Advertisement

ಕೊರೊನಾ ಸೋಂಕಿನ ನಿರ್ಲಕ್ಷ್ಯ ಬೇಡ-ಮುಂಜಾಗ್ರತೆ ಅಗತ್ಯ

09:00 PM Jan 04, 2022 | Team Udayavani |

ಹಾನಗಲ್ಲ: ರಾಜ್ಯದಲ್ಲಿ ಕೊರೊನಾ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿರ್ಲಕ್ಷé ವಹಿಸದೆ ಅಗತ್ಯ ಮುನ್ನೆಚ್ಚರಿಕೆ ಜೊತೆಗೆ ಎಲ್ಲರೂ ಕೊರೊನಾ ಲಸಿಕೆ ಪಡೆಯಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು. ಸೋಮವಾರ ಪಟ್ಟಣದ ನ್ಯೂ ಕಾಂಪೋಜಿಟ್‌ ಜ್ಯೂನಿಯರ್‌ ಕಾಲೇಜಿನಲ್ಲಿ 15ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಲಸಿಕೆ ಪಡೆಯುವ ಮೂಲಕ ಕೊರೊನಾ ಮುಕ್ತ ರಾಜ್ಯವನ್ನಾಗಿಸಲು ಸಹಕರಿಸಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಸುರೇಶ ರಾಯ್ಕರ, ಪಾಲಕರು ಜಾಗೃತಿ ವಹಿಸಿ ಮಕ್ಕಳ ಆರೋಗ್ಯ ಹಾಗೂ ಮುಂದಿನ ಭವಿಷ್ಯದ ಶಿಕ್ಷಣಕ್ಕಾಗಿ ಮಕ್ಕಳಿಗೆ ಲಸಿಕೆ ಹಾಕಿಸಲು ಮುಂದಾಗಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿ ಲಿಂಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ನಾಗಪ್ಪ ಸವದತ್ತಿ, ಉಪಾಧ್ಯಕ್ಷ ರವಿ ಹನುಮನಕೊಪ್ಪ, ಸದಸ್ಯ ಅನಂತವಿಕಾಸ ನಿಂಗೋಜಿ, ಮುಖಂಡರಾದ ರವಿ ದೇಶಪಾಂಡೆ, ರಾಜೂ ಗುಡಿ, ಕಾಶಿನಾಥ ನ್ಯಾಮತಿ, ನಾಗೇಂದ್ರ ಬಮ್ಮನಹಳ್ಳಿ, ಅಶೋಕ ಆರೇಗೊಪ್ಪ, ಬಿಇಒ ಆರ್‌.ಎನ್‌. ಹುರಳಿ, ಮುಖ್ಯಾಧಿಕಾರಿ ಎಚ್‌. ಎನ್‌. ಭಜಕ್ಕನವರ ಮೊದಲಾದವರು ಇದ್ದರು. ಸಿಆರ್‌ಪಿ ಶ್ರೀನಿವಾಸ ದಿಕ್ಷಿತ ನಿರ್ವಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next