ನವದೆಹಲಿ: ಭಾರತದ ಲಕ್ಷಾಂತರ ಸ್ಮಾರ್ಟ್ ಫೋನ್ ಬಳಕೆದಾರರ ಫೋನ್‌ಬುಕ್‌ಗಳಲ್ಲಿ ಡಿಫಾಲ್ಟ್ ಆಗಿ ಆಧಾರ್‌ನ ಹಳೆ ಟೋಲ್ ಫ್ರೀ ಹೆಲ್ಪ್ಲೈನ್ ಸಂಖ್ಯೆ ಸೇರ್ಪಡೆಗೊಂಡಿದೆ. ತಮ್ಮ ಅನುಮತಿಯಿಲ್ಲದೆ 1800 -300 -1947 ನಂಬರ್ ಹೇಗೆ ಸೇರ್ಪಡೆಗೊಂಡಿದೆ ಎಂದು ಚಿಂತಿತರಾದ ಸಾವಿರಾರು ಮಂದಿ ಟ್ವೀಟ್ ಮೂಲಕ ಆಧಾರ್ ಕಥೆ ಹಂಚಿಕೊಂಡಿದ್ದಾರೆ. ತಮ್ಮ ಫೋನ್‌ಬುಕ್‌ಗಳ ಸ್ಕ್ರೀನ್ ಶಾಟ್ ಕಳಿಸಿದ್ದಾರೆ. ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಅವರ ಆಧಾರ್ ಸೋರಿಕೆ ಸವಾಲು- ಜವಾಬಿನ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಟ್ವಿಟರ್‌ನಲ್ಲಿ ಮೊತ್ತೂಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದೆ.
ಫ್ರೆಂಚ್ ಭದ್ರತಾ ತಜ್ಞ ಎಲಿಟ್ ಆಲ್ಡೆ ರ್ಸನ್ ಅವರು ಟ್ವಿಟರ್‌ನಲ್ಲಿ, ಭಿನ್ನ ಟೆಲಿಕಾಂ ಸೇವಾದಾತರೊಂದಿಗಿನ, ಆಧಾರ್ ಕಾರ್ಡ್ ಹೊಂದಿರುವ ಹಾಗೂ ಹೊಂದಿಲ್ಲದ, ಎಂಆಧಾರ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡ ಹಾಗೂ ಮಾಡಿರದ ಅನೇಕ ಜನರು ತಮ್ಮ ಅರಿವಿಲ್ಲದೆ ತಮ್ಮ ಸಂಪರ್ಕ ಪಟ್ಟಿಗೆ ನಿಮ್ಮ ಸಂಖ್ಯೆ ಸೇರ್ಪಡೆಗೊಂಡಿರುವುದನ್ನು ಗಮನಿಸಿದ್ದಾರೆ. ಇದು ಯಾಕೆಂದು ನೀವು ಹೇಳಬಲ್ಲಿರಾ? ಎಂಬುದಾಗಿ ಯುಐಡಿಎಐಗೆ ಪ್ರಶ್ನಿಸಿದ್ದಾರೆ.
ಯುಐಡಿಎಐ ಸ್ಪಷ್ಟೀಕರಣ: ದೇಶಾದ್ಯಂತ ಈ ಕುರಿತು ದೂರುಗಳು ಕೇಳಿ ಬರುತ್ತಿದ್ದಂತೆ, ಪ್ರತಿಕ್ರಿಯೆ ನೀಡಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ತಾನು ಯಾವುದೇ ಟೆಲಿಕಾಂ ಆಪರೇಟರ್, ಫೋನ್ ತಯಾರಕರು ಅಥವಾ ಗೂಗಲ್‌ಗೆ ತನ್ನ ಟೋಲ್ ಫ್ರೀ ಸಂಖ್ಯೆಯನ್ನು ಸೇರ್ಪಡೆ ಮಾಡುವಂತೆ ನಿರ್ದೇಶನ ನೀಡಿಲ್ಲ ಎಂದಿದೆ. 1800 -300 -1947 ಸಂಖ್ಯೆ ಹಳೆಯ ಹೆಲ್ಪ್ಲೈನ್ ಆಗಿದ್ದು, ಸದ್ಯ ಚಾಲ್ತಿಯಲ್ಲಿಲ್ಲ. 1947 ಹೊಸ ಸಂಖ್ಯೆಯಾಗಿದೆ. ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಪಟ್ಟಭದ್ರ ಹಿತಾಸ ಕ್ತಿಗಳು ಯತ್ನಿಸುತ್ತಿರಬಹುದು ಎಂದು ಟ್ವಿ ಟ ರ್‌ನಲ್ಲಿ ಆಧಾರ್ ಪ್ರಾಧಿಕಾರ ಹೇಳಿಕೆ ನೀಡಿದೆ.
ಫೋನ್‌ಬುಕ್ ಪಟ್ಟಿಯಲ್ಲಿ ಕಾಣಿಸಿಕೊಂಡ ಆಧಾರ್ ಹಳೆಯ ಹೆಲ್ಪ್ ಲೈನ್ ಸಂಖ್ಯೆ
ಗೂಗಲ್, ಟೆಲಿಕಾಂ ಸಂಸ್ಥೆಗಳಿಗೆ ಸೂಚನೆ ನೀಡಿಲ್ಲ ಎಂದ ಯುಐಡಿಎಐ