Advertisement
ಪೂರ್ವ ಪಶ್ಚಿಮದ ಗೋಡೆಗಳಿಗೆ ರಕ್ಷಣೆಪೂರ್ವಕ್ಕಿಂತ ಪಶ್ಚಿಮದ ಗೋಡೆಗಳಿಗೆ ಹೆಚ್ಚು ರಕ್ಷಣೆಯ ಅಗತ್ಯವಿದ್ದರೂ ಬಿರುಬೇಸಿಗೆಯಲ್ಲಿ ಬೆಳಗ್ಗೆ ಉಗುರು ಬೆಚ್ಚಗಿನ
ನೀರಿನ ಸ್ನಾನ ಹಾಗೂ ಬಿಸಿಬಿಸಿ ಕಾಫಿ- ಟೀ ಸವಿಯುವ ಅಭ್ಯಾಸವಿರುವವರಿಗೆ ಸುತ್ತಲಿನ ವಾತಾವರಣ ತಂಪಾಗಿದ್ದರೆ ಅಸ್ವಾಧಿಸಲು ಸಹಾಯಕಾರಿಯಾಗಿರುತ್ತದೆ. ಜೊತೆಗೆ ನಮಗೆಲ್ಲ ಬೆಳಗ್ಗೆಯ ಹೊತ್ತು ವಾತಾವರಣ ಬಿಸಿಯೇರುವ ಅನುಭವ ಹೆಚ್ಚಾಗುವುದು ದಿನನಿತ್ಯ ತರಾತುರಿಯಲ್ಲಿ ಕೆಲಸ ಕಾರ್ಯಗಳಿಗೆ ತೆರೆಳಲು ಅನುವಾಗುತ್ತಿರುವಾಗಲೇ. ಹಾಗಾಗಿ ಪೂರ್ವದಿಕ್ಕಿನಿಂದಲೂ ಬೇಸಿಗೆಯಲ್ಲಿ ಶಾಖ ಮನೆಯನ್ನು ಕಾಡದಂತೆ ನೋಡಿಕೊಳ್ಳುವುದು ಉತ್ತಮ. ನಮ್ಮ ಮನೆಯ ಗೋಡೆಗಳನ್ನು ಮಾಮೂಲಿ ಕಾಂಕ್ರಿಟ್ ಬ್ಲಾಕ್‌ಬಳಸಿ ಕಟ್ಟಿದ್ದರೆ, ಅವುಗಳ ಶಾಖನಿರೋಧಕ ಗುಣ ಕಡಿಮೆ ಇರುತ್ತದೆ. ಆದುದರಿಂದ ಅವುಗಳ ಮುಂದೆ- ಮನೆಯ ಹೊರಮುಖಕ್ಕೆ ಒಂದು ಪದರ ಕ್ಲಾಡಿಂಗ್ ರೀತಿಯಲ್ಲಿ ಏರೇಟೆಡ್ ಕಾಂಕ್ರಿಟ್ ಬ್ಲಾಕ್ಸ್ ಕಟ್ಟಿದರೆ, ಪೂರ್ವದ ಗೋಡೆಗೂ ಸಾಕಷ್ಟು ಶಾಖನಿರೋಧಕ ಗುಣ ಲಭ್ಯವಾಗುತ್ತದೆ.
ಇಟ್ಟಿಗೆಗಳನ್ನು ಬಳಸಿದ್ದರೆ, ಹೆಚ್ಚುವರಿ ಶಾಖನಿರೋಧಕ ಪದರಗಳನ್ನು ನೀಡುವ ಅಗತ್ಯ ಇರುವುದಿಲ್ಲ. ಪಶ್ಚಿಮದ ಗೋಡೆಗಳಿಗೆ ಅದರಲ್ಲೂ ಅವು ಮನೆಯ ಮುಂಭಾಗದಲ್ಲಿದ್ದು, ಮಧ್ಯಾಹ್ನದ ನಂತರ ಸೂರ್ಯನ ಪ್ರಖರ ಕಿರಣಗಳಿಗೆ ಈಡಾಗುತ್ತಿದ್ದರೆ, ಆಗ ನಾವು ಹೆಚ್ಚುವರಿ ಶಾಖನಿರೋಧಕ ವಸ್ತುಗಳನ್ನು ಬಳಸುವುದು ಅನಿವಾರ್ಯ. ಜೇಡಿಮಣ್ಣಿನ ಠೊಳ್ಳು
ಇಟ್ಟಿಗೆ ಇಲ್ಲ ಏರೇಟೆಡ್ ಕಾಂಕ್ರಿಟ್ ಬ್ಲಾಕ್‌ಗಳನ್ನು ಬಳಸಿ ಸೀಟ್ ಪೂ›ಫ್ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕೇವಲ ಮೂರು
ನಾಲ್ಕು ಇಂಚು ದಪ್ಪದ ಜಂಬಿಟ್ಟಿಗೆ- ಲ್ಯಾಟರೈಟ್ ಕಲ್ಲಿನ ಕ್ಲಾಡಿಂಗ್ ಗಳೂ ಕೂಡ ಲಭ್ಯ. ಇವನ್ನೂ ಕೂಡ ಎಲಿವೇಷನ್‌ಗೆ ಕಲಾತ್ಮಕವಾಗಿ ಬಳಸುವುದರ ಜೊತೆಗೆ ಶಾಖನಿರೋಧಕ ಪದರವನ್ನಾಗಿಯೂ ಬಳಸಬಹುದು.
Related Articles
ಇತ್ತೀಚಿನ ದಿನಗಳಲ್ಲಿ ನಾನಾ ವಿನ್ಯಾಸದ ಕಂಪ್ಯೂಟರ್ ಕಟ್ ವಿನ್ಯಾಸಗಳನ್ನು ಅಲಂಕಾರಿಕವಾಗಿ ಬಳಸುವುದು ಜನಪ್ರಿಯವಾಗುತ್ತಿದೆ. ಈ ಮಾದರಿಯ ಪದರಗಳನ್ನು ತೀರ ಗೋಡೆಗೆ ತಾಗಿದಂತೆ ಇಡದೆ ಒಂದೆರಡು ಇಂಚು ದೂರ ಅಂದರೆ ಗಾಳಿ ಆಡಲು ಅನುಕೂಲಕರವಾದ ರೀತಿಯಲ್ಲಿ ಅಳವಡಿಸಿದರೆ, ನೋಡಲು ಸುಂದರವಾಗಿರುವುದರ ಜೊತೆಗೆ ಸೂರ್ಯನ ನೇರ ಪ್ರಹಾರದಿಂದಲೂ
ಮನೆಯನ್ನು ರಕ್ಷಿಸುತ್ತದೆ.
Advertisement
ನೀರುನಿರೋಧಕ ಗುಣ ಹೊಂದಿರುವ ಮರ, ಕೊರಿಯನ್ ಮಟೆರಿಯಲ್, ಇಲ್ಲವೇ ತುಕ್ಕುನಿರೋಧಕ ಗುಣ ಹೊಂದಿರುವ ಸ್ಟೆನ್‌ಲೆಸ್ ಸ್ಟೀಲ್ ಶೀಟುಗಳನ್ನು ನಮಗಿಷ್ಟ ವಾದ ವಿನ್ಯಾಸಗಳಲ್ಲಿ ಕೊರೆಸಿ ನೆರಳು ನೀಡಲು ಬಳಸಬಹುದು. ಲೋಹದ ತಗಡುಗಳನ್ನುಬಳಸುವುದಾದರೆ ಅವಕ್ಕೆ ಮ್ಯಾಟ್ ಅಂದರೆ ಸ್ವಲ್ಪ ತರಿತರಿಯಾಗಿರುವಂತಹ μನಿಶ್ ನೀಡುವುದು ಉತ್ತಮ. ಹೆಚ್ಚು ಶೈನಿಂಗ್
ಇದ್ದರೆ, ಕಣ್ಣಿಗೆ ಸೂರ್ಯಕಿರಣಗಳು ಹೊಡೆಯುವುದು ತಪ್ಪುವುದಿಲ್ಲ. ವೈರ್‌ಕಟ್ ಇಟ್ಟಿಗೆ ಹಾಗೂ ಟೆರ್ರಕೋಟ ಬ್ಲಾಕ್ಸ್‌ಗಳನ್ನು ಬಳಸಿಯೂ ನಾವು ಗೋಡೆಗಳಿಗೆ ನೆರಳನ್ನು ನೀಡುವ ಸ್ಕ್ರೀನ್ ವಾಲ್‌ಗಳನ್ನು ಕಟ್ಟಬಹುದು. ಗಾಳಿ ಸರಾಗವಾಗಿ ಹರಿದುಹೋಗುವ ರೀತಿಯಲ್ಲಿ ಸಾಕಷ್ಟು ಸಂದಿಯನ್ನು ಬಿಟ್ಟು ಕಟ್ಟಿದರೆ, ಬಿಸಿಲು ನೇರವಾಗಿ
ಬಿದ್ದರೂ ನಮ್ಮ ಮನೆಯ ಗೋಡೆಗಳು ಬಿಸಿಯೇರದೆ ತಂಪಾಗಿರುತ್ತವೆ. ನಮ್ಮ ದೇಹದ ಉಷ್ಣಾಂಶ 37 ಡಿಗ್ರಿಯಷ್ಟಿದ್ದರೂ ಅದರಲ್ಲಿ ಜೀವಶಕ್ತಿಗೆಂದು ನಾವು ತಿನ್ನುವ ಆಹಾರ ಸದಾಕಾಲ ಶಾಖವಾಗುವುದರಿಂದ, ಪರಿಸರದ ತಾಪಮಾನ ಕಡೇ ಪಕ್ಷ ಹನ್ನೆರಡು
ಡಿಗ್ರಿಯಷ್ಟು ಅಂದರೆ ಸುಮಾರು 25 ಡಿಗ್ರಿಯಷ್ಟಿದ್ದರೆ, ನಮಗೆ ತಂಪೆನಿಸುತ್ತದೆ. ದಕ್ಷಿಣ ಭಾರತದಲ್ಲಿ ವರ್ಷದ ನಾಲ್ಕಾರು ತಿಂಗಳುಗಳ ಗರಿಷ್ಟ ತಾಪಮಾನ ಮುವತ್ತು ಡಿಗ್ರಿ ಸೆಲಿÏಯಸ್ ಗಿಂತ ಹೆಚ್ಚಿರುವುದರಿಂದ
ನಾವು ಅನಿವಾರ್ಯವಾಗಿ ಗಾಳಿ ಹಾಯುವಿಕೆಯ ಮೂಲಕ ನಮ್ಮ ದೇಹಕ್ಕೆ ಆರಾಮದಾಯಕ ಎಂದೆನಿಸುವ ತಾಪಮಾನವನ್ನು ಅಂದರೆ ಇಪ್ಪತ್ತೆ„ದು ಡಿಗ್ರಿ ಆಸು ಪಾಸಿನಲ್ಲಿ ಇರುವಂತೆ ಮನೆಯ ವಿನ್ಯಾಸ ಮಾಡಬೇಕು. ಮನೆಯೊಳಗೆ ಗಾಳಿಯ ಹರಿವು ಕಡಿಮೆ ಆದಂತೆ ಫ್ಯಾನ್ ಗಳಿಗೆ ಮೊರೆ ಹೋಗುವ ರೀತಿಯಲ್ಲೇ ಗೋಡೆಗಳು ಬಿಸಿಯೇರಿದರೂ ಅನಿವಾರ್ಯವಾಗಿ ವಿದ್ಯುತ್ ಶಕ್ತಿಯನ್ನು
ವ್ಯಯಿಸಬೇಕಾಗುತ್ತದೆ. ಆದುದರಿಂದ ನಮ್ಮ ಮನೆಯ ಗೋಡೆಗಳನ್ನು ಸಾಕಷ್ಟು ತಂಪಾಗಿರಿಸಿಕೊಂಡರೆ ವಿದ್ಯುತ್ ಅಭಾವ ವಿರುವ ಬೇಸಿಗೆಯಲ್ಲಿಯೂ ಕೂಡ ತಂಪಾಗಿರಬಹುದು. ತಂಪೆರೆಯುವ ಸಜಾjಗಳು
ಸಾಮಾನ್ಯವಾಗಿ ಕಿಟಕಿಗಳ ಮೂಲಕ ಮನೆಯನ್ನು ಬಿಸಿಲು ಹಾಗೂ ಮಳೆ ನೇರವಾಗಿ ಪ್ರವೇಶಿಸಬಾರದು ಎಂದು ನಾವು ಲಿಂಟಲ್ ಮಟ್ಟದಲ್ಲಿ ಹೊರಚಾಚುಗಳನ್ನು ನೀಡುತ್ತೇವೆ. ಇದೇ ರೀತಿಯಲ್ಲಿ ನಾವು ಗೋಡೆಗಳಿಗೂ ನೆರಳನ್ನು ನೀಡಿದರೆ, ಅವು ಬಿಸಿಯೇರಿ ಮನೆಯ ಒಳಗೆ ಶಾಖವನ್ನು ಹರಿಸುವುದು ತಪ್ಪುತ್ತದೆ. ಲಿಂಟಲ್ ಹಾಗೂ ಸೂರಿನ ಮಧ್ಯದ ಭಾಗ ಬೇಸಿಗೆಯಲ್ಲಿ ಹೆಚ್ಚು ಶಾಖದ
ಪ್ರಹಾರಕ್ಕೆ ಒಳಗಾಗುವುದರಿಂದ, ಸೂರು ಮಟ್ಟದಲ್ಲಿ ಇಲ್ಲವೇ ಅದಕ್ಕೂ ಮೇಲೆ- ಪ್ಯಾರಾಪೆಟ್ ಮಟ್ಟದಲ್ಲಿ ಎಲಿವೇಶನ್‌ಗೆ ಏನೋ ಎಂಬಂತೆ ನೆರಳು ನೀಡುವ ಹೊರಚಾಚುಗಳನ್ನು ವಿನ್ಯಾಸ ಮಾಡಬಹುದು. ಈ ಪೊ›ಜೆಕ್ಷನ್‌ಗಳನ್ನು ಸೂಕ್ತ ಆಕಾರದಲ್ಲಿ ಡಿಸೈನ್ ಮಾಡಿದರೆ, ಬಿಸಿಲು ಹೆಚ್ಚು ತಾಗುವ ಕಡೆಯ ಗೋಡೆಗಳೂ ಕೂಡ ಬೇಸಿಗೆಯ ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಣೆ ಪಡೆಯಬಹುದು. ಹೆಚ್ಚಿನ ಮಾಹಿತಿಗೆ: 9844132826 ಆರ್ಕಿಟೆಕ್ಟ್ ಕೆ. ಜಯರಾಮ್