Advertisement

ಕೊರೊನಾ: ವಿಶ್ವದಾದ್ಯಂತ 7,007 ಜನರು ಬಲಿ: ಭಾರತದಲ್ಲಿ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆ

12:22 AM Mar 21, 2020 | Mithun PG |

ನವದೆಹಲಿ: ಇಡೀ ಜಗತ್ತಿಗೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ಸೋಂಕುವಿಗೆ ಒಟ್ಟಾರೆಯಾಗಿ 7,007 ಜನರು ಬಲಿಯಾಗಿದ್ದು, 1,75,536 ಜನರರಲ್ಲಿ ಈ ವೈರಾಣು ಇರುವುದು ದೃಢಪಟ್ಟಿದೆ.

Advertisement

ಭಾರತದಲ್ಲಿ ಈ ವೈರಸ್ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಈಗಾಗಲೇ 3 ಜನರು ಸಾವನ್ನಪ್ಪಿದ್ದಾರೆ. 125 ಮಂದಿಗೆ ಸೊಂಕು ತಗುಲಿರುವುದು ಖಚಿತವಾಗಿದೆ ಎಂದು ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಮಾತ್ರವಲ್ಲದೆ ದೇಶಾದ್ಯಂತ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಭಾರತದಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ತೆಲಂಗಾಣ,ದೆಹಲಿ ಸೇರಿದಂತೆ ಹಲವು ಭಾಗಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ 10 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ

ಇಟಲಿಯಲ್ಲಿ ಸೋಮವಾರ ಒಂದೇ ದಿನ 349 ಜನರು ಮೃತಪಟ್ಟಿದ್ದು, 3,233 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟಾರೆಯಾಗಿ ಈ ದೇಶದಲ್ಲಿ 28,000 ಜನರಿಗೆ ಸೋಂಕು ತಗುಲಿದೆ. ಚೀನಾದ ರೀತಿಯಲ್ಲೇ ಇಟಲಿಯಲ್ಲಿ ನಿರಂತರವಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

ಇರಾನ್ ನಲ್ಲಿ ಸೋಮವಾರ ಮೃತಪಟ್ಟವರ ಸಂಖ್ಯೆ 129ಕ್ಕೆ ಜಿಗಿದಿದೆ. ಚೀನಾದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದ್ದು 3,233 ಜನರು ಸಾವನ್ನಪ್ಪಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next