Advertisement

ಭ್ರಷ್ಟಾಚಾರದಲ್ಲಿ 3 ಪಕ್ಷಗಳಿಗೆ ಪಾಲಿದೆ: ಆಪ್‌

06:05 AM Dec 22, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದಕ್ಕೆ ಕಾಂಗ್ರೆಸ್‌,ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳೇ ಕಾರಣ ಎಂದು ಆಮ್‌ ಆದ್ಮಿ ಪಕ್ಷದ  ರಾಷ್ಟ್ರೀಯ ವಕ್ತಾರ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಮೂರು ಪ್ರಮುಖ ಪಕ್ಷಗಳು ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸದೆ ಭ್ರಷ್ಟಾಚಾರ ವಿಚಾರದಲ್ಲಿ ನಾ ಮುಂದು ತಾ ಮುಂದು ಎಂದು ಪೈಪೋಟಿಯಲ್ಲಿ ನಿರತವಾಗಿವೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಲಿಷ್ಠ ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿರುವುದೇ ಇದಕ್ಕೆ ಉದಾಹರಣೆ ಎಂದರು.

ಕೆರೆ ಒತ್ತುವರಿಯಾದರೂ ಸರ್ಕಾರ ಗಮನ ಹರಿಸುತ್ತಿಲ್ಲ. ರೈತರ ಗೋಳು ಕೇಳುವವರೇ ಇಲ್ಲ. ನಿರುದ್ಯೋಗಿಗಳ ದ್ವನಿಗೆ ಬೆಲೆ ಇಲ್ಲ. ಈ ಹಿನ್ನಲೆಯಲ್ಲಿ ರಾಜ್ಯದ ಮತದಾರ ಬದಲಾವಣೆ ಬಯಸಿದ್ದು, ಮುಂಬರುವ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಗುಜರಾತ್‌ನಲ್ಲಿ ಅಭಿವೃದ್ಧಿ ಅಜೆಂಡಾ ಪ್ರಸ್ತಾಪಿಸದೆ ಕೇವಲ ಧರ್ಮದ ಹೆಸರಿನಲ್ಲಿ ಹೋರಾಟ ನಡೆಸಲಾಯಿತು. ಮತಯಂತ್ರಗಳಲ್ಲೂ ಮೋದಿ ಮ್ಯಾಜಿಕ್‌ ನಡೆಯಿತು ಎಂದು ದೂರಿದರು.

2ಜಿ ಹಗರಣದ ಕುರಿತು ಸಿಬಿಐ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್‌ ಸಿಂಗ್‌, ದೇಶಕ್ಕೆ ಇದು ದೌಭ್ಯಾಗ್ಯ ದಿನ. ಸಿಬಿಐ ಸಂಸ್ಥೆ 2ಜಿ ಹಗರಣದಲ್ಲಿ ಸಾಕ್ಷಿಗಳನ್ನು ಸಾಬೀತು ಪಡಿಸಲು ವಿಫ‌ಲವಾಗಿದೆ. ಅದೇರೀತಿ ಐಪಿಎಲ್‌ ಹಗರಣದ ಆರೋಪಿ ಲಲಿತ್‌ ಮೋದಿ ಮತ್ತು ಬ್ಯಾಂಕ್‌ಗಳಿಗೆ ವಂಚಿಸಿರುವ ವಿಜಯ್‌ ಮಲ್ಯ ಅವರನ್ನು ದೇಶಕ್ಕೆ ಕರೆತರಲು ಇನ್ನೂ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಟೀಸಿಕಿದರು.

Advertisement

ಶೆಟ್ಟರ್‌ ವಿರುದ್ಧ ಸಂತೋಷ್‌ ನರಗುಂದ ಕಣಕ್ಕೆ.
ಆಮ್‌ ಆದ್ಮಿ ಪಕ್ಷದಿಂದ ಈಗಾಲೇ 20 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯ ರ್ಥಿಗಳು ಕಣಕ್ಕಿಳಿಯಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ವಿರುದ್ಧ ಏರೋನಾಟಿಕಲ್‌ ಎಂಜಿನಿಯರ್‌ ಸಂತೋಷ್‌ ನರಗುಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಳಿಯಲಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ಕರ್ನಾಟಕ ಉಸ್ತುವಾರಿ ಪಂಕಜ್‌ ಗುಪ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next