ಉಡುಪಿ: ಸಚಿವ ಸಂಪುಟ ವಿಸ್ತರಣೆ ಕಾಲ ಸನ್ನಿಹಿತವಾಗಿದೆ. ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ತಲಾ ಒಬ್ಬರು ವಿಧಾನಸಭಾ ಸದಸ್ಯ (ಯು.ಟಿ. ಖಾದರ್), ವಿಧಾನ ಪರಿಷತ್ ಸದಸ್ಯರು (ಐವನ್ ಡಿ’ಸೋಜಾ) ಇದ್ದರೆ ಉಡುಪಿ ಜಿಲ್ಲೆಯಲ್ಲಿ ಒಬ್ಬರು ವಿಧಾನ ಪರಿಷತ್ ಸದಸ್ಯರು (ಪ್ರತಾಪಚಂದ್ರ ಶೆಟ್ಟಿ) ಇದ್ದಾರೆ. ಇದಲ್ಲದೆ ಜೆಡಿಎಸ್‌ನಿಂದ ದ.ಕ. ಜಿಲ್ಲೆಯ ಬಿ.ಎಂ. ಫಾರೂಕ್ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿದ್ದಾರೆ.
ಉಡುಪಿಯಲ್ಲಿ ಸಚಿವರಾಗುವ ಏಕೈಕ ಅವಕಾಶ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಇದೆ. ನಾಲ್ಕು ಬಾರಿ ವಿಧಾನ ಸಭಾ ಸದಸ್ಯರಾಗಿ, ಮೂರನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಯಾಗಿರುವ ಅವರು ಹಿರಿಯ ಶಾಸಕರು. ಅವರಿಗೆ ಇದು ವರೆಗೆ ಸಚಿವ ಸಂಪುಟ ದಲ್ಲಿ ಸ್ಥಾನ ಸಿಕ್ಕಿಲ್ಲ. ಅಲ್ಲದೆ ಕುಂದಾ ಪುರಕ್ಕೂ ಇದು ವರೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಆಡಳಿತದ ಎಳೆ ಎಳೆಯೂ ಗೊತ್ತಿರುವುದು, ಸ್ಥಳೀಯ ಆಡಳಿತದ ಸಂಪೂರ್ಣ ಒಳ- ಹೊರಗು ತಿಳಿದಿರುವುದು ಇವರ ಪ್ಲಸ್ ಪಾಯಿಂಟ್. ಇವರಿಗೆ ಇರುವ ಏಕೈಕ ಮೈನಸ್ ಅಂಶವೆಂದರೆ ಲಾಬಿ ನಡೆಸದೆ ಇರುವುದು. “ನಾವು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಾಪಚಂದ್ರ ಶೆಟ್ಟಿ ಯವರಿಗೆ ಅವಕಾಶ ಕೊಡಲು ಶಿಫಾರಸು ಮಾಡಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ.
ದ.ಕ. ಜಿಲ್ಲೆಯಲ್ಲಿ ಯು.ಟಿ. ಖಾದರ್‌ಗೆ ಸಚಿವ ಸ್ಥಾನ ಬಹುತೇಕ ಖಾತ್ರಿ. ಐವನ್ ಡಿ’ಸೋಜಾರಿಗೆ ಅವ ಕಾಶ ಸಿಗಲೂಬಹುದು. ಮೀನು ಗಾರಿಕೆ ಇಲಾಖೆ ಜೆಡಿಎಸ್ ಪಾಲಿಗೆ ಹೋಗಿರು ವುದರಿಂದ ಕರಾವಳಿಯ ಬಿ.ಎಂ. ಫಾರೂಕ್ ಅವರಿಗೆ ಅವ ಕಾಶ ಸಿಗ ಬಹುದು ಎಂಬ ಲೆಕ್ಕಾ ಚಾರವೂ ಇದೆ. ಯುವಜನ ಸೇವಾ ಇಲಾಖೆ ಕಾಂಗ್ರೆಸ್ ಪಾಲಿಗೆ ಇದೆ. ಯು.ಟಿ. ಖಾದರ್ ದೊಡ್ಡ ಖಾತೆಗಳನ್ನು ನಿಭಾಯಿಸಿರುವ ಕಾರಣ ಅವರಿಗೆ ಪ್ರಬಲ ಇಲಾಖೆಯೇ ದೊರಕಬಹುದು. ಪ್ರತಾಪಚಂದ್ರ ಶೆಟ್ಟಿ ಯವರಿಗೆ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ದೊರಕಬಹುದು ಎಂಬ ಊಹೆ ಇದೆ.
ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್, ಎಐಸಿಸಿ ನಾಯಕ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಂತಿಮ ಪಟ್ಟಿ ತಯಾರಿಸುತ್ತಾರೆ. ಹೈಕಮಾಂಡ್ ಇದರ ಮೇಲ್ವಿಚಾರಣೆ ನಡೆಸುವು ದಾಗಿ ಡಾ| ಜಿ. ಪರಮೇಶ್ವರ್ ತಿಳಿಸಿದ್ದಾರೆ. ರಾಹುಲ್ ಗಾಂಧಿ ವಿದೇಶದಲ್ಲಿದ್ದು, ಇಂದೇ ಬರಲಿದ್ದಾರೆ. ಅವರು ಬಂದ ತತ್‌ಕ್ಷಣ ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ನಾವು ಜಿಲ್ಲೆಯಿಂದ ಪ್ರತಾಪಚಂದ್ರ ಶೆಟ್ಟಿಯವರ ಹೆಸರನ್ನು ಶಿಫಾರಸು ಮಾಡಿದ್ದೇವೆ.
ಜನಾರ್ದನ ತೋನ್ಸೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಉಡುಪಿ.