Advertisement
ಪಾಲಿಕೆ ಸದಸ್ಯ ಇಮ್ರಾನ್‌ಪಾಷಾ ಅವರಿಗೆ ಶುಕ್ರವಾರ ಸಂಜೆ ವೇಳೆಗೆ ಸೋಂಕು ಇರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜನಪ್ರತಿನಿಧಿಗೂ ಸೋಂಕು ಕಾಣಿಸಿಕೊಂಡಂತಾಗಿದೆ. ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲು ಪಾಲಿಕೆಯ ಆರೋಗ್ಯ ಸಿಬ್ಬಂದಿ ಶನಿವಾರ ಬೆಳಗ್ಗೆ 10ಕ್ಕೆ ಅವರ ಮನೆ ಬಳಿಗೆ ಆ್ಯಂಬುಲೆನ್ಸ್ ಆಗಮಿಸಿದರೂ ಸತತ ಎರಡು ಗಂಟೆಗಳ ಕಾಲ ಮನೆಯಿಂದ ಪಾಷಾ ಅವರು ಹೊರಗೆ ಬರಲಿಲ್ಲ.
Related Articles
Advertisement
ಪಾದರಾಯನಪುರದಲ್ಲಿ ಆತಂಕ: ಪಾದರಾಯನಪುರದಲ್ಲಿ ಈಗಾಗಲೇ ಕೋವಿಡ್ 19 ಭೀತಿ ಹೆಚ್ಚಿದೆ. ರ್‍ಯಾಂಡಮ್ ಪರೀಕ್ಷೆ ನಂತರ ಈಗ ಸಾಮುದಾಯಿಕ ಸೋಂಕು ಪರೀಕ್ಷೆ ಯಲ್ಲೂ ಮೂವರಿಗೆ ಕೋವಿಡ್ 19 ದೃಢಪಟ್ಟಿದೆ. ಈ ಮಧ್ಯೆ ಪಾಲಿಕೆ ಸದಸ್ಯ ರಿಗೂ ಸೋಂಕು ದೃಢಪಟ್ಟಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ. ಇತ್ತೀಚೆಗೆ ರಂಜಾನ್ ವೇಳೆ ಸ್ಥಳೀಯರಿಗೆ ಸ್ವತಃ ತಾವೇ ಊಟ ಬಡಿಸಿದ್ದರು. ಅಲ್ಲದೆ, ಈ ಭಾಗದಲ್ಲಿನ ಸಾರ್ವಜನಿಕರಿಗೆ ಆಹಾರದ ಕಿಟ್ ನೀಡಿದ್ದರು ಎನ್ನಲಾಗಿದ್ದು, ಸೋಂಕು ವ್ಯಾಪಿಸಿರುವ ಅನುಮಾನ ಸೃಷ್ಟಿಯಾಗಿದೆ.
ಸಭೆ ನಡೆಸಿಲ್ಲ: ಇಮ್ರಾನ್‌ಪಾಷಾ ಮೇ 14ರಂದು ಕಂಟೈನ್ಮೆಂಟ್ ಝೊàನ್‌ನಲ್ಲಿ ಕಿಯೋಸ್ಕ್ ಉದ್ಘಾಟನೆ ವೇಳೆ ಭಾಗವಹಿಸಿದ್ದರು. ಇದಾದ ಮೇಲೆ ಸಭೆಗಳಲ್ಲಿ ಭಾಗವಹಿಸಿಲ್ಲ. ಹೀಗಾಗಿ, ಅಧಿಕಾರಿಗಳ ವಲಯದಲ್ಲಿ ಯಾರನ್ನು ಕ್ವಾರಂಟೈನ್ ಮಾಡುವ ಬಗ್ಗೆ ತೀರ್ಮಾನವಾಗಿಲ್ಲ. ಒಂದೊಮ್ಮೆ ಪಾಲಿಕೆ ಸದಸ್ಯರೊಂದಿಗೆ ಸಂಪರ್ಕವಿದ್ದಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಮನೋರಂಜನ್ ಹೆಗ್ಡೆ ಮಾಹಿತಿ ನೀಡಿದರು.
ಸಾಮುದಾಯಿಕ ಪರೀಕ್ಷೆಯಲ್ಲಿ ಮತ್ತಿಬ್ಬರಿಗೆ ಸೋಂಕು: ಪಾದರಾಯನಪುರದಲ್ಲಿ ಪಾಲಿಕೆ ನಡೆಸುತ್ತಿರುವ ಸಾಮುದಾಯಿಕ ಸೋಂಕು ಪರೀಕ್ಷೆಯಲ್ಲಿ ಮತ್ತಿಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಮೇ 21ರಂದು ಸಾಮುದಾಯಿಕ ಸೋಂಕು ಪರೀಕ್ಷೆಗೆ ಒಳಪಟ್ಟ ಒಬ್ಬರಲ್ಲಿ ಹಾಗೂ ಸದ್ಯ ಮೇ 26ಕ್ಕೆ ಸಮುದಾಯ ಪರೀಕ್ಷೆಗೆ ಒಳಪಟ್ಟ ಇಬ್ಬರು ಪುರುಷರಲ್ಲಿ ಕೋವಿಡ್ 19 ದೃಢಪಟ್ಟಿದೆ ಎಂದು ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ತಿಳಿಸಿದ್ದಾರೆ.
ಕಾರ್ಪೊರೇಟರ್ ಮೇಲೆ ಕ್ರಮ: ಕಾರ್ಪೊರೇಟರ್ ಇಮ್ರಾನ್ ಪಾಷಾ ಮೊದಲಿನಿಂದಲೂ ಇದೇ ರೀತಿ ತರಲೆ ಮಾಡುತ್ತಿದ್ದಾರೆ. ಸೋಂಕು ಪರೀಕ್ಷಾ ವರದಿ ಪಾಸಿಟಿವ್ ಬಂದ ನಂತರ ಕ್ವಾರಂಟೈನ್‌ಗೆ ಒಳಗಾಗಬೇಕು. ಅದನ್ನು ಬಿಟ್ಟು ವಾರ್ಡ್‌ನ ಎಲ್ಲೆಡೆ ಓಡಾಡಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಅಶೋಕ್ ಹೇಳಿದರು.
ಇಮ್ರಾನ್ ಪಾಶಾ ಕಾರ್ಪೊರೇಟರ್ ಆದರೆ ಏನು ಬೇರೆ ಆದರೆ ಏನು? ಎಲ್ರೂ ಕಾನೂನಿಗೆ ಬೆಲೆ ಕೊಡಬೇಕು, ಪಾಲಿಸಬೇಕು. ಇಂಗ್ಲೆಂಡ್ ಪ್ರಧಾನಿಯೇ ಕ್ವಾರಂ ಟೈನ್ ಆಗಿದ್ರು. ಕಾರ್ಪೊರೇಟರ್ ಯಾವ ಲೆಕ್ಕ. ಕೋತಿ ತಾನು ಕೆಡ್ತು ಅಂತ ಹೊಲ ಎಲ್ಲ ಕೆಡಿಸಲು ಹೋಗಬಾರದು. ಇನ್ನೂ ಚಿಕ್ಕ ವಯಸ್ಸಿನ ಇಮ್ರಾನ್ ಪಾಶಾ ಕಾನೂನಿಗೆ ಬೆಲೆ ಕೊಡಲಿ.-ವಿ.ಸೋಮಣ್ಣ, ಸಚಿವ