Advertisement

ಜಿಲ್ಲೆಯಲ್ಲಿ ಕೊರೊನಾ ಮಹಾ ಆರ್ಭಟ

12:54 PM Jan 23, 2022 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆ ಆರ್ಭಟಿಸುತ್ತಿದ್ದು, ಶನಿವಾರ ಬರೊಬ್ಬರಿ 536 ಜನರಿಗೆ ಸೋಂಕು ದೃಢಪಡುವ ಮೂಲಕ ಜಿಲ್ಲೆಯ ಜನರಲ್ಲಿ ಆತಂಕ ತರಿಸಿದೆ. ಮೊದಲೆರಡು ಅಲೆಗಿಂತ 3ನೇ ಅಲೆಯಲ್ಲೇ ಇಷ್ಟೊಂದು ಸೋಂಕು ದೃಢಪಟ್ಟಿದ್ದು ಇದೇ ಮೊದಲಾಗಿದೆ.

Advertisement

ಜನತೆ ಕೋವಿಡ್‌ ನಿಯಮ ಪಾಲಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಿಡಾಯಿಸಲಿದೆ. ಕಳೆದ ಕೆಲ ದಿನಗಳಿಂದ ಎರಡಂಕಿಯಲ್ಲಿದ್ದ ಜಿಲ್ಲೆಯ ಕೊರೊನಾ ಸೋಂಕಿತರ ಪ್ರಮಾಣವು ವಾರದಿಂದ ಮೂರಂಕಿ ತಲುಪಿ ಆರ್ಭಟಿಸುತ್ತಿದೆ. ದಿನೇ ದಿನೆ ಸೋಂಕಿನ ಪ್ರಮಾಣವೂ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತಕ್ಕೂ ಸ್ವಲ್ಪ ಕಸಿವಿಸಿಯನ್ನುಂಟು ಮಾಡಿದೆ.

ಇಷ್ಟಾದರೂ ಜನರು ಆಸ್ಪತ್ರೆಗೆ ದಾಖಲಾಗದೇ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಶನಿವಾರ ದೃಢಪಟ್ಟ ಸೋಂಕಿನ ಲೆಕ್ಕಾಚಾರದ ಪೈಕಿ ಗಂಗಾವತಿ ತಾಲೂಕಿನಲ್ಲಿ 211 ಜನರಿಗೆ ಸೋಂಕು ದೃಢಪಟ್ಟಿದ್ದರೆ, ಕೊಪ್ಪಳ ತಾಲೂಕಿನಲ್ಲಿ 122, ಕುಷ್ಟಗಿ ತಾಲೂಕಿನಲ್ಲಿ 108, ಯಲಬುರ್ಗಾ ತಾಲೂಕಿನಲ್ಲಿ 95 ಜನರು ಸೇರಿ 536 ಜನರಿಗೆ ಸೋಂಕು ದೃಢಪಟ್ಟಿದೆ. ಕಳೆದ ಮೊದಲ ಹಾಗೂ 2ನೇ ಅಲೆಯಲ್ಲಿ ಒಂದೇ ದಿನ ಇಷ್ಟೊಂದು ಜನರಿಗೆ ಸೋಂಕು ತಗುಲಿದ ಉದಾಹರಣೆಯಿಲ್ಲ. ಆದರೆ ಈ 3ನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಜನರಿಗೆ ಒಂದೇ ದಿನದಲ್ಲಿ ಜನರಿಗೆ ಸೋಂಕು ತಗುಲಿದೆ.

3ನೇ ಅಲೆಯಲ್ಲಿ ಮಕ್ಕಳಿಗೆ ಸೊಂಕು: ಜಿಲ್ಲೆಯಲ್ಲಿ ಮಕ್ಕಳಿಗೆ 3ನೇ ಅಲೆಯಲ್ಲಿ ಸೋಂಕು ದೃಢಪಡುವ ಪ್ರಮಾಣ ಹೆಚ್ಚಾಗಿದೆ. ಶನಿವಾರ ದೃಢಪಟ್ಟ 536 ಸೋಂಕಿತರಲ್ಲಿ 160 ಸೋಂಕಿತರು 18 ವರ್ಷದೊಳಗಿನ ಮಕ್ಕಳಿದ್ದಾರೆ. ಇನ್ನು ಜನವರಿ 1ರಿಂದ ಶನಿವಾರದವರೆಗೂ ಬರೊಬ್ಬರಿ 484 ಮಕ್ಕಳಿಗೆ ಸೋಂಕು ತಗುಲಿದೆ. ಉಳಿದವರು ವಯಸ್ಕರರಾಗಿದ್ದಾರೆ. ಮನೆ ಆರೈಕೆ: ಸೋಂಕು ದೃಢಪಡುವ ಪ್ರಮಾಣ ಹೆಚ್ಚಾಗಿದ್ದರೂ ಬಹುಪಾಲು ಜನರು ಮನೆಯಲ್ಲೇ ಚಿಕಿತ್ಸೆ ಪಡೆಯಲು ಇಚ್ಛೆಪಡುತ್ತಿದ್ದಾರೆ.

ಅಲ್ಲದೇ, ಸರ್ಕಾರ ಸಹ ತೀವ್ರತರನಾದ ಆರೋಗ್ಯ ಸಮಸ್ಯೆ ಎದುರಿಸುವ ವ್ಯಕ್ತಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ ಎಂದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಹ ಸೋಂಕು ದೃಢಪಟ್ಟ ವ್ಯಕ್ತಿಗಳ ಆರೋಗ್ಯದ ಸ್ಥಿತಿಗತಿ ಅವಲೋಕಿಸಿ ಅದಕ್ಕೆ ತಕ್ಕಂತೆ ಮನೆಯಲ್ಲೇ ಔಷ ಧಿ ಕೊಟ್ಟು ಅವರನ್ನು ಹೋಂ ಐಸೋಲೇಷನ್‌ಗೆ ಒಳಗಾಗುವಂತೆ ಸೂಚಿಸುತ್ತಿದೆ. ತೀವ್ರ ತೊಂದರೆ ಎದುರಿಸುವ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವರೆಗೂ 1494 ಜನರು ಹೋಂ ಐಸೋಲೇಷನ್‌ಗೆ ಒಳಗಾಗಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next