Advertisement

ಕೊರೊನಾ ವೈರಸ್ ರೋಗಿಯ ದೇಹದಲ್ಲಿ ಐದು ವಾರ ಜೀವಂತವಾಗಿರುತ್ತೆ: ಚೀನಾ ವೈದ್ಯ

10:48 PM Mar 20, 2020 | Nagendra Trasi |

ಬೀಜಿಂಗ್: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಯುತ್ತಿರುವ ನಡುವೆಯೇ ನೂತನ ಸೋಂಕು ರೋಗಿಯ ಶ್ವಾಸಕೋಶದಲ್ಲಿ 37 ದಿನಗಳ ಕಾಲ ಜೀವಂತವಾಗಿರುತ್ತದೆ ಎಂದು ಸಂಶೋಧನಾ ಲೇಖನವೊಂದು ತಿಳಿಸಿದೆ.

Advertisement

ಕೊರೊನಾ ಸೋಂಕು ಪೀಡಿತ ರೋಗಿಯ ಶ್ವಾಸಕೋಶದಲ್ಲಿ 37 ದಿನಗಳ ಕಾಲ ಜೀವಂತವಾಗಿರುವ ಜತೆಗೆ ಇದು ಹಲವು ವಾರಗಳವರೆಗೆ ರೋಗಾಣು ಹರಡಲಿದೆ ಎಂದು ವಿವರಿಸಿದೆ.

ಈ ಸೋಂಕು ರೋಗಾಣುವನ್ನು ನಿಗ್ರಹಿಸುವುದು ಎಷ್ಟು ಕಷ್ಟಕರ ಎಂಬುದು ತಿಳಿದು ಬಂದಿದೆ ಎಂದು ಕೊರೊನಾ ಸೋಂಕು ತಗುಲಿದ 20 ದಿನಗಳ ನಂತರವೂ ಬದುಕಿರುವ ರೋಗಿಯ ತಪಾಸಣೆ ನಡೆಸಿದ ಚೀನಾ ವೈದ್ಯರು ಬರೆದ ಲೇಖನದಲ್ಲಿ ವಿವರಿಸಿದ್ದಾರೆ.

ಈ ಹೊಸ ಕೊರೊನಾ ಸೋಂಕು ರೋಗ ಜಗತ್ತಿನ 118 ದೇಶಗಳಿಗೆ ವ್ಯಾಪಿಸಿದ್ದು, ಸುಮಾರು 1,25,000 ಜನರು ಸೋಂಕು ಪೀಡಿತರಾಗಿದ್ದಾರೆ. ಚೀನಾದ ವುಹಾನ್ ನಲ್ಲಿ ಮೊದಲು ಆರಂಭಗೊಂಡ ಕೊರೊನಾ ವೈರಸ್ ಇದೀಗ ವಿಶ್ವಾದ್ಯಂತ ಭೀತಿಯನ್ನು ಹುಟ್ಟಿಸಿದೆ.

ಕೊರೊನಾ ವೈರಸ್ ಇತರ ದೇಶಗಳಿಗೆ ಹಬ್ಬದಂತೆ ತಡೆಯಲು ಸ್ಥಳೀಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆದರೆ ಭಾರತ ಸೇರಿದಂತೆ ನೂರಾರು ದೇಶಗಳಿಗೆ ಕೊರೊನಾ ವೈರಸ್ ಹಬ್ಬಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next