ಬಂಗಾರಪೇಟೆ: ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು,ಶಾಶ್ವತ ಪರಿಹಾರಕ್ಕೆ ಯುಗಾದಿ ಹಬ್ಬದಬಳಿಕ ಅರಣ್ಯ ಸಚಿವರನ್ನು ಸ್ಥಳಕ್ಕೆ ಕರೆ ಯಿಸಿ, ಕಾರಿಡಾರ್ ಯೋಜನೆ ಕಾರ್ಯಗತವಾಗಲು ಶ್ರಮಿಸುತ್ತೇನೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ತಾಲೂಕಿನ ದೋಣಿಮಡುಗುಗ್ರಾಮದಲ್ಲಿ ಆರ್‌ಎಂಎಸ್‌ಎ ಯೋಜನೆಯಲ್ಲಿ 1.37 ಕೋಟಿ ರೂ.ನಲ್ಲಿನಿರ್ಮಾಣ ಮಾಡಿರುವ ನೂತನ ಪ್ರೌಢ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಕೆಲವು ಶಿಕ್ಷಕರು 10ನೇತರಗತಿ, ಪಿಯುಸಿ ಪಾಸ್ ಆಗದವರು ಇರುತ್ತಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಪದವೀಧರ ಶಿಕ್ಷಕರಿದ್ದರೂ ಖಾಸಗಿಶಾಲೆಗಳ ವ್ಯಾಮೋಹದಿಂದ ಸರ್ಕಾರಿಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದವರ್ಷ ಕ್ಷೀಣಿಸುವ ಮೂಲಕ ಮುಚ್ಚುವಹಂತ ತಲುಪಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.
ಮೈದಾನ ಜಾಗ ಖರೀದಿಗೆ ಹಣ: ಬರೀಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿಲ್ಲ ಬದಲಾಗಿ ಶಿಕ್ಷಕರು,ಪೋಷಕರೂ ಕೈ ಜೋಡಿಸಬೇಕು. ಈನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ. ಈ ಶಾಲೆಯಲ್ಲಿ ಮಕ್ಕಳದೈಹಿಕ ಬೆಳವಣಿಗೆಗೆ ಆಟದ ಮೈದಾನದ ಕೊರತೆಯಿದ್ದು, ಜಾಗ ಖರೀದಿಗೆ ನಾನುಒಂದು ಎಕರೆಗೆ ಬೇಕಾಗುವ ಹಣದಲ್ಲಿ ಅರ್ಧ ಕೊಡುವ ಭರವಸೆ ನೀಡಿದರು.
62 ಕೋಟಿ ರೂ. ಅಭಿವೃದ್ಧಿ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ದೋಣಿಮಗಡು ಪಂಚಾಯ್ತಿಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಚೆಕ್‌ಡ್ಯಾಂ ನಿರ್ಮಾಣ ಮಾಡಿ ದಾಖಲೆಮಾಡಲಾಗಿದೆ. ಈ ಗ್ರಾಪಂನಲ್ಲಿ 8ವರ್ಷಗಳಿಂದ 62 ಕೋಟಿ ರೂ.ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಯಾವುದೇ ಪ್ರಯೋಜನವಾಗಿಲ್ಲ: ಕಾಡಾನೆಗಳ ಕಾಟದಿಂದ ಈ ಭಾಗದರೈತರು ಹೈರಾಣರಾಗಿದ್ದಾರೆ. ಹಿಂದೆ ಸೋಲಾರ್ ಪೆನ್ಸಿಂಗ್‌ಗೆ ಹಣ ಮಂಜೂ ರಾಗಿತ್ತು, ಇದರಿಂದ ಯಾವುದೇಉಪಯೋಗವಿಲ್ಲ. ಆನೆ ಕಾರಿಡಾರ್ ಮಾಡಿದರೆ ಮಾತ್ರ ರೈತರಿಗೆ ನೆಮ್ಮದಿಸಿಗುತ್ತದೆ. ಇದನ್ನು ಕಾರ್ಯಗತಗೊಳಿಸಲು ನಾನು ಹಲವು ಬಾರಿ ಸರ್ಕಾರದೊಂದಿಗೆಸಂಘರ್ಷ ನಡೆಸಿರುವೆ, ಯಾವುದೇಅನುಕೂಲ ವಾಗಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಸಭೆಯಲ್ಲಿ ಡಿ.ಕೆ.ಹಳ್ಳಿ ಜಿಪಂ ಸದಸ್ಯ ಬಿ.ವಿ.ಮಹೇಶ್, ದೋಣಿ ಮಡಗು ಗ್ರಾಪಂ ಅಧ್ಯಕ್ಷೆ ಮಂಜುಳಾಮಹಾ ದೇವ್, ಕೆಜಿಎಫ್ ಬಿಇಒ ಚಂದ್ರಶೇಖರ್, ಜಿಪಂ ಎಇಇ ಎಚ್.ಡಿ.ಶೇಷಾದ್ರಿ, ಎಇ ರವಿಚಂದ್ರನ್, ಭೂ ದಾನಿಗಳಾದ ಪಾಪಿರೆಡ್ಡಿ, ನಾರಾಯಣರೆಡ್ಡಿ, ಬಲಮಂದೆ ವಿಎಸ್‌ಎಸ್‌ಎನ್ ಅಧ್ಯಕ್ಷ ಜಿ.ವೆಂಕಟೇಶಗೌಡ, ಜಿಲ್ಲಾ ಬಿಜೆಪಿಉಪಾಧ್ಯಕ್ಷ ಬಿ.ಹೊಸರಾಯಪ್ಪ ಮುಂತಾದವರು ಉಪಸ್ಥಿತರಿದ್ದರು.