Advertisement

ಕೊರೊನಾ ಸೋಂಕು ತಗ್ಗಿದರೂ ಗಡಿಯಲ್ಲಿಲ್ಲ ಸಡಿಲಿಕೆ: ಭಾಗಪ್ಪ

06:03 PM Nov 10, 2021 | Team Udayavani |

ಮಾದನಹಿಪ್ಪರಗಿ: ಸರ್ಕಾರ ಲಾಕ್‌ಡೌನ್‌ ವೇಳೆ ಜುಲೈ ತಿಂಗಳಲ್ಲಿ ಹೊರಡಿಸಿದ ಆದೇಶ ಇನ್ನೂ ಚಾಲ್ತಿಯಲ್ಲಿ ಇರುವುದರಿಂದ ಮಹಾರಾಷ್ಟ್ರ-ಕರ್ನಾಟಕ ಗಡಿಭಾಗಗಳ ಚೆಕ್‌ ಪೋಸ್ಟ್‌ಗಳಲ್ಲಿ ಖಾಸಗಿ ವಾಹನ ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಿರಿಕಿರಿ ಯಾಗಿದೆ ಎಂದು ಝಳಕಿ ಗ್ರಾಮದ ಯುವ ಮುಖಂಡ ಭಾಗಪ್ಪ ಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಚೆಕ್‌ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಹಾಗೂ ಆರೋಗ್ಯ ಸಿಬ್ಬಂದಿಯಿಂದ ದಿನನಿತ್ಯ ಕಿರಿಕಿರಿ ಹೆಚ್ಚುತ್ತಿದೆ. ಕೊರೊನಾ ಪ್ರಮಾಣ ತಗ್ಗಿದ್ದು, ಗಡಿಯಲ್ಲಿ ನಿಯಮಗಳ ಸಡಿಲಿಕೆ ಮಾಡಬೇಕು. ಸಂಚಾರ ಮುಕ್ತವಾಗಿಸಬೇಕು ಎಂದು ಕೋರಿದ್ದಾರೆ.

ವ್ಯಾಪಾರ-ವ್ಯವಹಾರಕ್ಕೆ ಸೊಲ್ಲಾಪುರ ಜಿಲ್ಲೆಯೊಂದಿಗೆ ಈ ಭಾಗದ ಜನರು ಹೆಚ್ಚು ಒಡನಾಟ ಹೊಂದಿದ್ದಾರೆ. ಬೀದರ, ವಿಜಯಪುರ ಕಲಬುರಗಿ ಜಿಲ್ಲೆಯ ಸಾರಿಗೆ ಸಂಸ್ಥೆ ಬಸ್ಸುಗಳು ಸಂಚರಿಸುತ್ತಿವೆ. ಅವರಿಗೆ ಅಲ್ಲಿನ ಆಡಳಿತ ಆರಿrಪಿಸಿಆರ್‌ ಪರೀಕ್ಷೆ ವರದಿ ಕೇಳಿಲ್ಲ. ಆದರೂ ಕಲಬುರಗಿ ಜಿಲ್ಲೆಯಲ್ಲಿನ ಗಡಿಗಳಲ್ಲಿ ಸ್ವಂತ ವಾಹನಗಳಲ್ಲಿ ಸಂಚರಿಸುವವರಿಗೆ ಮಾತ್ರ ಏಕೆ ಈ ನಿಯಮಗಳು ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಅವರನ್ನು ಸಂಪರ್ಕಿಸಿದಾಗ ಖಜೂರಿ-ಹಿರೋಳಿ-ಮಾದನಹಿಪ್ಪರಗಿ ಗಡಿ ಚೆಕ್‌ ಪೋಸ್ಟ್‌ಗಳಲ್ಲಿ ಜಿಲ್ಲಾಧಿಕಾರಿ ಆದೇಶ ಬರುವ ವರೆಗೂ ಹೀಗೆ ನಿಯಮಗಳು ಜಾರಿ ಇರಲಿವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next