ಹೊಸದಿಲ್ಲಿ: ಭಯೋತ್ಪಾದನೆ ಎಂಬುದು ಪ್ರತಿದಿನ ಜಗತ್ತಿಗೆ ಅಪಾಯ ತಂದೊಡ್ಡುತ್ತಿದೆ. ಅದರ ಹೊರೆಯನ್ನು ಇಳಿಸಲು ಜಾಗತಿಕ ಪ್ರಯತ್ನ ಅಗತ್ಯ. ಭಯೋ ತ್ಪಾದನೆಯ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ…’
ರವಿವಾರಕ್ಕೆ ಸರಿಯಾಗಿ 9 ವರ್ಷಗಳ ಹಿಂದೆ ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಪ್ರಾಣತೆತ್ತ ಹುತಾತ್ಮರನ್ನು ಸ್ಮರಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಮಾತಿದು. ತನ್ನ ಮಾಸಿಕ ರೇಡಿಯೋ ಕಾರ್ಯಕ್ರಮ
“ಮನ್ ಕಿ ಬಾತ್’ನಲ್ಲಿ ಈ ವಿಚಾರ ಪ್ರಸ್ತಾವಿಸಿದ ಪ್ರಧಾನಿ, ಭಾರತವು 4 ದಶಕಗಳಿಂದಲೂ ಉಗ್ರವಾದದ ಕುರಿತು ಜಗತ್ತಿನ ಗಮನ ಸೆಳೆಯುತ್ತಲೇ ಬಂದಿದೆ. ಆದರೆ ಆರಂಭದಲ್ಲಿ ನಮ್ಮ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿರಲಿಲ್ಲ. ಈಗ ಎಲ್ಲರೂ ಎಚ್ಚೆತ್ತು ಕೊಳ್ಳುತ್ತಿದ್ದಾರೆ. ಏಕೆಂದರೆ, ಈಗ ಭಯೋತ್ಪಾ ದನೆಯು ಅವರ ಮನೆಗಳ ಬಾಗಿಲುಗಳನ್ನೂ ತಟ್ಟುತ್ತಿದೆ. ಹಾಗಾಗಿ, ಇದನ್ನು ಅತಿದೊಡ್ಡ ಸವಾಲು ಎಂದು ಎಲ್ಲರೂ ಪರಿಗಣಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ’ ಎಂದರು. ಇದೇ ವೇಳೆ, ಮುಂಬಯಿ ದಾಳಿಯಲ್ಲಿ ಮಡಿದ ಪೊಲೀಸರು, ಹುತಾತ್ಮರಾದ ಯೋಧರು, ನಾಗರಿಕರ ತ್ಯಾಗಗಳನ್ನು ದೇಶ ಎಂದೂ ಮರೆಯುವುದಿಲ್ಲ ಎಂದರು.
ನಾಗರಿಕರು ಹಾಗೂ ಆಡಳಿತವು ಸಂವಿ ಧಾನದ ಆಶಯಗಳಂತೆ ಕೆಲಸ ಮಾಡಬೇಕು. ಯಾರೂ ಯಾರಿಗೂ ಹಾನಿ ಉಂಟುಮಾಡ ಬಾರದು ಎಂಬ ಸಂವಿಧಾನದ ಆಶಯವನ್ನು ಪಾಲಿಸಬೇಕು ಎಂದೂ ಹೇಳುವ ಮೂಲಕ ಮೋದಿ, ಪರೋಕ್ಷವಾಗಿ “ಪದ್ಮಾವತಿ’ ಸಿನೆಮಾ ವಿವಾದ ಹಾಗೂ ನಟ-ನಟಿಯರಿಗೆ ಬೆದರಿಕೆ ಹಾಕುತ್ತಿರುವವರಿಗೆ ಸಂದೇಶ ರವಾನಿಸಿದರು.
ಯೂರಿಯಾ ಬಳಕೆ ನಿಲ್ಲಿಸಿ: ಡಿ. 5ರಂದು ಆಚರಿಸಲಾಗುವ ವಿಶ್ವ ಭೂ ದಿನವನ್ನೂ ಪ್ರಸ್ತಾವಿಸಿದ ಪ್ರಧಾನಿ, ಮಣ್ಣಲ್ಲಿ ಫಲವತ್ತತೆ ಇಲ್ಲದಿದ್ದರೆ ಏನಾಗಬಹುದು ಎಂದು ಯೋಚಿಸಿ ನೋಡಿ. ಯೂರಿಯಾ ಬಳಕೆ ಭೂಮಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 2022ರೊಳಗೆ ಪ್ರಸ್ತುತ ಬಳಸು ತ್ತಿರುವ ಯೂರಿಯಾ ಪ್ರಮಾಣವನ್ನು ಅರ್ಧ ಕ್ಕಿಳಿಸುತ್ತೇವೆ ಎಂದು ಎಲ್ಲ ರೈತರೂ ಶಪಥ ಮಾಡಬೇಕು. ಆಗಷ್ಟೇ ಭೂಮಿ ಯನ್ನು ನಾವು ಉಳಿಸಲು ಸಾಧ್ಯ ಎಂದು ಹೇಳಿದರು. ಮನ್‌ಕೀ ಬಾತ್‌ನಲ್ಲಿ ಕರ್ನಾಟಕದ ಮಕ್ಕಳನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿಕೊಂಡರು.