ಮುಂಬಯಿ: ಪ್ರಮಾಣೀಕೃತವಾಗದೆ ಪತಂಜಲಿಯ ಕೊರೊನಿಲ್ ಮಾತ್ರೆಗಳ ಮಾರಾಟಕ್ಕೆ ಮಹಾರಾಷ್ಟ್ರದಲ್ಲಿ ಅನುಮತಿ ನೀಡಲಾಗುವುದಿಲ್ಲ ಎಂದು ಗೃಹ ಸಚಿವ ಅನಿಲ್ ದೇಶ್ಮುಖ್ ಮಂಗಳವಾರ ಹೇಳಿದ್ದಾರೆ.
ಕೊರೊನಿಲ್ ಮಾತ್ರೆಗಳಿಗೆ ಡಬ್ಲ್ಯುಎಚ್‌ಒ ಪ್ರಮಾಣಪತ್ರ ದೊರೆತಿರುವುದು ಸುಳ್ಳು ಎಂಬುವುದಾಗಿಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದ ಒಂದು ದಿನದ ಬಳಿಕ ರಾಜ್ಯ ಸರಕಾರದಿಂದ ಈ ಹೇಳಿಕೆ ಬಂದಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರ ಉಪಸ್ಥಿತಿಯಲ್ಲಿ ಔಷಧವನ್ನು ಬಿಡುಗಡೆ ಮಾಡಲಾಯಿತಾದರೂ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿ ಣಾಮ ಬಗ್ಗೆ ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ಐಎಂಎ ಸ್ಪಷ್ಟಪಡಿಸಿದೆ.
ಕೋವಿಡ್ ಚಿಕಿತ್ಸೆಗೆ ಅದರ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಪ್ರಮಾಣ ಪತ್ರವನ್ನು ಪತಂಜಲಿ ಆಯುರ್ವೇದ ಸಂಸ್ಥೆ ಪಡೆದಿಲ್ಲ. ಇದರ ಬಗ್ಗೆ ಡಬ್ಲ್ಯುಎಚ್‌ಒ ಸ್ಪಷ್ಟನೆ ನೀಡಿದೆ. ಆದ್ದರಿಂದ ಡಬ್ಲ್ಯುಎಚ್‌ಒ, ಐಎಂಎ ಮತ್ತು ಇತರ ಆರೋಗ್ಯ ಸಂಸ್ಥೆಗಳ ಪ್ರಮಾಣಪತ್ರವಿಲ್ಲದೆ ಕೊರೊನಿಲ್ ಮಾರಾಟವನ್ನು ಮಹಾರಾಷ್ಟ್ರದಲ್ಲಿ ಅನುಮತಿ ನೀಡುವುದಿಲ್ಲ ಎಂದು ಸಚಿವ ದೇಶ್ಮುಖ್ ಹೇಳಿದ್ದಾರೆ.
ಡಬ್ಲ್ಯುಎಚ್‌ಒ ಪ್ರಮಾಣೀಕರಣ ಯೋಜನೆಯ ಪ್ರಕಾರ ಕೋವಿಡ್ ಚಿಕಿತ್ಸೆಗೆ ಔಷಧವಾಗಿ ಕೊರೊನಿಲ್‌ಟ್ಯಾಬ್ಲೆಟ್ ಆಯುಷ್ ಸಚಿವಾಲಯದಿಂದ ಪ್ರಮಾಣಪತ್ರ ಪಡೆದಿದೆ ಎಂದು ಯೋಗ ಗುರು ರಾಮದೇವ್‌ಅವರ ಪತಂಜಲಿ ಆಯುರ್ವೇದ ಸಂಸ್ಥೆಯು ಫೆ. 19ರಂದು ತಿಳಿಸಿತ್ತು.
ಐಫೋನ್ ಹಗರಣದ ತನಿಖೆಗೆ ಆದೇಶ :
ಇತ್ತೀಚೆಗೆ ನಡೆದ ಕೋಟ್ಯಂತರ ರೂ. ಗಳ ಐಫೋನ್ ಹಗರಣದ ಸಮಗ್ರ ತನಿಖೆಗೆ ಮಹಾರಾಷ್ಟ್ರ ಸರಕಾರ ಆದೇಶಿಸಿದ್ದು, ರಾಜ್ಯ ಸೈಬರ್ ಸೆಲ್ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ತನಿಖೆ ಕೈಗೊಳ್ಳಲಿದೆ ಎಂದು ಗೃಹ ಸಚಿವರು ಅನಿಲ್ ದೇಶ್ಮುಖ್ ಹೇಳಿದ್ದಾರೆ.
ಈ ಬಗ್ಗೆ ಅವರು ಮಂಗಳವಾರ ಟ್ವೀಟ್ ಮಾಡಿದ್ದು, ಐಫೋನ್‌ಹಗರಣವನ್ನು ವಿದೇಶಗಳಲ್ಲಿರುವ ಹಗರಣಕಾರರು ಮಾಡುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಫಲಾನುಭವಿಗಳು ಬಲಪಂಥೀಯ ಪ್ರಭಾವಶಾಲಿಗಳಿದ್ದಾರೆ. ಈ ಬಗ್ಗೆ ಸಮಗ್ರ ವಿಚಾರಣೆಗೆ ಆದೇಶಿಸಿದ್ದು, ಐಜಿಪಿ ಮಹಾರಾಷ್ಟ್ರ ಸೈಬರ್‌ಗೆ ವಹಿಸಿದ್ದೇವೆ ಎಂದು ಹೇಳಿದ್ದಾರೆ.