Advertisement

ಜಿಎಸ್‌ಟಿ ಜಾರಿ ಬಳಿಕದ ಹೊಸ ಎಂಆರ್‌ಪಿ ಮುದ್ರಿಸದಿದ್ದರೆ ಜೈಲು, ದಂಡ

03:26 PM Jul 07, 2017 | udayavani editorial |

ಹೊಸದಿಲ್ಲಿ :  ಗ್ರಾಹಕರ ಹಿತಾಸಕ್ತಿಯಲ್ಲಿ ಕಂಪೆನಿಗಳು ಅಥವಾ ಉತ್ಪಾದಕರು ಜಿಎಸ್‌ಟಿ ಜಾರಿಗೆ ಬಂದ ಅನಂತರದ ಹೊಸ ಎಂಆರ್‌ಪಿ ದರಗಳನ್ನು ಮುದ್ರಿಸದಿದ್ದರೆ ಅಂತಹವರಿಗೆ 1 ಲಕ್ಷ ರೂ. ದಂಡ ಮತ್ತು ಜೈಲು ಶಿಕ್ಷೆಯಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಎಚ್ಚರಿಸಿದ್ದಾರೆ. 

Advertisement

ಮಾರಾಟವಾಗದ ಹಳೇ ಸ್ಟಾಕನ್ನು  ಹೊಸ ಎಂಆರ್‌ಪಿ ದರದಲ್ಲಿ ಸೆಪ್ಟಂಬರ್‌ ವರೆಗೆ ಮಾರಾಟ ಮಾಡುವುದಕ್ಕೆ ಉತ್ಪಾದಕರಿಗೆ ಅವಕಾಶ ನೀಡಲಾಗದೆ ಎಂದವರು ಹೇಳಿದರು.

ಜಿಎಸ್‌ಟಿ ಕುರಿತಾದ ಗ್ರಾಹಕರ ದೂರುಗಳನ್ನು ಇತ್ಯರ್ಥಪಡಿಸಲು ಗ್ರಾಹಕ ಸಚಿವಾಲಯವು ಸಮಿತಿಯೊಂದನ್ನು ರೂಪಿಸಿದೆ; ಮಾತ್ರವಲ್ಲದೆ ತೆರಿಗೆ ಸಂಬಂಧಿತ ದೂರು ದುಮ್ಮಾನಗಳನ್ನು ನಿಭಾಯಿಸಲು ಈಗಿರುವ ಹೆಲ್ಪ್ ಲೈನ್‌ಗಳನ್ನು 14 ರಿಂದ 60ಕ್ಕೆ ಏರಿಸಲಾಗಿದೆ ಎಂದು ಸಚಿವ ಪಾಸ್ವಾನ್‌ ಹೇಳಿದರು.

ಗ್ರಾಹಕ ಸಹಾಯ ವಾಣಿಗಳಲ್ಲಿ ಈ ತನಕ 700ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ ಮತ್ತು ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯದ ನೆರವನ್ನೂ ಕೋರಲಾಗಿದೆ ಎಂದು ಪಾಸ್ವಾನ್‌ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next