Advertisement

ಇಟಲಿ: ಜನವರಿಯಲ್ಲೇ ಸೋಂಕು ಹರಡಿತ್ತು!

02:18 PM Apr 27, 2020 | sudhir |

ಮಣಿಪಾಲ: ಕೋವಿಡ್‌-19 ನೀಡಿರುವ ಪೆಟ್ಟಿಗೆ ಇಟಲಿಯ ಸಾಮಾಜಿಕ ವ್ಯವಸ್ಥೆಯೇ ಬುಡಸಹಿತ ಅಲುಗಾಡಿದ್ದು, ಸೋಂಕಿನ ತವರು ಚೀನಕ್ಕಿಂತ ಒಂದು ಪಟ್ಟು ಹೆಚ್ಚಿನ ಮಟ್ಟದಲ್ಲಿ ತತ್ತರಿಸಿದೆ.

Advertisement

ಆದರೆ ಕೆಲ ದಿನಗಳಿಂದ ಸೋಂಕು ಪ್ರಸರಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇಟಲಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಮೇ 4ಕ್ಕೆ ಲಾಕ್‌ಡೌನ್‌ ತೆರವುಗೊಳಿಸುವ ಯೋಜನೆಯಲ್ಲಿದೆ. ಆದರೆ ಈ ದೇಶದಲ್ಲಿ ಜನವರಿಯ ಮೊದಲ ವಾರದಲ್ಲೇ ಸೋಂಕು ಹರಡಲು ಪ್ರಾರಂಭವಾಗಿತ್ತು ಎಂದು ಇಟಲಿಯ ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿದೆ.

ಬ್ರೂನೋ ಕೆಸ್ಲರ್‌ ಫೌಂಡೇಶನ್‌ ಈ ಕುರಿತಾಗಿ ಅಧ್ಯಯನ ನಡೆಸಿದ್ದು, ಜನವರಿಯಲ್ಲೇ ಸೋಂಕು ಹರಡಲು ಪ್ರಾರಂಭವಾಗಿತ್ತು. ಆದರೆ ತಡವಾಗಿ ಪ್ರಕರಣಗಳು ಬೆಳಕಿಗೆ ಬಂದ ಪರಿಣಾಮ ದೇಶ ಇಂದು ಈ ಪರಿಸ್ಥಿತಿಗೆ ತಲುಪಿದೆ ಎಂದು ಫೌಂಡೇಷನ್‌ ತಿಳಿಸಿದೆ.

ಫೆಬ್ರವರಿ 21ರಂದು ದೇಶದ ಪ್ರಮುಖ ನಗರ ಲೊಂಬಾರ್ಡಿ ಪ್ರದೇಶದ ಕೊಡೊಗ್ನೊ ಎಂಬ ಪ್ರದೇಶದಲ್ಲಿ ದೇಶದ ಮೊದಲ ಸೋಂಕು ಪ್ರಕರಣ ದಾಖಲಾಗಿತ್ತು. ತದನಂತರ ಎಚ್ಚೆತ್ತ ಆಡಳಿತ ವರ್ಗ ತತ್‌ಕ್ಷಣ ಸೋಂಕು ಪರೀಕ್ಷೆಗಳನ್ನು ಪ್ರಾರಂಭಿಸಿತು. ಆದರೆ ಫೆಬ್ರವರಿ 20ಕ್ಕಿಂತ ಮೊದಲೇ ಲೊಂಬಾರ್ಡಿಯದಲ್ಲಿ ಸಾಕಷ್ಟು ಸೋಂಕಿತರಿದ್ದರು ಎಂದು ಅಧ್ಯಯನ ಕಂಡುಕೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ತಿಂಗಳು ಕಳೆಯುವ ದರೊಳಗೆ ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟಿತ್ತು.

ಸೋಂಕು ಹೆಚ್ಚಾಗಿದೆ
ಎಪ್ರಿಲ್‌ನಲ್ಲಿ ದಾಖಲಾದ ಪ್ರಕರಣಗಳ ಮಾದರಿಯನ್ನು ಆಧರಿಸಿ ಪ್ರತ್ಯೇಕ ಅಧ್ಯಯನವನ್ನು ನಡೆಸಿದೆ. ಶೇ.44.1 ಸೋಂಕು ಪ್ರಕರಣಗಳು ನರ್ಸಿಂಗ್‌ ಹೋಂಗಳಿಂದ ಹರಡಿದ್ದರೆ, ಶೇ. 24.7 ಕುಟುಂಬದೊಳಗೆ ಹರಡಿದೆ. ಜತೆಗೆ ಶೇ. 10.8ರಷ್ಟು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಸೋಂಕಿಗೆ ತುತ್ತಾಗಿದ್ದರೆ, ಶೇ.4.2ರಷ್ಟು ಉದ್ಯೋಗ ಸ್ಥಳದಿಂದ ಸೋಂಕಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಜನವರಿ 31ರಂದು ಇಟಲಿಯಿಂದ ಚೀನಕ್ಕೆ ಸಂಪರ್ಕ ಕಲ್ಪಿಸುವ ಗಡಿಭಾಗವನ್ನು ಲಾಕ್‌ಡೌನ್‌ ಮಾಡಿ‌ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಆದರೆ ಆ ವೇಳೆಗಾಗಲೇ ರೋಮ್‌ಗೆ ಚೀನದಿಂದ ಬಂದಿಳಿದಿದ್ದ ಇಬ್ಬರು ಪ್ರವಾಸಿಗರಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗಿತ್ತು. ಆದರೂ ಮುನ್ನಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಮಂದಗತಿ ತೋರಿತ್ತು. ಆದರೆ ಇಟಲಿಯ ಮತ್ತೂಂದು ವಿಜ್ಞಾನಿಗಳ ತಂಡ ಹೇಳುವಂತೆ ಸೋಂಕು ಜನವರಿಯಲ್ಲೇ ಜರ್ಮನ್‌ನಿಂದ ಹರಡಿದ್ದು, ಚೀನದಿಂದ ಬಂದಿಲ್ಲ ಎನ್ನುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next