Advertisement

ಶೃಂಗೇರಿ ಶಾಸಕರ ಪುತ್ರಿ ವಿವಾಹಕ್ಕೂ ಕೊರೊನಾ ಬಿಸಿ

11:41 PM Mar 14, 2020 | Lakshmi GovindaRaj |

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರ ಮಗಳ ವಿವಾಹ ಸಮಾರಂಭಕ್ಕೂ ಕೊರೊನಾ ಬಿಸಿ ಮುಟ್ಟಿದೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ರಾಜೇ ಗೌಡ, ತಮ್ಮ ಮಗಳು ಡಾ|ಸಂಜನಾ ಮತ್ತು ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್‌ ಅವರ ಪುತ್ರ ವಚನ್‌ ಅವರ ವಿವಾಹ ಸಮಾರಂಭ ಮಾ.19ಕ್ಕೆ ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಬೇಕಿತ್ತು.

Advertisement

ವಿವಾಹ ಸಮಾರಂಭಕ್ಕೆ ಸಾವಿರಾರು ಜನ ಭಾಗ ವಹಿ ಸುವ ನಿರೀಕ್ಷೆ ಇತ್ತು. ಈಗಾಗಲೇ ಆಹ್ವಾನ ಪತ್ರಿಕೆ ಕೂಡ ಹಂಚಲಾಗಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಹೆಚ್ಚಿನ ಜನರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಸದೆ ಸರಳವಾಗಿ ನಡೆಸಲಾಗುವುದು.

ಮಾ.18ರಂದು ಬುಧವಾರ ವಿವಾಹದ ದೇವತಾ ಕಾರ್ಯ ಹಾಗೂ ಮಾ.19ರಂದು ಗುರುವಾರ ವಿವಾಹ ಕಾರ್ಯಕ್ರಮ ಸರಳವಾಗಿ ನಡೆಯಲಿದೆ ಎಂದು ತಿಳಿಸಿದರು. ವರನ ತಂದೆ ಅತ್ತಿಕಟ್ಟೆ ಜಗನ್ನಾಥ್‌ ಮಾತನಾಡಿ, ಮಾ.21ರಂದು ಚಿಕ್ಕಮಗಳೂರು ಕ್ಲಬ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಆರಕ್ಷತೆಯನ್ನು ಮುಂದೂಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next