Advertisement

ಕೊರೊನಾ: ದುಬೈನ ಕ್ರೀಡಾ ತರಬೇತಿ ಕೇಂದ್ರಗಳು ಬಂದ್‌

10:38 PM Mar 20, 2020 | Sriram |

ಶಾರ್ಜಾ: ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಕ್ರೀಡಾ ತರಗತಿಗಳು ಮತ್ತು ತರಬೇತಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಶಾರ್ಜಾ ಕ್ರೀಡಾ ಮಂಡಳಿ ಹೇಳಿದೆ.

Advertisement

ಮಂಗಳವಾರ ರಾತ್ರಿ ನೀಡಿದ ಹೇಳಿಕೆಯಲ್ಲಿ ಈ ನಿರ್ಧಾರಕ್ಕೆ ಕ್ರೀಡಾ ಮಂಡಳಿ ಬಂದಿದೆ. ತನ್ನ ಆಟಗಾರರು ಮತ್ತು ಕ್ಲಬ್‌ನ ಅಂಗಸಂಸ್ಥೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಶಾರ್ಜಾ ನ್ಪೋರ್ಟ್ಸ್ ಕೌನ್ಸಿಲ್‌, ಶಾರ್ಜಾ ಕ್ಲಬ್‌ಗಳಲ್ಲಿ ನೀಡಲಾಗುವ ಎಲ್ಲಾ ತರಬೇತಿ ಮತ್ತು ಕ್ರೀಡಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.

ಮುಂದಿನ ಸೂಚನೆ ಬರುವವರೆಗೂ ಈ ಆದೇಶ ಮುಂದುವರಿಯಲಿದೆ. ಯುಎಇನಲ್ಲಿ ಆರು ಹೊಸ ಕರೊನಾ ವೈರಸ್‌ ಪ್ರಕರಣಗಳನ್ನು ಗುರುತಿಸಿದ ಬಳಿಕ ಈ ವಿದ್ಯಮಾನ ನಡೆದಿದೆ. ಹೊಸ ರೋಗಿಗಳಲ್ಲಿ ತಲಾ ಇಬ್ಬರು ರಷ್ಯ ಮತ್ತು ಇಟಾಲಿಯವರಾಗಿದ್ದಾರೆ. ಮತ್ತಿಬ್ಬರು ಜರ್ಮನ್‌ ಮತ್ತು ಕೊಲಂಬಿಯಾಕ್ಕೆ ಸೇರಿದವರಾಗಿದ್ದಾರೆ.

ಅಬುಧಾಬಿಯ ಆರೋಗ್ಯ ಇಲಾಖೆ, ಸಂಬಂಧಪಟ್ಟ ಅಧಿಕಾರಿಗಳ ಸಹಕಾರದೊಂದಿಗೆ, ವೈರಸ್‌ ಹರಡುವುದನ್ನು ಎದುರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅಗತ್ಯವಿರುವ ಎಲ್ಲಾ ಕ್ರಮಗಳು ಮತ್ತು ಸಿದ್ಧತೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಬುಧಾಬಿಯ ಸಂಬಂಧಪಟ್ಟ ಅಧಿಕಾರಿಗಳು ವೈರಸ್‌ ಹರಡುವುದನ್ನು ಎದುರಿಸಲು ಅಗತ್ಯವಿರುವ ಎಲ್ಲಾ ತಡೆಗಟ್ಟುವ ಕ್ರಮಗಳನ್ನು ಕೈಗೊಂಡಿದ್ದಾರೆ, ಗಾಳಿ, ಸಮುದ್ರ ಮತ್ತು ಬಂದರುಗಳಲ್ಲಿ ಥರ್ಮಲ್‌ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಮತ್ತು ಅಲ್ಲಿ ಅರ್ಹ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದ್ದು, ಪ್ರಯೋಗಾಲಯಗಳನ್ನೂ ಸ್ಥಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next