Advertisement
ಪಟ್ಟಣದ ತಾಪಂ ಸಭಾಂಗಣದಲ್ಲಿ ಕೆಸಿಫ್ ಅಧಿಕಾರಿಗಳ ಹಾಗೂ ಭೂಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭೂಮಾಲೀಕರು ಸಹಕಾರ ಕೊಟ್ಟರೆ ಕೆಸಿಫ್ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿಲು ಬದ್ಧನಾಗಿದ್ಧೇನೆ. ನೀವೆಲ್ಲ ಬೇಡ ಎಂದರೆ ನನ್ನ ತಕರಾರು ಏನೂ ಇಲ್ಲ. ಕೆಸಿಫ್ ಅಧಿಕಾರಿಗಳು ಜಂಟಿ ಮೆಸರ್‌ವೆುಂಟ್ ಸರ್ವೆ(ಜೆಎಂಸಿ)ಮಾಡಿ ವಿಸ್ತರಣೆಯ ಗೊಂದಲ ಸರಿಪಡಿಸಲಿದ್ದಾರೆ. ಇದು 15ರಡಿ ಪ್ರಾಥಮಿಕ ಅಧಿಸೂಚನೆಯಾಗಿದ್ದು, ಇದೇ ಅಂತಿಮವಲ್ಲ, ಜೆಎಂಸಿ ನಂತರ ಅಂತಿಮವಾಗಿ 19 ರಡಿ ಅಧಿಸೂಚನೆ ಹೊರಡಿಸಲಾಗುತ್ತದೆ. ಭೂಮಿ ಕಳೆದುಕೊಳ್ಳುವವರು ತಮ್ಮ ಭೂಸ್ವಾಧೀನಕ್ಕೆ ಸಿಗುವ ಪರಿಹಾರ ಕಡಿಮೆಯಾಗಿದ್ದರೆ, ನಾನೂ ಕಾನೂನು ಬದ್ಧವಾಗಿ ಹೆಚ್ಚಿನ ಪರಿಹಾರ ಕೊಡಿಸುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.
Related Articles
Advertisement
ಕದಂಬ ಗಂಗರಾಜು ಮಾತನಾಡಿ, ಶಾಸಕ ಎ.ಮಂಜುನಾಥ್ ಅವರ ವೈಯಕ್ತಿಕ ಹಿತಾಸಕ್ತಿಯಿಲ್ಲ, ಶಾಸಕರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ ಸಲ್ಲಿಸಿದ ಅವರು, ಪುರೋಭಿವೃದ್ಧಿಯ ಹಿತಾದೃಷ್ಟಿಯಿಂದ ಕೆಸಿಫ್ ರಸ್ತೆ ಕೈಗೊಂಡಿದ್ದಾರೆ. ಎಲ್ಲರೂ ಸಹಕರಿಸೋಣ ಎಂದರು.
ಜನರ ಭಾವನೆಗೆ ಸ್ಪಂದಿಸಬೇಕು: ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಜಿ.ರಮೇಶ್ ಗುಪ್ತಾ ಮತನಾಡಿ, ಶಾಸಕರು ಪುರನಾಗರಿಕರ ಭಾವನೆ ಸ್ಪಂದಿಸಬೇಕಿದೆ.ಪಟ್ಟಣದಲ್ಲಿ ನಾಲ್ಕು ಪಥದ ರಸ್ತೆ ಅನಾವಶ್ಯಕ ಎಂದರು.
ಸಂದೀಪ್, ಕೆ.ವಿ. ಬಾಲರಘು, ಎಂ.ಎನ್. ಮಂಜುನಾಥ್ ಮಾತನಾಡಿ, ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಜನರ ಭಾವನೆಗೆ ಸ್ಪಂದಿಸಬೇಕು. ಎಷ್ಟು ವಿಸ್ತೀರ್ಣ ಕಡಿಮೆ ಮಾಡಬಹುದು ಅಷ್ಟನ್ನು ಕಡಿಮೆ ಮಾಡಿಸಿ ಅಂಗಡಿ ಮಾಲೀಕರನ್ನು ಉಳಿಸಿ,ನಾವೂ ಕೂಡ ರಸ್ತೆ ಅಗಲೀಕರಣಕ್ಕೆ ಕೈಜೋಡಿಸುತ್ತೇವೆ ಎಂದು ಸಲಹೆ ನೀಡಿದರು. ಆನಂದ್, ಸಂದೀಪ್, ಮೋಹನ್ ,ಮೂರ್ತಿ, ಎಸ್.ನಾಗರಾಜಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಮು, ಭರತ್, ಎಂ.ಆರ್. ರಾಘವೇಂದ್ರ, ಕುಮಾರ್ ಎನ್.ಎನ್.ನಟರಾಜ್, ಮೂರ್ತಿ, ಶಿವಕುಮಾರ್, ಜಯರಾಮ್, ಪ್ರಭಾಕರ್, ದಿವಾಕರ್, ಶಿವರಾಜು ವೆಂಕಟೇಶ್, ಕೆಸಿಫ್ ಮುಖ್ಯ ಎಂಜಿನಿಯರ್ ವಿವೇಕ್, ಎಂಜಿನಿಯರ್ ಎಇಇ ಗುರುರಾಜ್, ಕುಮಾರ್ ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.
ಸಾರ್ವಜನಿಕರ ಸಂಚಾರಕ್ಕೆ ಸಹಕಾರಿ: ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿರುವ ಗಣಪತಿ ದೇವಸ್ಥಾನವನ್ನು ಒಟ್ಟಾರೆ ಎಲ್ಲರ ಅಭಿಪ್ರಾಯದಂತೆ ಅಲ್ಲೇ ಉಳಿಸುತ್ತೇವೆ. ವೃತ್ತದಲ್ಲಿಯೇ ಸ್ಥಾಪಿಸಲಾಗುವುದು. ಹೊಸಪೇಟೆ ವೃತ್ತದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ತೆರುವುಗೊಳಿಸಿ ಹಿಂಭಾಗದಲ್ಲಿ ಸ್ಥಳ ಗುರುತಿಸಿ ಸ್ಥಾಪಿಸಲಾಗುವುದು. ಹೊಸಪೇಟೆ, ಹೊಂಬಾಳಮ್ಮನಕೆರೆ ಏರಿ ಬಳಿ ಮತ್ತು ಕಲ್ಯಾಗೇಟ್ ವೃತ್ತ ಹಾಗೂ ಸೋಮೇಶ್ವರಸ್ವಾಮಿ ವೃತ್ತಗಳಲ್ಲಿ ಜೆಂಕ್ಷನ್ ಮಾಡಲಾಗುವುದು. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚುತ್ತದೆ. ಸಾರ್ವಜನಿಕರ ಸಂಚಾರಕ್ಕೆ ಸಹಕಾರಿ ಆಗುತ್ತದೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.