ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕುನಿಯಂತ್ರಿಸಲು ಸರ್ಕಾರ ಜನತಾ ಕರ್ಫ್ಯೂಜಾರಿಗೊಳಿಸಿದೆ. ಮತ್ತೂಂದೆಡೆ ಬೆಂಗಳೂರು ಮತ್ತಿತರಪ್ರದೇಶಗಳಿಂದ ವಲಸೆ ಬರುವ ಕಾರ್ಮಿಕರ ಮೇಲೆನಿಗಾ ಇಡಲು ಜಿಲ್ಲೆಯ 157 ಗ್ರಾಪಂನಲ್ಲಿ ಕೊರೊನಾಕಾರ್ಯಪಡೆ ರಚಿಸಲಾಗಿದೆ.
ಕೊರೊನಾ ಮೊದಲ ಅಲೆಯಲ್ಲಿ ಅದರಲ್ಲೂವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸೋಂಕುನಿಯಂತ್ರಿಸಲು ಕಾರ್ಯಪಡೆಗಳನ್ನು ರಚಿಸಲಾಗಿತ್ತು.ಇದೀಗ ಎರಡನೇ ಅಲೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮತ್ತೂಮ್ಮೆ ಕಾರ್ಯಪಡೆ ಸಕ್ರಿಯವಾಗಿದೆ.
ಗ್ರಾಪಂ ಮಟ್ಟದಲ್ಲಿ ಪಂಚಾಯ್ತಿಅಧ್ಯಕ್ಷರು ಒಳಗೊಂಡಂತೆ ಕಾರ್ಯಪಡೆ ರಚಿಸಲಾಗಿದೆ.ಮತ್ತೂಂದೆಡೆ ಪ್ರತಿ ಗ್ರಾಮಕ್ಕೆ ಗ್ರಾಪಂ ಸದಸ್ಯರನೇತೃತ್ವದಲ್ಲಿ ಕಾರ್ಯಪಡೆ ರಚಿಸಿ ಕೊರೊನಾ ಸೋಂಕು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ.
ವಲಸಿಗರ ಮೇಲೆ ನಿಗಾ:ಗ್ರಾಮೀಣ ಪ್ರದೇಶದಲ್ಲಿ ರಚನೆಯಾಗಿರುವ ಕೊರೊನಾ ಕಾರ್ಯಪಡೆಯ ಸದಸ್ಯರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು,ಜನತಾ ಕರ್ಫ್ಯೂ ವಿಧಿ ಸಿದ ನಂತರ ಬೆಂಗಳೂರು ಮತ್ತಿತರ ಪ್ರದೇಶಗಳಿಂದ ವಲಸೆ ಬಂದಿರುವ ಕಾರ್ಮಿಕರು ಹಾಗೂ ಕುಟುಂಬ ಸದಸ್ಯರ ಮೇಲೆ ವಿಶೇಷ ನಿಗಾಇಟ್ಟು ಸರ್ಕಾರದ ಮಾರ್ಗಸೂಚಿಗಳಂತೆ ವಲಸೆ ಬಂದಿರುವ ಪ್ರತಿಯೊಬ್ಬರು ಹೋಮ್‌ಕ್ವಾರಂಟೈನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ.
ಕೊರೊನಾ ಬಗ್ಗೆ ವ್ಯಾಪಕ ಅರಿವು: ಕೊರೊನಾ 2ನೇಅಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೊರೊನಾಕಾರ್ಯಪಡೆಗಳ ಸದಸ್ಯರು ಪ್ರತಿಯೊಂದು ಗ್ರಾಮದಲ್ಲಿಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿಪಾಲಿಸುವಂತೆ ಅರಿವು ಮೂಡಿಸುವ ಕೆಲಸವನ್ನುಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ.
ವಿಶೇಷವಾಗಿಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಮನೆಯಿಂದಅನಗತ್ಯವಾಗಿ ಹೊರ ಹೋಗಬಾರದು, ಸಾಮಾಜಿಕಅಂತರ ಕಾಯ್ದಕೊಳ್ಳಬೇಕು, ಸ್ಯಾನಿಟೈಸರ್ ಬಳಕೆಮಾಡಬೇಕು, 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿಲಸಿಕೆ ಪಡೆದುಕೊಳ್ಳಬೇಕೆಂದು ವ್ಯಾಪಕವಾಗಿ ಅರಿವುಮೂಡಿಸುತ್ತಿದ್ದಾರೆ.
ಎಂ.ಎ.ತಮೀಮ್ ಪಾಷಾ