ಮಾಲೂರು: ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತಕಟ್ಟಡದಲ್ಲಿರಬೇಕು ಎಂದು ಫಣ ತೊಟ್ಟು, ಬಹುತೇಕ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲಾಗಿದೆ. ಉಳಿದ ಸಂಘಗಳುಶೀಘ್ರದಲ್ಲೇ ಸ್ವಂತ ಕಟ್ಟಡ ನಿರ್ಮಾಣಕ್ಕೆ ಎಲ್ಲಾರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಹಾಗೂ ಕೋಚಿಮಲ್ ಅಧ್ಯಕ್ಷ ಕೆ. ವೈ.ನಂಜೇಗೌಡ ಹೇಳಿದರು.
ತಾಲೂಕಿನ ದೊಡ್ಡಇಗ್ಗಲೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ವಾರ್ಷಿಕಮಹಾಸಭೆಯಲ್ಲಿ ಮಾತನಾಡಿ, ನಮ್ಮ ಜಿಲ್ಲೆ ಬಯಲು ಸೀಮೆಯಾದರು ಹೈನುಗಾರಿಕೆಯಲ್ಲಿ ಮುಂದಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಕಟ್ಟಡದಲ್ಲಿ ವ್ಯವಹಾರ ನಡೆಸಬೇಕು ಎಂಬ ಉದ್ದೇಶದಿಂದ ಒಕ್ಕೂಟದ ಮೂಲಕ ಸಹಕಾರ ನೀಡಿದ್ದೇವೆ. ಬಡ ಕುಟುಂಬಗಳು ಬಡತನ ರೇಖೆಯಿಂದ ಮುಕ್ತರಾಗಲು ಹೈನುಗಾರಿಕೆ ಸಹಕಾರಿಯಾಗಿದೆ. ಜಾನುವಾರುಗಳ ಸಾಕಾಣಿಕೆ, ಹೈನುಗಾರಿಕೆ ಮೂಲಕ ಧೈರ್ಯವಾಗಿ ಜೀವನ ನಡೆಸುವ ವೇಳೆತಮ್ಮ ಜಾನುವಾರುಗಳನ್ನು ಕಳೆದುಕೊಂಡರೆ ಸಂಕಷ್ಟಕ್ಕೀಡಾಗುವ ಬದಲಿಗೆ ಒಕ್ಕೂಟ ನೀಡಿರುವವಿಮಾ ಯೋಜನೆ ಬಳಸಿಕೊಳ್ಳಿ. ವಿಮೆಮಾಡಿಸಿಕೊಂಡರೆ ಸುಗಮ ಜೀವನಕ್ಕೆ ಹಾದಿಯಾಗುತ್ತದೆ ಎಂದರು.
ಅವಳಿ ಜಿಲ್ಲೆಯಲ್ಲೇ ಮಾಲೂರು ತಾಲೂಕು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದೀಗ 174 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಹಾಲು ಉತ್ಪಾದಕರ ಅನುಕೂಲಕ್ಕೆಅಗತ್ಯವಿದ್ದಲ್ಲಿ ಇನ್ನಷ್ಟು ಸಂಘಗಳಿಗೆ ಅನುಮತಿ ನೀಡುತ್ತೇವೆ. ಹಾಲು ಉತ್ಪಾದಕರು ಒಂದು ಲೀಟರ್ ಹಾಲು ಉತ್ಪಾದನೆಗೆ 31.50 ರೂ., ಖರ್ಚು ಬರಲಿದ್ದು, ಸರ್ಕಾರ 1 ಲೀಟರ್‌ಗೆ 27 ರೂ. ಜೊತೆಗೆ ಸರ್ಕಾರದ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಇದರಿಂದ ಹಾಲು ಉತ್ಪಾದಕರಿಗೆ ಲಾಭವಿಲ್ಲ. ಈ ಸಂಬಂಧ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲೇಹೆಚ್ಚಿನ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಿದ್ದು, ಇದರಿಂದ ಹಾಲು ಉತ್ಪಾದಕರಿಗೆ ಅನುಕೂಲವಿದೆ. ಈಗಾಗಲೇ ಅಧಿವೇಶನಗಳಲ್ಲಿ ಹಾಲಿನ ಪ್ಯಾಕೇಟ್ ಮೇಲಿನ ಎಂಆರ್‌ಪಿ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದರು.
ಮುಖಂಡರಾದ ಅಂಜನಿ ಸೋಮಣ್ಣ, ಮುನೇಗೌಡ, ನಲ್ಲಾಂಡಹಳ್ಳಿ ನಾಗರಾಜ್, ದೊಡ್ಡಇಗ್ಗಲೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಾಂತಮ್ಮ ಸೋಮಣ್ಣ, ಉಪಾಧ್ಯಕ್ಷೆ ಕಾಂತಮ್ಮ,ನಿರ್ದೇ ಶಕರಾದ ಅಶ್ವತಮ್ಮ, ಅನಸೂಯಮ್ಮ,ಲಕ್ಷ್ಮಮ್ಮ, ಪಾರ್ವತಮ್ಮ, ಮಂಜುಳಮ್ಮ,ನಾರಾಯಣಮ್ಮ, ಶೋಭಾ, ರತ್ನಮ್ಮ, ದೇವಿಕಾ, ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಎಂ.ಪಿ.ಚೇತನ್, ವಿಸ್ತರಣಾಧಿಕಾರಿ ಕರಿಯಪ್ಪ, ಮುಖ್ಯಕಾರ್ಯನಿರ್ವಹಕಿ ಮಂಗಳಾ, ಹಾಲು ಪರೀಕ್ಷಕಿ ಸುನಂದಮ್ಮ ಹಾಜರಿದ್ದರು.