ದೊಡ್ಡಬಳ್ಳಾಪುರ: ರೈತರಿಗೆ ಸರ್ಕಾರದ ಸಾಲಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತೆಮಾಡುವ ಉದ್ದೇಶದಿಂದ ತಾಲೂಕಿನ ಪ್ರತಿಹೋಬಳಿ ಮಟ್ಟದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಮತ್ತು ಎಟಿಎಂಗಳನ್ನು ತೆರೆಯಲಾಗುತ್ತಿದೆಎಂದು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕಜಿ.ಚುಂಚೇಗೌಡ ಹೇಳಿದರು.
ತಾಲೂಕಿನ ಕನಸವಾಡಿಯಲ್ಲಿ ಡಿಸಿಸಿಬ್ಯಾಂಕಿನ 32ನೇ ಶಾಖೆ ಉದ್ಘಾಟಿಸಿ ಮಾತನಾಡಿ, ರೈತರ ಜೀವನಕ್ಕೆ ಹೈನುಗಾರಿಕೆ ಆಶ್ರಯವಾಗಿದೆ. ಹಾಲಿನ ಡೇರಿಗೆ ಹಾಕಿದ ಹಾಲಿನಹಣವನ್ನು ಪಡೆದುಕೊಳ್ಳಲು ಪ್ರತಿಯೊಬ್ಬರೈತರೂ ತಾಲೂಕು ಕೇಂದ್ರಕ್ಕೆ ಹೋಗುವಪರಿಸ್ಥಿತಿ ಇತ್ತು.ಈತೊಂದರೆಯನ್ನು ತಪ್ಪಿಸಲಾಗುತ್ತಿದೆ ಎಂದರು.
ಕಡಿಮೆ ಬಡ್ಡಿ ದರದಲ್ಲಿ ಸಾಲ: ನೂತನ ಶಾಖೆಉದ್ಘಾಟಿಸಿದ ಶಾಸಕ ಟಿ.ವೆಂಕಟರಮಣಯ್ಯಮಾತನಾಡಿ, ಜೆಡಿಎಸ್- ಕಾಂಗ್ರೆಸ್ ಮೈತ್ರಿಸರ್ಕಾರ ರೈತರ ಸಾಲವನ್ನು ಸಂಪೂರ್ಣವಾಗಿಮನ್ನಾಮಾಡಿತ್ತು. ಹಾಲಿಗೆ ಪ್ರತಿ ಲೀಟರ್‌ಪೊ›çತ್ಸಾಹಧನವನ್ನುಸಕಾಲಕ್ಕೆಹೆಚ್ಚಿಸಲಾಗುತ್ತಿತ್ತು.ಆದರೆ, ಬಿಜೆಪಿ ಸರ್ಕಾರ ರೈತರಿಂದ ಖರೀದಿಮಾಡಿರುವ ರಾಗಿ ಹಣವನ್ನು ಬಿಡುಗಡೆಮಾಡಿಲ್ಲ. ಸಹಕಾರ ಬ್ಯಾಂಕ್‌ಗಳು ರೈತಪರವಾಗಿದೆ.
ಕಡಿಮೆ ಬಡ್ಡಿ ದರದಲ್ಲಿ ಸಾಲನೀಡುತ್ತಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.ಡಿಸಿಸಿ ಬ್ಯಾಂಕ್ ಕಾರ್ಯನಿರ್ವಾಹಕ ಅಧಿಕಾರಿ ನಂಜುಂಡೇಗೌಡ ಮಾತನಾಡಿ, ಜಿಲ್ಲೆಯಲ್ಲಿ 710 ಕೋಟಿ ಕೃಷಿ ಸಾಲ ವಿತರಣೆಮಾಡುವ ಗುರಿ ಹೊಂದಲಾಗಿದೆ.27ಕೋಟಿಕೃಷಿಯೇತರ ಸಾಲ ನೀಡಲಾಗಿದೆ ಎಂದರು.
ರೈತರಿಗೆ ದಿನಸಿ ಕಿಟ್‌ಹಾಗೂ ಚೆಕ್‌ವಿತರಣೆಮಾಡಲಾಯಿತು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹನುಮಂತಯ್ಯ,ಉಪಾಧ್ಯಕ್ಷ ಪಟ್ಟಾಭಿರಾಮಯ್ಯ, ಸಹಕಾರಸಂಘಗಳ ಉಪನಿಬಂಧಕಿ ಸಂಧ್ಯಾ,ಬಮೂಲ್ ನಿರ್ದೇಶಕ ಕೇಶವಮೂರ್ತಿ,ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷಿ ¾àನಾರಾಯಣ,ಟಿಎಪಿಎಂಸಿಎಸ್‌ಅಧ್ಯಕ್ಷಡಿ.ಸಿದ್ದರಾಮಯ್ಯ, ಕನಸವಾಡಿ ಗ್ರಾಪಂಅಧ್ಯಕ್ಷ ವಿಜಯಕುಮಾರ್, ಮುಖಂಡರಾದಸಿ.ಡಿ.ಸತ್ಯನಾರಾಯಣಗೌಡ, ಆರ್.ದಯಾನಂದಸ್ವಾಮಿ ಹಾಜರಿದ್ದರು.