Advertisement
ಎಲ್ಲಾ ದೇಶಗಳು ತಮ್ಮ ಜಲಭಾಗದತ್ತ ಬರುವ ಐಷಾರಾಮಿ ಪ್ರವಾಸಿ ಹಡಗುಗಗಳ ಮೇಲೆ ತೀವ್ರ ನಿಗಾ ಇಡಲು ಪ್ರಾರಂಭಿಸಿದೆ. ಇದರ ಪರಿಣಾಮವಾಗಿ ಈ ಪ್ರವಾಸಿ ಹಡಗುಗಳಲ್ಲಿ ಪ್ರಯಾಣಿಸುತ್ತಿರುವ ಪ್ರವಾಸಿಗರು ಹಾಗೂ ಇದರಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಇದೀಗ ಸಂಕಷ್ಟ ಎದುರಾಗಿದ್ದು ಈ ಪ್ರಕರಣಗಳಲ್ಲಿ ಭಾರತೀಯರೂ ಸಹ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿರುವ ಒಂದೊಂದೇ ಪ್ರಕರಣಗಳು ವರದಿಯಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ 26 ವರ್ಷ ಪ್ರಾಯದ ಅಭಿಷೇಕ್ ಎಂಬ ಯುವಕನೇ ಈ ರೀತಿಯಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿರುವವರಾಗಿದ್ದಾರೆ. ಇವರು ಕಾರ್ಯನಿರ್ವಹಿಸುತ್ತಿದ್ದ ಬರ್ಮುಡಾ ಮೂಲದ ಡೈಂಮಂಡ್ ಪ್ರಿನ್ಸೆಸ್ ಪ್ರಯಾಣಿಕರ ಹಡಗು ಚೀನಾದ ಹಾಂಕಾಂಗ್ ನಿಂದ ಜಪಾನ್ ನ ಟೊಕಿಯೋಗೆ ಸಾಗುತ್ತಿತ್ತು. ಆದರೆ ಇನ್ನೇನು ಈ ಹಡಗು ಜಪಾನ್ ತಲುಪಬೇಕೆನ್ನುವಷ್ಟರಲ್ಲಿ ಈ ಹಡಗಿನಿಂದ ಇಳಿದಿದ್ದ ಪ್ರಯಾಣಿಕರೊಬ್ಬರಲ್ಲಿ ಮಾರಕ ಕೊರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಈ ಹಡಗನ್ನು ಬಂದರಿಗೆ ಪ್ರವೇಶಿಸದಂತೆ ತಡೆಯಲಾಗಿದ್ದು ಸದ್ಯಕ್ಕೆ ಈ ಹಡಗು ಸಮುದ್ರ ಮಧ್ಯದಲ್ಲೇ ನಿಂತಿದೆ.
Related Articles
Advertisement