Advertisement

ಭಾರತದ ಬಾಗಿಲು ಬಂದ್‌

11:57 PM Mar 20, 2020 | Sriram |

ಹೊಸದಿಲ್ಲಿ: ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆ ಗಟ್ಟಲು ಕೇಂದ್ರ ಸರಕಾರವು ಬಹುತೇಕ ಭಾರತೀಯ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಈಗಾಗಲೇ ನೀಡಲಾಗಿರುವ ವೀಸಾಗಳಲ್ಲಿ ಹಲವನ್ನು ಎ. 15ರ ವರೆಗೆ ಅಮಾನತುಗೊಳಿಸಲಾಗಿದೆ. ಹೊಸ ನಿಯಮ ಮಾ. 13ರ ಸಂಜೆ ಜಾರಿಯಾಗಲಿದೆ. ಅಂದರೆ, ಮಾ. 13ರ ಸಂಜೆ 5:30ಕ್ಕೂ ಮೊದಲು ಭಾರತಕ್ಕೆ ತೆರಳಲು ಮಾತ್ರ ಅವಕಾಶ ಸಿಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Advertisement

ಕೆಲವಕ್ಕೆ ವಿನಾಯಿತಿ: ರಾಜತಾಂತ್ರಿಕ, ಆಡಳಿತಾತ್ಮಕ, ವಿಶ್ವಸಂಸ್ಥೆ ಅಥವಾ ಇನ್ನಿತರ ಅಂತಾರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ, ಯೋಜನೆಗೆ ಸಂಬಂಧಿಸಿದ ವೀಸಾಗಳಿಗೆ ವಿನಾಯಿತಿ ನೀಡಲಾಗಿದೆ.

ಈ ನಡುವೆ, ಕೊರೊನಾ ಸೋಂಕು ಜಗತ್ತು ಕಂಡ ತೀವ್ರ ತೆರನಾದ ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

ಬ್ರಿಟಿಷರ ಕಾಲದ ಕಾಯ್ದೆ ಜಾರಿ
ಬ್ರಿಟಿಷರ ಕಾಲದ “1897ರ ಸಾಂಕ್ರಾಮಿಕ ರೋಗ ಕಾಯ್ದೆ’ಯನ್ನು ಕೇಂದ್ರ ಸರಕಾರವು ಪುನಃ ಜಾರಿಗೊಳಿಸಿದೆ. ಈ ಕಾಯ್ದೆ, ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವವರು ಸೋಂಕಿತರೆಂಬ ಅನುಮಾನ ಬಂದಲ್ಲಿ, ಅವರನ್ನು ಕೂಡಲೇ ಪರೀಕ್ಷೆಗೊಳಪಡಿಸುವ, ಸೋಂಕು ಸಾಬೀತಾದರೆ ಅವರನ್ನು ಕೂಡಲೇ ಇತರರಿಂದ ಪ್ರತ್ಯೇಕವಾಗಿಸಿ ಆಸ್ಪತ್ರೆಗಳಲ್ಲಿ ಇರಿಸುವ ಪರಮಾಧಿಕಾರವನ್ನು ಸರಕಾರಕ್ಕೆ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next