Advertisement
ಕಾಮಕಸ್ತೂರಿ ಬೀಜ (ತಂಪಿನ ಬೀಜ)ದ ಪಾನಕಬೇಕಾಗುವ ಸಾಮಗ್ರಿ:
ಕಾಮಕಸ್ತೂರಿ ಬೀಜ- 4 ಚಮಚ, ಪುದೀನಾ ಎಲೆ/ತುಳಸಿ ಎಲೆ- 5-6, ನಿಂಬೆರಸ-2 ಚಮಚ, ಬೆಲ್ಲ ಅಥವಾ ಸಕ್ಕರೆ ಸ್ವಲ್ಪ , ನೀರು- 4 ಕಪ್.
ತಯಾರಿಸುವ ವಿಧಾನ:
ಕಾಮಕಸ್ತೂರಿ ಬೀಜವನ್ನು ನೀರಿಗೆ ಹಾಕಿ ಬೆಲ್ಲ/ಸಕ್ಕರೆ ಹಾಕಿ ಕದಡಿ. ಲಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಪುದೀನಾ ಎಲೆ ಅಥವಾ ತುಳಸಿ ಎಲೆ ಹಾಕಿ ಕುಡಿಯಿರಿ. ಆಗಾಗ ಸ್ವಲ್ಪ ಸ್ವಲ್ಪ ಕುಡಿದರೆ ಹೊಟ್ಟೆ ತಂಪಾಗುವುದು.
ಬೇಕಾಗುವ ಸಾಮಗ್ರಿ:
ಕಾಳುಮೆಣಸು 7-8, ಶುಂಠಿ-1 ಇಂಚು, ಮಜ್ಜಿಗೆಸೊಪ್ಪು 4-5, ಬೆಲ್ಲ- 50 ಗ್ರಾಂ, ಲಿಂಬೆ-1/2 ಹೋಳು, ನೀರು 5-6 ಕಪ್.
ತಯಾರಿಸುವ ವಿಧಾನ:
ನೀರಿಗೆ ಬೆಲ್ಲ ಹಾಕಿ ಕುದಿಸಿರಿ. ಒಣ ಶುಂಠಿ, ಕಾಳುಮೆಣಸು ಚೆನ್ನಾಗಿ ಹುಡಿಮಾಡಿ ಕುದಿಸಿದ ನೀರಿಗೆ ಹಾಕಿ ಮಜ್ಜಿಗೆಸೊಪ್ಪು ಹಾಕಿ ಕುದಿಸಿ ತಣಿಸಿ, ಲಿಂಬೆರಸ ಹಾಕಿ ಮುಚ್ಚಿಡಿ. ಈ ಪಾನಕವನ್ನು ಬಿಸಿಯಾಗಿಯೂ ಸೇವಿಸಬಹುದು. ತಣಿದ ಮೇಲೂ ಸೇವಿಸಿದರೆ ಆರೋಗ್ಯದಾಯಕವಾಗುತ್ತದೆ.
ಒಣಶುಂಠಿಯ ಬದಲು ಹಸಿ ಶುಂಠಿ ಉಪಯೋಗಿಸಬಹುದು. ಎಸ್. ಜಯಶ್ರೀ ಶೆಣೈ