Advertisement

ಭಾರತದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 169ಕ್ಕೆ ಏರಿಕೆ: ಶಂಕಿತ ಸೋಂಕು ಬಾಧಿತ ಆತ್ಮಹತ್ಯೆ

12:36 AM Mar 21, 2020 | Mithun PG |

ನವದೆಹಲಿ: ತೆಲಂಗಾಣದಲ್ಲಿ ಮತ್ತೆ ಏಳು ಜನರಲ್ಲಿ ಕೋವಿಡ್19 ಪತ್ತೆಯಾಗಿದ್ದು ಆ ಮೂಲಕ ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 169ಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೊಂಕು ಪತ್ತೆಯಾದ 7 ಜನರು ಕೂಡ ಇಂಡೋನೆಶಿಯಾ ದೇಶದವರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಬುಧವಾರ ಉತ್ತರಪ್ರದೇಶದ ನೊಯ್ಡಾ ಮತ್ತು ರಾಜಸ್ಥಾನದಲ್ಲಿ 28 ಜನರಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಸೋಂಕು ಪೀಡಿತರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ ಶಂಕಿತ ಕೋವಿಡ್19 ಭಾದಿತ ವ್ಯಕ್ತಿಯೊಬ್ಬ  ದೆಹಲಿಯ ಆಸ್ಪತ್ರೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಆಸ್ಟ್ರೇಲಿಯಾದ ಸಿಡ್ನಿಯಿಂದ ಇತ್ತೀಚಿಗಷ್ಟೇ ಮರಳಿದ ಈ ವ್ಯಕ್ತಿಯನ್ನು ವೈರಸ್ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಐಸೋಲೇಶನ್ ವಾರ್ಡ್ ಗೆ ದಾಖಲಿಸಲಾಗಿತ್ತು. ಆದರೇ ಈ ವ್ಯಕ್ತಿ ಆಸ್ಪತ್ರೆಯ 7 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.

ಕಾಶ್ಮೀರದಲ್ಲಿ ಬುಧವಾರ ಮೊದಲ ಕೋವಿಡ್ 19 ಪ್ರಕರಣ ದಾಖಲಾಗಿದೆ. ಆ ಮೂಲಕ ಜಮ್ಮು-ಕಾಶ್ಮೀರದಲ್ಲಿ ಸೋಂಕು ಪೀಡಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಈ ಕೇಂದ್ರಾಡಳಿತ ಪ್ರದೇಶಕ್ಕೆ ಯಾವುದೇ ಪ್ರವಾಸಿಗರು ಬಾರಬಾರೆಂದು ಸ್ಥಳೀಯಾಡಳಿತ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next