Advertisement

‘ಕರಪ್ಷನ್ ಮುಕ್ತ ಕರ್ನಾಟಕ ಮಿಷನ್’ಕಾಂಗ್ರೆಸ್ ಯಾತ್ರೆ ಆರಂಭ : ಸುರ್ಜೇವಾಲ

01:52 PM Apr 14, 2022 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಹತ್ಯೆ ಮಾಡಲಾಗಿದೆ.ಹಿರಿಯ ಸಚಿವ ಈಶ್ವರಪ್ಪ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನಲ್ಲಿದ್ದಾರೆ. ಎಫ್ ಐಆರ್ ಕೂಡ ದಾಖಲಾಗಿದೆ.ಯಾವ ನೈತಿಕತೆ ಮೇಲೆ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಲ್ಲೇ ಮುಂದು ವರಿಸಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊಲೆ ಪ್ರಕರಣದ ಸಂಬಂಧ ಕೂಲೇ ಈಶ್ವರಪ್ಪ ಅವರನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಎಂದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಲೆ ಪ್ರಕರಣದ ಸಂಬಂಧ ಈಶ್ವರಪ್ಪ ಅವರನ್ನು ರಕ್ಷಣೆ ಮಾಡುತ್ತಿರುವುದು ಸಂವಿಧಾನದ ವಿರೋಧಿಯಾಗಿದೆ ಎಂದರು.

”ಕರಪ್ಷನ್ ಮುಕ್ತ ಕರ್ನಾಟಕ ಮಿಷನ್ ಯಾತ್ರೆ”ಯನ್ನು ಕಾಂಗ್ರೆಸ್ ಆರಂಭಿಸಿದೆ. ಸಿಎಂ ಬೊಮಾಯಿ ನೇತೃತ್ವದ ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದೆ.ಆ ಹಿನ್ನೆಲೆಯಲ್ಲಿ ಬಿಜೆಪಿ ಸಚಿವ ಈಶ್ವರಪ್ಪ ಸೇರಿ ಭ್ರಷ್ಟರನ್ನು ರಕ್ಷಿಸುತ್ತಿದೆ. ಕರ್ನಾಟಕದಲ್ಲಿ 40% ಪರ್ಸೆಂಟೇಜ್ ಸರ್ಕಾರವಿದ್ದು, ಆ ಹಿನ್ನಲೆಯಲ್ಲಿ ಭ್ರಷ್ಟ  ಬಿಜೆಪಿ ಸರ್ಕಾರದ ವಿರುದ್ದ ಎಲ್ಲ ಕನ್ನಡಿಗರು ಧ್ವನಿ ಎತ್ತಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next