Advertisement

ಮಕ್ಕಳ ಆಧಾರ್‌ ಕಾರ್ಡ್‌: ಹೆಸರಿನಲ್ಲಿ‘ಯ’ಒತ್ತು ತಿದ್ದುಪಡಿಗೆ 6 ತಿಂಗಳಿಂದ ಅಪ್ಪನ ಅಲೆದಾಟ

12:30 PM May 09, 2022 | Team Udayavani |

ಬಜಪೆ: ಮೂಡುಪೆರಾರದ ಕೂಲಿ ಕಾರ್ಮಿಕ ಅನಿಲ್‌ ಅವಿನಾಶ್‌ ನಜ್ರೆತ್‌ ಅವರು ಮಕ್ಕಳ ಆಧಾರ್‌ ಕಾರ್ಡ್‌ನಲ್ಲಿ ಹೆಸರಿನ ತಿದ್ದು ಪಡಿಗಾಗಿ 6 ತಿಂಗಳುಗಳಿಂದ ನಾಡಕಚೇರಿ, ಸೇವಾ ಕೇಂದ್ರ, ಸೈಬರ್‌ಗಳಿಗೆ ಅಲೆದಾಡಿದರೂ ಸರಿಪಡಿಸಲಾಗದೆ ಸುಸ್ತಾಗಿದ್ದಾರೆ.

Advertisement

ಕೆಲಸಕ್ಕೂ ಹೋಗದೇ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಆಧಾರ್‌ ಕಾರ್ಡ್‌ ಹೆಸರಿನಲ್ಲಿನ ತಿದ್ದುಪಡಿ ಮಾಡಲೇಬೇಕಾದ ಸನ್ನಿ ವೇಶ ಹಾಗೂ ಸವಲತ್ತಿಗೂ ಕುತ್ತು ತರುವ ಕಾರಣ ಈ ಸುತ್ತಾಟ, ಅಲೆದಾಟ ಮುಗಿದಿಲ್ಲ. ಮೂಡುಪೆರಾರದ ಕೊಕ್ಕರ್‌ ಹೌಸ್‌ನ ಅನಿಲ್‌ ಅವಿನಾಶ್‌ ನಜ್ರೆತ್‌ ಮತ್ತು ಫಾತೀ ಮೇರಿ ದಂಪತಿಯ ಆ್ಯನಸನ್‌ ಮತ್ತು ಆ್ಯನೊನ್‌ ಮಕ್ಕಳ ಹೆಸರಿನಲ್ಲಿಯ ಒತ್ತು ಮುಂದ್ರಿತವಾಗದೇ ಇರುವು ದರಿಂದ ತಿದ್ದು ಪಡಿಗೆ ಅಲೆದಾಟಕ್ಕೆ ಕಾರಣವಾಗಿದೆ. ಕೈಕಂಬ ಅಂಚೆ ಕಚೇರಿಯಲ್ಲಿ ಇಬ್ಬರಿಗೆ ಒಂದು ವರ್ಷವಾಗುವಾಗ ಆಧಾರ್‌ ಕಾರ್ಡ್‌ನ್ನು ನೊಂದಣಿ ಮಾಡಿದ್ದು ಅಲ್ಲಿ ‘ಯ’ ಒತ್ತನ್ನು 5 ವರ್ಷ ಬಳಿಕ ಮಕ್ಕಳ ಹೆಬ್ಬೆರಳಚ್ಚುನ್ನು ನೀಡುವಾಗ ಸರಿಪಡಿಸಬಹುದು ಎಂದು ಹೇಳಲಾಗಿತ್ತು. ಆದರೆ 5 ವರ್ಷಗಳ ಬಳಿಕ ಹೋದಾಗ ಇದನ್ನು ಸರಿಪಡಿಸಲು ನಮ್ಮಲ್ಲಿ ಅಗತ್ಯ ಸ್ಟಾಫ್ವೇರ್‌ ಇಲ್ಲ ಎಂದು ಹೇಳಲಾಯಿತು. ಬಳಿಕ ಗುರುಪುರ ನಾಡ ಕಚೇರಿಗೆ ಹೋದರು. ಅಲ್ಲಿಯೂ ಸರಿಪಡಿಸಲಾಗಿಲ್ಲ. ಅಲ್ಲಿಯೂ ಸ್ಟಾಪ್‌ವೇರ್‌ ಇಲ್ಲ ಎಂದು ಹೇಳಲಾಯಿತು. ಬಳಿಕ ಕೈಕಂಬ ಸೇವಾ ಸಿಂಧು ಕಚೇರಿ, ಸೈಬರ್‌ಗೆ, ಗಂಜಿಮಠದ ಸೇವಾ ಸಿಂಧು ಕಚೇರಿಗೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಸ್ಟಾಫ್ವೇರ್‌ ಇದ್ದರೂ ಆಧಾರ್‌ ಕಾರ್ಡ್‌ಗೆ ಅದನ್ನು ಸೇರ್ಪಡೆ ಮಾಡಿದಾಗ ಅದು ಸರಿಯಾಗುತ್ತಿಲ್ಲ ಎಂದು ಹೇಳಲಾಯಿತು.

ವಿದ್ಯಾರ್ಥಿವೇತನ ವಂಚಿತ ಆ್ಯನಸನ್‌

ಆ್ಯನಸನ್‌ ಈಗ ಒಂದನೇ ತರಗತಿ, ಅಧಾರ್‌ ಕಾರ್ಡ್‌ ಹೆಸರು ಸರಿಪಡಿಸಲು ಸಾಧ್ಯವಾಗದೇ ವಿದ್ಯಾರ್ಥಿವೇತನ ಸಿಗಲಿಲ್ಲ. ಕಟ್ಟಡ ಕಾರ್ಮಿಕರ ಇಲಾಖೆಯಿಂದಲೂ ಸವಲತ್ತಿಗೆ ತೊಂದರೆಯಾಗಿದೆ. ಆ್ಯನೊನ್‌ ಈ ಬಾರಿ ಒಂದನೇ ತರಗತಿ ಅವನಿಗೂ ಸವಲತ್ತು ಸಿಗುವಲ್ಲಿ ತೊಂದರೆಯಾಗಲಿದೆ ಎಂಬ ಚಿಂತೆಯಲ್ಲಿ ಅನಿಲ್‌ ಇದ್ದಾರೆ. ಅವರ ಹೆಸರನ್ನು ರೇಶನ್‌ ಕಾರ್ಡ್‌ಗೆ ಸೇರಿಸಲೂ ಸಾಧ್ಯವಾಗುತ್ತಿಲ್ಲ.

ಕೂಲಿ ಕೆಲಸ ಮಾಡುವ ಅನಿಲ್‌ ಅವರು ಅತ್ತ ಕೆಲಸಕ್ಕೂ ಹೋಗದ ಪರಿಸ್ಥಿತಿ. ಇತ್ತ ಮಕ್ಕಳ ಆಧಾರ್‌ ಕಾರ್ಡ್‌ನ ಹೆಸರಿನಲ್ಲಿನ ತಿದ್ದುಪಡಿಯಾಗದೆ ಅಲೆದಾಟ, ಪರದಾಟ, ಮಕ್ಕಳ ಭವಿಷ್ಯದ ಚಿಂತೆ ಎಲ್ಲವೂ ಒಮ್ಮೆಲೇ ಸಿಡಿಲು ಬಡಿದಂತೆ ಆಗಿ ಅವರು ಕುಗ್ಗಿ ಹೋಗಿದ್ದಾರೆ. ಆಧಾರ್‌ ಕಾರ್ಡ್‌ನ ಈ ತಿದ್ದು ಪಡಿಗೆ ನಾನು ಇನ್ನು ಎಲ್ಲಿ ಹೋಗಲಿಗೆ ದಿಕ್ಕು ತೋಚದಂತಾಗಿದೆ ಎಂದು ಅವರು ಕೊರಗುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next