Advertisement

ಕಳಪೆ ಕಾಮಗಾರಿ ಸರಿಪಡಿಸಿ

12:59 PM Apr 24, 2022 | Team Udayavani |

ದೇವನಹಳ್ಳಿ: ಪಟ್ಟಣದಲ್ಲಿ ನಿರ್ಮಾಣವಾಗಿ ರುವ ಅಂಬೇಡ್ಕರ್‌ ಭವನದ ಕೆಲವು ಭಾಗಗಳು ಕಳಪೆ ಕಾಮಗಾರಿ ಆಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಎಲ್‌.ಎನ್‌. ನಾರಾಯಣಸ್ವಾಮಿ ಸೂಚಿಸಿದರು.

Advertisement

ಪಟ್ಟಣದ ಗಿರಿಯಮ್ಮ ವೃತ್ತದಲ್ಲಿರುವ ಅಂಬೇಡ್ಕರ್‌ ಭವನಕ್ಕೆ ಭೇಟಿ ನೀಡಿ ಸ್ವಚ್ಛತೆ ಮತ್ತು ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬಡವರ್ಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಂಬೇಡ್ಕರ್‌ ಭವನವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಸರಿಯಾದ ರೀತಿ ನಿರ್ವಹಣೆ ಇಲ್ಲದೆ ಸ್ವತ್ಛತೆ ಇಲ್ಲದಿರುವುದು ಕಂಡು ಬಂದಿದೆ. ಕಾರ್ಯಕ್ರಮ ಮಾಡಿದವರು ಹಾಗೇ ಸಚ್ಛತ್ಛ ಮಾಡದೇ ಬಿಟ್ಟು ಹೋಗಿರುವುದು ಸರಿಯಲ್ಲ ಎಂದು ಆಕೋಶ ವ್ಯಕ್ತಪಡಿಸಿದರು.

ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ: ಯಾರು ಅಂಬೇಡ್ಕರ್‌ ಭವನದ ಕಾಮಗಾರಿ ಗುತ್ತಿಗೆ ಮಾಡಿದ್ದಾರೆ. ಅವರು ಕೂಡಲೇ ಕಳಪೆ ಕಾಮಗಾರಿ ಸರಿಪಡಿಸಬೇಕು. ಇಲ್ಲದಿದ್ದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸ ಲಾಗುತ್ತದೆ. ಈಗಾಗಲೇ ಜಗಜೀವನ್‌ ರಾಮ್‌ ಭವನ, ಹಿಂದುಳಿದ ವರ್ಗದ ದೇವರಾಜ್‌ ಅರಸು ಭವನ ಪರಿಶೀಲನೆ ಮಾಡಿದ್ದೇನೆ. ಅಲ್ಲಿ ಸರಿಯಾದ ರೀತಿ ಇಟ್ಟುಕೊಂಡಿದ್ದಾರೆ. ಹಿಂದುಳಿದ ವರ್ಗದ ಹಾಸ್ಟೆಲ್‌ಗ‌ೂ ಭೇಟಿ ನೀಡಿ ಅಲ್ಲಿನ ಸಮಸ್ಯೆ ಏನು ಇದೆ ಎಂಬುದರ ಮಾಹಿತಿ ಪಡೆದಿದ್ದೇನೆ ಎಂದರು.

ಅನುದಾನಕ್ಕೆ ಮನವಿ: ಅಂಬೇಡ್ಕರ್‌ ಭವನದ ಗ್ಲಾಸ್‌ನ್ನು ಹೊಡೆದಿರುವವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸ ಬೇಕು. ಮುಂದೆ ಈ ರೀತಿ ಆಗಬಾರದು. ಈಗಾಗಲೇ ವಿದ್ಯುತ್‌ ಬಿಲ್‌ ಬಾಕಿ ಉಳಿದು ಕೊಂಡಿದೆ. ಕಾರ್ಯಕ್ರಮಗಳಿಗೆ ನೀಡುವಾಗ ಇದರ ಸಮಿತಿ ಸದಸ್ಯರ ಗಮನಕ್ಕೆ ತಂದು ಸ್ವತ್ಛತೆ ಇತರೆ ಸೌಕರ್ಯಗಳ ಬಗ್ಗೆ ಪರಿಶೀಲಿಸಬೇಕು. ಶೌಚಾಲಯ ನಿರ್ವಹಣೆ ಇಲ್ಲದೆ ಹದಗೆಟ್ಟಿದೆ. ಹಿಂದುಳಿದ ವರ್ಗದ ಹಾಗೂ ಸಮಾಜ ಕಲ್ಯಾಣ ಸಚಿವರನ್ನು ಭೇಟಿ ನೀಡಿ ಯಾವ ಭವನಕ್ಕೆ ಎಷ್ಟು ಅನುದಾನ ಬೇಕಾಗುತ್ತದೆ ಅದಕ್ಕೆ ಮನವಿ ಮಾಡಲಾಗುವುದು. ಮಹಾನ್‌ ನಾಯಕರ ಭವನ ಮಾಡಿದರೆ ಸಾಲದು. ಅವುಗಳ ನಿರ್ವಹಣೆ ಆಗಬೇಕು ಎಂದರು.

ಪುರಸಭಾ ಸದಸ್ಯ ಜಿ.ಎ.ರವೀಂದ್ರ, ಮಾಜಿ ಸದಸ್ಯ ಕಾಳಪ್ಪನವರ ವೆಂಕಟೇಶ್‌, ತಾಲೂಕು ಸೊಸೈಟಿ ನಿರ್ದೇಶಕ ಎಸ್‌. ಗುರಪ್ಪ,, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ನಳಿನಾಕ್ಷಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ಪಾಲಕ ಅಭಿಯಂತರ ರವೀಂದ್ರಸಿಂಗ್‌, ಮುಖಂಡ ನಟರಾಜ್‌, ಮುತ್ತು ಕುಮಾರ್‌ ಹಾಗೂ ಮತ್ತಿತರರು ಇದ್ದರು.

Advertisement

ಭವನದಲ್ಲಿ ಸ್ವತ್ಛತೆ ಇಲ್ಲ: ಆಕ್ರೋಶ ಅಂಬೇಡ್ಕರ್‌ ಭವನದಲ್ಲಿ ಸ್ವತ್ಛತೆಯಿಲ್ಲ. ಪುರಸಭೆ ಕಸದ ತೊಟ್ಟಿಗಿಂತಲೂ ಹದಗೆಟ್ಟಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಸ್ವತ್ಛತೆ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸ ಬೇಕಾಗುತ್ತದೆ. ಕಾಮಗಾರಿ ಕಳಪೆ ಆಗಿರುವುದು ಕಂಡುಬಂದಿದೆ. ಈ ಹಿಂದಿನ ಪಿಡಬ್ಲ್ಯೂಡಿ ಅಭಿಯಂತ ರರನ್ನು ಕರೆಸಿ ಇನ್ನು ಯಾವ ಕಾಮಗಾರಿ ಆಗಬೇಕು. ಯಾವ ಗುತ್ತಿಗೆದಾರರು ಮಾಡಿದ್ದಾರೆ ಎನ್ನುವ ಎಲ್ಲಾ ಮಾಹಿತಿ ಪಡೆಯುತ್ತೇನೆ ಎಂದು ಶಾಸಕ ನಾರಾಯಣಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next