸುರಕ್ಷತೆಗಾಗಿ ಅತ್ಯಾಧುನಿಕ ಯಂತ್ರ ತಯಾರಿಸುವ ಕಾರ್ಯಕ್ಕೆ ಬಿಇಎಲ್ ಚಾಲನೆ ನೀಡಿತ್ತು. ಇದೀಗ ಯಂತ್ರ ಕಾರ್ಯಾರಂಭಕ್ಕೆ ಸಜ್ಜಾಗಿದ್ದು, ಪ್ರಯೋಗಾರ್ಥ ಪರೀಕ್ಷೆ ಕೇರಳದ ಕರಾವಳಿಯಲ್ಲಿ ಆರಂಭವಾಗಿದೆ. ಬಿಇಎಲ್ ಸಿದಟಛಿಪಡಿಸಿರುವ ಎಲೆಕ್ಟ್ರಾನಿಕ್ ಆಧಾರಿತ ಕರಾವಳಿ ಕಣ್ಗಾವಲು ವ್ಯವಸ್ಥೆಯ ಮೂಲಕವೇ ಭಾರತೀಯ ನೌಕದಳವು ಕೇರಳದಲ್ಲಿ ಕೆಲವೊಂದು ಮಾಹಿತಿ ಪಡೆಯಲು ಆರಂಭಿಸಿದೆ ಎಂದು ಬಿಇಎಲ್ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
Related Articles
Advertisement
ಆಗಸದಲ್ಲಿ ಡ್ರೋನ್ ಚಿನ್ನಾಟಬೆಂಗಳೂರು: ವೈಮಾನಿಕ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಒಲಿಂಪಿಕ್ ಪ್ರೇಕ್ಷಕರ ಮನ ಮುದು ಗೊಳಿಸಿತು. ದೇಶದ ವಿವಿಧ ಭಾಗಗಳಿಂದ ಹತ್ತಾರು ನಮೂ ನೆಯ ಡ್ರೋನ್‌ಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಒಂದಕ್ಕಿಂತ ಒಂದು ಪ್ರದರ್ಶನ ನೀಡಿದ ಆ ಡ್ರೋನ್‌ಗಳು ಕೇವಲ ಎರಡು ತಾಸುಗಳಲ್ಲಿ 33.5 ಲಕ್ಷ ರೂ. ಗಳಿಸಿದವು. ದೆಹಲಿಯ ಒಂದೇ ತಂಡ ಅತಿ ಹೆಚ್ಚು ಐದು ಲಕ್ಷ ರೂ. ಬಹುಮಾನ ಬಾಚಿಕೊಂಡಿತು. ಒಟ್ಟಾರೆ 57 ಡ್ರೋನ್ ತಂಡಗಳು ಈ ಒಲಿಂಪಿಕ್ ಹಾಗೂ ಮಾದರಿ ವಿಮಾನಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಪೈಕಿ 17 ತಂಡಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದವು. ಅಂತಿಮವಾಗಿ 9 ತಂಡಗಳು ವಿವಿಧ ವಿಭಾಗಗಳಲ್ಲಿ ಬಹುಮಾನ ಗಳಿಸಿದವು. ಯುಎಎಸ್ -ಡಿಟಿಯು (ಮಾನವರಹಿತ ಏರ್ ಸಿಸ್ಟ್‌ಂ-ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ) ವಿದ್ಯಾರ್ಥಿಗಳು ನೀಡಿದ ಫಾರ್ಮೇಷನ್ ವಿಭಾಗ (ನಾಲ್ಕೈದು ಡ್ರೋನ್‌ಗಳು ಸೇರಿ ಪರಸ್ಪರ ಸಮನ್ವಯದಿಂದ ಹಾರಾಟ ನಡೆಸುವುದು)ದಲ್ಲಿನ ಪ್ರದರ್ಶನಕ್ಕೆ ಐದು ಲಕ್ಷ ರೂ. ಬಹುಮಾನ ಸಿಕ್ಕಿತು. ಸುಡುವ ಬಿಸಿಲು ಲೆಕ್ಕಿಸದೆ, ಈ ಸ್ಪರ್ಧೆ ನೋಡುವಲ್ಲಿ ಮಕ್ಕಳು ತಲ್ಲೀನರಾಗಿದ್ದರು. ರಾಜು ಖಾರ್ವಿ ಕೊಡೇರಿ