Advertisement
ಅಲ್ಲಿನ ಮಾದರಿ ದೇಶದೆಲ್ಲೆಡೆ ಜಾರಿಗೇಕೆ ಸಾಧ್ಯವಾಗದು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ ಎಂ.ಶಾಂತನಗೌಡರ ಪ್ರಶ್ನಿಸಿದರು. ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ಬೆಂಗಳೂರಿನ ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ವೇದಿಕೆಯಿಂದ ಎಲ್.ಜಿ. ಹಾವನೂರು ಸ್ಮರಣಾರ್ಥ ಆಯೋಜಿಸಿದ್ದ ಭಾರತದಲ್ಲಿ ಮಾನವ ಹಕ್ಕುಗಳ ಬಲವರ್ಧನೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಮಾಜಿ ಅಡ್ವೋಕೇಟ್ ಜನರಲ್ ಪ್ರೊ| ರವಿವರ್ಮ ಕುಮಾರ ಮಾತನಾಡಿ, ಎಲ್.ಜಿ. ಹಾವನೂರು ಅವರು ಮೌಲ್ಯಗಳೊಂದಿಗೆ ಬದುಕಿದವರು. ಮಾನವ ಹಕ್ಕುಗಳ ರಕ್ಷಣೆ ಎಂಬುದು ನಮ್ಮ ಕುಟುಂಬದಲಿಂದಲೇ ಆರಂಭವಾಗಬೇಕು. ಜಾತಿ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನಿಷೇಧವಿದೆ.
ಮಾನವ ಹಕ್ಕುಗಳು ಹಾಗೂ ಸ್ತ್ರೀ ಸಮಾನತೆ ಬಗ್ಗೆ ಬಸವಣ್ಣ ಕಣ್ಣು ತೆರೆಸುವ ಕಾರ್ಯ ಮಾಡಿದ್ದರು ಎಂದರು. ಹಾವನೂರು ಅವರ ಹಿಂದುಳಿದ ವರ್ಗಗಳ ವರದಿ ಆಧಾರದಲ್ಲೇ ಮಂಡಲ ವರದಿ ರಚನೆಗೊಂಡಿತ್ತು. ನೆಲ್ಸನ್ ಮಂಡೇಲಾ ಅವರು ಸುದೀರ್ಘ ಜೈಲುವಾಸದಿಂದ ಬಿಡುಗಡೆಗೊಂಡ ಅನಂತರ ಅಲ್ಲಿನ ರಾಷ್ಟ್ರೀಯ ಕಾಂಗ್ರೆಸ್ ಸಂವಿಧಾನ ರಚನೆ ವಿಚಾರದಲ್ಲಿ ವಿಶ್ವದಾದ್ಯಂತ ತಜ್ಞರಿಗಾಗಿ ತಡಕಾಡಿ ಕೊನೆಗೆ ಹಾವನೂರು ಅವರನ್ನು ಆಯ್ಕೆ ಮಾಡಿತ್ತು.
ದಕ್ಷಿಣ ಆμÅಕಾದ ಸಂವಿಧಾನ ರಚನೆಯಲ್ಲಿ ಕನ್ನಡಿಗೊಬ್ಬರ ಪ್ರಮುಖ ಪಾತ್ರ, ಮಾರ್ಗದರ್ಶನ ಇದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು. ದೇಶದಲ್ಲಿ ಮೂಲಭೂತ ವಾದ ಹೆಚ್ಚುತ್ತಿದೆ. ಗೋ ರಕ್ಷಣೆ ಹೆಸರಲ್ಲಿ ಮನುಷ್ಯರ ಹತ್ಯೆ ಹೆಚ್ಚುತ್ತಿದೆ.
ಇಂದು ನಾವು ಮಾನವ ಹಕ್ಕುಗಳನ್ನು ಸಂರಕ್ಷಿಸದಿದ್ದರೆ, ನಾಳೆ ನಮ್ಮ ರಕ್ಷಣೆಗಾಗಿ ಮಾನವ ಹಕ್ಕುಗಳು ಇರುವುದಿಲ್ಲ ಎಂಬ ಎಚ್ಚರಿಕೆ ಸತ್ಯವನ್ನು ಅರಿಯಬೇಕಾಗಿದೆ ಎಂದರು. ಕಾನೂನು ವಿವಿ ಪ್ರಭಾರ ಕುಲಪತಿ ಡಾ| ಸಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ| ರತ್ನಾ ಭರಮಗೌಡರ ಸ್ವಾಗತಿಸಿದರು. ಡಾ| ಜಿ.ಬಿ. ಪಾಟೀಲ ವಂದಿಸಿದರು.