Advertisement

ದೇಶದ ಆರ್ಥಿಕ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ

04:43 PM Aug 16, 2020 | Karthik A |

ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ.

Advertisement

ಎಲ್ಲ ಸ್ತರದ ಆರ್ಥಿಕತೆಯನ್ನು ರೂಢಿಸಿಕೊಂಡಿರುವುದರಿಂದ ದೇಶವೂ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ.

ಜನಸಂಖ್ಯೆಯಲ್ಲಿ ಶೇ. 65ರಷ್ಟು ಯುವಕರೇ ಇರುವುದರಿಂದ ದೇಶವು ಯುವರಾಷ್ಟ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಈ ನಿಟ್ಟಿನಲ್ಲಿ ಯುವಕರು ದೇಶಕ್ಕೆ ಅಮೂಲ್ಯ ಸಂಪನ್ಮೂಲವಾಗಿದ್ದಾರೆ.

ಜತೆಗೆ ಅಗತ್ಯ ಕೌಶಲ ಮತ್ತು ತಂತ್ರಜ್ಞಾನದಲ್ಲೂ ಮುಂದಿರುವ ಯುವ ಸಮುದಾಯ ದೇಶದ ಆರ್ಥಿಕತೆ ಬೆಳೆವಣಿಗೆಗೆ ಮುಖ್ಯ ಪಾತ್ರ ವಹಿಸುತ್ತಿದೆ.

Advertisement

ದೇಶದ ಅಭಿವೃದ್ಧಿಗೆ ಸುವ್ಯವಸ್ಥಿತ ಅರ್ಥ ವ್ಯವಸ್ಥೆಯ ಪ್ರಮುಖ ಪಾತ್ರ ವಹಿಸಲಿದೆ.

2030ರ ವೇಳೆಯಲ್ಲಿ ದೇಶದ ಆರ್ಥಿಕ ಕ್ಷೇತ್ರವೂ ವಿಸ್ತರಣೆಗೊಳ್ಳಲಿದೆ.

ಇದರಿಂದಾಗಿ ಉದ್ಯೋಗ ಪ್ರಮಾಣವು ಹೆಚ್ಚಳಗೊಳ್ಳುವ ನಿರೀಕ್ಷೆಯಿದೆ. ದೇಶ ಈಗಾಗಲೇ ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಿದೆ. ಅಲ್ಲದೇ ನೂತನ ಆರ್ಥಿಕ ವ್ಯವಸ್ಥೆಯನ್ನು ರೂಢಿಸಿಕೊಂಡಿರುವುದರಿಂದ ಹಲವಾರು ರೀತಿಯಲ್ಲಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದ್ದು, ಇದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕಿದೆ. ವಿಷನ್‌- 2030ರ ಆರ್ಥಿಕತೆಯ ಬಗ್ಗೆ ಇರುವ ಸವಾಲುಗಳು, ಅವಕಾಶಗಳ ಬಗ್ಗೆ ಸ್ವಾತಂತ್ರ್ಯೋತ್ಸವದ ಹೊತ್ತಿನಲ್ಲಿ ತಿಳಿದುಕೊಳ್ಳೋಣ.

ವ್ಯವಹಾರ ಕೌಶಲ ಅಗತ್ಯ
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ನಾವು ಕೂಡ ಮುಖ್ಯ ಪಾತ್ರ ಬೇಕೆಂದರೆ ಮೊದಲು ನಾವು ವ್ಯವಹಾರ ಕೌಶಲವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಿದೆ. ಇದರಿಂದ ನಮಗೆ ಆರ್ಥಿಕ ಶಿಸ್ತು, ನವನವೀನ ಪ್ರಜ್ಞೆ ಹುಟ್ಟಿಕೊಳ್ಳುತ್ತದೆ. ಇದರಿಂದ ನಾವು ಯಶಸ್ವಿಯಾಗಲು ಸಾಧ್ಯ.

ಕುಟುಂಬದಿಂದ ದೇಶ
ಉಳಿತಾಯ ಎನ್ನುವುದು ಮೊದಲು ನಾವು ಕುಟುಂಬದಿಂದಲೇ ರೂಢಿಸಿಕೊಳ್ಳಬೇಕಿದೆ. ಆಗ ಮಾತ್ರ ಭವಿಷ್ಯದ ಆರ್ಥಿಕತೆಯನ್ನು ನಾವು ಶಿಸ್ತಿನಿಂದ ನೋಡಬಹುದು. ಕುಟುಂಬಗಳ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಎಂಬ ಸರಳ ಸೂತ್ರವನ್ನು ನಾವು ಮನಗಾಣಬೇಕಿದೆ.

ಮಧ್ಯಮ ವರ್ಗದ ಪ್ರೇರಕ
ದೇಶದ ಜನಸಂಖ್ಯೆಯಲ್ಲಿ ಶೇ. 80ರಷ್ಟು ಮಧ್ಯಮ ವರ್ಗದ ಕುಟುಂಬಗಳೇ ಇವೆ. ಬಹುತೇಕ ಮಧ್ಯಮ ವರ್ಗದ ಕುಟುಂಬಗಳು ಮಧ್ಯಮ ಆದಾಯವನ್ನು ಹೊಂದಿರುತ್ತವೆ. ಇದರಿಂದ ಶೇ.75ರಷ್ಟು ಗ್ರಾಹಕ ವೆಚ್ಚ ಏರಿಕೆಯಾಗುತ್ತದೆ ಎಂದು ತಿಳಿದುಬಂದಿದೆ. ಹೀಗಾಗಿ 2030ರ ವೇಳೆಗೆ ಶಿಕ್ಷಣ, ಆರೋಗ್ಯ ಮತ್ತು ಮನೋರಂಜನ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ದೊರೆಯಲಿದೆ.

ಕೃಷಿಗೆ ಒತ್ತು ಸಿಗಲಿ
2030ರ ವೇಳೆಗೆ ದೇಶ ಅಭಿವೃದ್ಧಿ ಕಾಣಬೇಕಾದರೆ ನಾವು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ದೇಶದ ಪ್ರಮುಖ ಆದಾಯ ಕ್ಷೇತ್ರ ಎಂದೇ ಕರೆಸಿಕೊಳ್ಳುವ ಕೃಷಿ ಕ್ಷೇತ್ರ ವಿಮುಖಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ಕೇತ್ರಕ್ಕೆ ಹೆಚ್ಚಿನ ಹೂಡಿಕೆ ಬಂದರೆ ಅಭಿವೃದ್ಧಿಗೆ ಪೂರಕವಾಗಲಿದೆ.

ಹೆಚ್ಚುತ್ತಿರುವ ಸ್ಟಾರ್ಟ್‌ಅಪ್‌ಉದ್ಯಮ
ಈಗಾಗಲೇ ದೇಶದಲ್ಲಿ ಸ್ಟಾರ್ಟ್‌ಅಪ್‌ಉದ್ಯಮ ಅಭಿವೃದ್ಧಿಗೊಂಡಿದೆ. ಸರಕಾರವು ಕೂಡ ಸ್ಟಾರ್ಟ್‌ಅಪ್‌ ಉದ್ಯಮ ಸ್ನೇಹಿಯಾಗಿ ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಸದುಪಯೋಗಪಡಿಸಿಕೊಂಡರೆ ಉದ್ಯಮ ಕ್ಷೇತ್ರದಲ್ಲಿ ಬಲಗೊಳ್ಳಬಹುದು. ಇದರಿಂದ ಉದ್ಯೋಗಗಳು ಅಧಿಕವಾಗಲಿವೆ.

ಡಿಜಿಟಲ್‌ ವ್ಯಾಪಾರ ಪ್ರಬಲ
ಉದ್ಯಮ ಕ್ಷೇತ್ರದಲ್ಲಿ ಇಂದು ಡಿಜಿಟಲ್‌ ಮಾದರಿಯ ಉದ್ಯಮವು ಪ್ರಬಲಗೊಳ್ಳುತ್ತಿದೆ. 2030ರ ವೇಳೆಗೆ ನವ ನವೀನ ಮಾದರಿಯಲ್ಲಿ ಇನ್ನಷ್ಟು ಮುಂದುವರಿದ ತಂತ್ರಜ್ಞಾನದ ಭಾಗವಾಗಿ ಡಿಜಿಟಲ್‌ ವ್ಯಾಪಾರ ರೂಪುಗೊಳ್ಳಲಿದೆ. ಹೀಗಾಗಿ ಯುವಕರು ಇದಕ್ಕೆ ಅನುಗುಣವಾಗಿ ಬದುಕಬೇಕಿದೆ. ಇದು ವ್ಯಾಪಾರ ಸ್ನೇಹಿಯಾಗಿರಲಿದೆ ಎಂದು ತಿಳಿದು ಬಂದಿದೆ.

ಭ್ರಮರಾಂಬಿಕಾ ಕೆ.ಎಂ., ಬಾಪೂಜಿ ಬ್ಯುಸಿನೆಸ್‌ ಸ್ಕೂಲ್‌, ದಾವಣಗೆರೆ

 

Advertisement

Udayavani is now on Telegram. Click here to join our channel and stay updated with the latest news.

Next