Advertisement
ಸ್ವೀಟ್‌ಕಾರ್ನ್ ಸಿಹಿ ಸಲಾಡ್ಬೇಕಾಗುವ ಸಾಮಗ್ರಿ: ಸ್ವೀಟ್‌ಕಾರ್ನ್- ಆರು ಚಮಚ, ಮೊಳಕೆ ಹೆಸರುಕಾಳು- ಎಂಟು ಚಮಚ, ದಾಳಿಂಬೆ- ಎಂಟು ಚಮಚ, ಖರ್ಜೂರ- ಆರು ಚಮಚ, ತೆಂಗಿನತುರಿ-ಎರಡು ಚಮಚ, ಕೊತ್ತಂಬರಿಸೊಪ್ಪು ಮತ್ತು ಬ್ಲ್ಯಾಕ್‌ಸಾಲ್ಟ್ ರುಚಿಗೆ ಬೇಕಿದ್ದರೆ
ಬೇಕಾಗುವ ಸಾಮಗ್ರಿ: ಚಕೋತಾ ಹಣ್ಣಿನ ಎಸಳುಗಳು- ನಾಲ್ಕು ಚಮಚ, ಕ್ಯಾರೆಟ್‌ತುರಿ- ಆರು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಮೊಳಕೆ ಹೆಸರುಕಾಳು- ನಾಲ್ಕು ಚಮಚ, ಸಿಪ್ಪೆ ತೆಗೆದು ಹೆಚ್ಚಿದ ಸೌತೆಕಾಯಿ- ಆರು ಚಮಚ, ತೆಂಗಿನತುರಿ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಬ್ಲ್ಯಾಕ್‌ಸಾಲ್ಟ್ ರುಚಿಗೆ ಬೇಕಷ್ಟು, ಸಕ್ಕರೆ- ಎರಡು ಚಮಚ ಬೇಕಿದ್ದರೆ ಮಾತ್ರ, ಹೆಚ್ಚಿದ ಖರ್ಜೂರ- ನಾಲ್ಕು ಚಮಚ, ಉಪ್ಪು ರುಚಿಗೆ ಬೇಕಷ್ಟು.
Related Articles
Advertisement
ಸೀಬೆಹಣ್ಣಿನ ಸಲಾಡ್ ಬೇಕಾಗುವ ಸಾಮಗ್ರಿ: ಬೀಜ ತೆಗೆದು ಸಣ್ಣಗೆ ಹೆಚ್ಚಿದ ಸೀಬೆ- ಆರು ಚಮಚ, ಕ್ಯಾರೆಟ್‌ತುರಿ- ಐದು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಸೌತೆಕಾಯಿ- ಆರು ಚಮಚ, ಹೆಚ್ಚಿದ ಟೊಮೆಟೋ- ಒಂದು, ಕೊತ್ತಂಬರಿಸೊಪ್ಪು ಸ್ವಲ್ಪ, ಕೆಂಪುಮೆಣಸಿನ ಹುಡಿ ಮತ್ತು ಬ್ಲ್ಯಾಕ್‌ಸಾಲ್ಟ್ನ ಮಿಶ್ರಣ- ರುಚಿಗೆ ಬೇಕಷ್ಟು, ತೆಂಗಿನತುರಿ- ಮೂರು ಚಮಚ. ತಯಾರಿಸುವ ವಿಧಾನ: ಸಣ್ಣಗೆ ಹೆಚ್ಚಿದ ಸೀಬೆಯ ಜೊತೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಂಗ್ ಬೌಲ್‌ನಲ್ಲಿ ಚೆನ್ನಾಗಿ ಮಿಶ್ರಮಾಡಿ. ನಂತರ, ಸರ್ವ್ ಮಾಡುವಾಗ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಬಹುದು. ಡಯಟ್ ಮಾಡುವವರು ಊಟಕ್ಕಿಂತ ಮೊದಲು ಇದನ್ನು ಸೇವಿಸಿ ಉತ್ತಮ ಪ್ರಯೋಜನ ಪಡೆಯಬಹುದು. ಮೊಳಕೆಮೆಂತೆ ವಿದ್ ದಾಳಿಂಬೆ ಸಲಾಡ್
ಬೇಕಾಗುವ ಸಾಮಗ್ರಿ: ಮೊಳಕೆಕಟ್ಟಿದ ಮೆಂತೆ- ಆರು ಚಮಚ, ದಾಳಿಂಬೆ- ಎಂಟು ಚಮಚ, ಹೆಚ್ಚಿದ ಸೇಬು- ಆರು ಚಮಚ, ಕ್ಯಾರೆಟ್‌ತುರಿ- ಆರು ಚಮಚ, ತೆಂಗಿನತುರಿ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ, ಲಿಂಬೆರಸ- ಒಂದು ಚಮಚ, ಉಪ್ಪು ರುಚಿಗೆ, ಹಸಿಮೆಣಸು ಅಥವಾ ವೈಟ್‌ಪೆಪ್ಪರ್ ರುಚಿಗೆ ಬೇಕಷ್ಟು ಬೇಕಿದ್ದರೆ ಮಾತ್ರ ತಯಾರಿಸುವ ವಿಧಾನ: ತೆಂಗಿನ ತುರಿಗೆ ಉಪ್ಪು-ಲಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಮಿಶ್ರಮಾಡಿ ಮೇಲಿನಿಂದ ಕೊತ್ತಂಬರಿಸೊಪ್ಪು ಹರಡಿ. – ಗೀತಸದಾ