Advertisement
ಕೊರೊನಾ ವೈರಸ್ ವಿಶ್ವದಾದ್ಯಂತ ಹರಡಿ ಬಳಿಕ ರಾಜ್ಯಕ್ಕೂ ಕಾಲಿಟ್ಟಿರುವ ವೈರಸ್‌ನಿಂದಾಗಿ ಮತ್ತಷ್ಟು ಭಯಕ್ಕೆ ಒಳಗಾಗಿರುವ ಸಾರ್ವಜನಿಕರು ಇದಕ್ಕೆ ಔಷಧಿ ಇಲ್ಲವೆ ಇದನ್ನು ಕೊಲ್ಲುವ ಶಕ್ತಿ ಯಾವ ದೇಶಕ್ಕೆ ಇದೆ. ಇದರ ಔಷಧಿ ಶೀಘ್ರದಲ್ಲೇ ಮಾರುಕಟ್ಟೆಗೆ ಬಂದು ವೈರಸ್ ಒಳಗಾಗದವರಿಗೆ ಸೂಕ್ತ ಚಿಕಿತ್ಸೆ ಲಭ್ಯಗೊಂಡು ಪ್ರಾಣ ಭಯದಿಂದ ಪಾರಾಗಲು ಸಾಧ್ಯವೇ ಎಂದು ಎಲ್ಲೆಡೆ ಚರ್ಚೆ ಭರಾಟೆಯಾಗಿ ನಡೆಯುತ್ತಿದೆ.
Related Articles
Advertisement
ಔಷಧಿ ಅಂಗಡಿಗಳ ಮೇಲೆ ನಿಗಾ ಅಗತ್ಯ: ಕೊರೊನಾ ವೈರಸ್‌ನಿಂದ ಭಯಭೀತರಾಗಿರುವ ಸಾರ್ವಜನಿಕರು, ವೈರಸ್‌ನಿಂದ ತಪ್ಪಿಸಿಕೊಳ್ಳಲು ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡುವ ಮಾಸ್ಕ್ (ಮುಖಗವಸು), ಹ್ಯಾಂಡ್ ಸ್ಯಾನಿಟೈಜರ್‌ಗೆ ಬೇಡಿಕೆ ಹೆಚ್ಚಾಗಿದೆ. ಕೇವಲ ಔಷಧಿ ಅಂಗಡಿಗಳಲ್ಲಿ ನಿಗದಿ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಔಷಧಿ ಅಂಗಡಿಗಳ ಮೇಲೂ ನಿಗಾ ಇಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆ ಮಾರಾಟ ಮಾಡುವವರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
ನಿಗದಿಪಡಿಸಿದ ಬೆಲೆಗೆ ಮಾರಾಟ: ಕೊರೊನಾವೈರಸ್ ಹರಡದಂತೆ ಸಾರ್ವಜನಿಕರು ಮತ್ತು ಮಕ್ಕಳು ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಬಳಕೆ ಮಾಡಬೇಕು. ಸಾಮಗ್ರಿಗಳ ಮೇಲೆ ನಿಗದಿಪಡಿಸಿದ ಬೆಲೆಗೆ ಮಾರಾಟವಾಗುತ್ತಿದೆ. ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಎಂದು ಕೇವಲ ಔಷಧಿ ಅಂಗಡಿಗಳ ಮೇಲೆ ವದಂತಿಗಳು ಹರಡಿದೆ ಎಂದು ಸಪ್ತಗಿರಿ ಮೆಡಿಕಲ್ ಮಾಲೀಕ ಸುದರ್ಶನ್ ಕುಮಾರ್ ಹೇಳಿದ್ದಾರೆ.
ನಗರಸಭೆಗೆ ಸೇರಿದ 31 ವಾರ್ಡ್‌ಗಳಲ್ಲಿ ಕೊರೊನಾ ವೈರಸ್ ಬಗ್ಗೆ ಆಟೋಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸ್ವತ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ನಗರಸಭೆ ಕೈಗೊಳ್ಳುವ ಎಲ್ಲಾ ಸ್ವತ್ಛತೆಯ ಕಾರ್ಯಗಳಲ್ಲಿ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ತಡೆಯಲು ಸಾಧ್ಯ.-ನಾಗಶೆಟ್ಟಿ, ನಗರಸಭೆ ಪೌರಾಯುಕ್ತ ಕೊರೊನಾ ವೈರಸ್ ಹರಡದಂತೆ ಎಲ್ಲೆಡೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೊನಾ ವೈರಸ್ ಯಾರಿಗಾದರೂ ತಗುಲಿದ ಪಕ್ಷದಲ್ಲಿ ಅಂತಹವರಿಗೆ ತುರ್ತು ಚಿಕಿತ್ಸೆಗಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಔಷಧಿ ಅಂಗಡಿಗಳಲ್ಲಿ ಮಾಸ್ಕ್ ಮತ್ತು ಇನ್ನಿತರ ಉಪಕರಣಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ನೀಡಿದ ಕೂಡಲೇ ಅಂತಹ ಔಷಧಿ ಅಂಗಡಿಗಳ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು.
-ಡಾ.ಗೋಪಾಲ್, ತಾಲೂಕು ಆರೋಗ್ಯಾಧಿಕಾರಿ * ಡಿ.ನಟರಾಜು