Advertisement

ಸಮಸ್ತ ವಿಶ್ವಕ್ಕೆ ಹರಡಿದ ‘ನಮಸ್ತೆ’ಮಹತ್ವ

12:03 AM Mar 21, 2020 | Hari Prasad |

ಕೊರೊನಾ ಹರಡುತ್ತಿರುವ ಈ ಕಾಲಘಟ್ಟದಲ್ಲಿ ವ್ಯಕ್ತಿಗಳು ಪರಸ್ಪರ ಭೇಟಿಯಾದಾಗ ಕೈ ಕುಲುಕುವುದು ಬಿಟ್ಟು ಭಾರತೀಯ ಸಂಸ್ಕೃತಿ ಪರಂಪರೆಯ ದ್ಯೋತಕವಾದ ‘ನಮಸ್ತೆ’ ಹೇಳುವುದೇ ಲೇಸು ಎಂದು ಪ್ರಧಾನಿ ಮೋದಿ ನೀಡಿದ್ದ ಕರೆ, ಜೀವಭಯದಲ್ಲಿ ನರಳುತ್ತಿರುವ ವಿಶ್ವದ ಕಣ್ಣು ತೆರೆಸಿದೆ. ಅನೇಕ ದೇಶಗಳ ರಾಜಕೀಯ ನಾಯಕರು ಪ್ರಧಾನಿ ಕರೆಯನ್ನು ಅಳವಡಿಸಿಕೊಂಡಿದ್ದಾರೆ.

Advertisement

ಬ್ರಿಟನ್‌ನ ರಾಜಕುಮಾರ ಚಾರ್ಲ್ಸ್‌ ಅವರು, ನಾಯಕರೊಬ್ಬರಿಗೆ ಕೈ ಕುಲುಕಲು ಮುಂದಾಗಿ ತತ್‌ಕ್ಷಣವೇ ಅದನ್ನು ಹಿಂಪಡೆದು ನಮಸ್ತೆ ಹೇಳಿದ್ದಾರೆ. ಅವರ ಸಾಲಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರ್ಪಡೆಗೊಂಡಿದ್ದು, ಗುರುವಾರ ತಮ್ಮನ್ನು ಭೇಟಿ ಮಾಡಿದ ಐರ್ಲೆಂಡ್‌ನ‌ ಪ್ರಧಾನಿ ಲಿಯೋ ವರಾಡ್ಕರ್‌ರನ್ನು ನಮಸ್ತೆ ಮೂಲಕವೇ ಸ್ವಾಗತಿಸಿದ್ದಾರೆ.

ಇತ್ತೀಚೆಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ತಮ್ಮ ದೇಶೀಯರಿಗೆ ನಮಸ್ತೆ ಭಂಗಿ ಪಾಲಿಸುವಂತೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next