Advertisement
ವೆನಿಲ್ಲಾ ಐಸ್‌ಕ್ರೀಮ್ ಬೇಕಾಗುವ ಸಾಮಗ್ರಿ: 2 ಕಪ್ ಹಾಲು, 1 ಕಪ್ ಹಾಲಿನ ಪುಡಿ, 1/2 ಕಪ್ ಕ್ರೀಮ್, 1/2 ಕಪ್ ಸಕ್ಕರೆ ಪುಡಿ, 1 ಸಣ್ಣ ಚಮಚ ವೆನಿಲ್ಲಾ ಎಸೆನ್ಸ್ .
ಬೇಕಾಗುವ ಸಾಮಗ್ರಿ: 2 ಕಪ್ ಸಿಹಿರಹಿತ ಚಾಕೊಲೆಟ್, 50 ಗ್ರಾಂ ಕೊಕೋ ಪೌಡರ್, 1/2 ಲೀಟರ್ ಹಾಲು, 4 ಚಿಕ್ಕ ಚಮಚ ಕಾರ್ನ್ಫ್ಲೋರ್, 4 ಚಿಕ್ಕ ಚಮಚ ಹಾಲಿನ ಹುಡಿ, 1 ಕಪ್ ಸಕ್ಕರೆ ಪುಡಿ, ಚಿಟಿಕೆ ಉಪ್ಪು .
Related Articles
Advertisement
ಮಿಕ್ಸೆಡ್ ಹಣ್ಣುಗಳ ಕಸ್ಟರ್ಡ್ ಬೇಕಾಗುವ ಸಾಮಗ್ರಿ: ಸಣ್ಣಗೆ ತುಂಡು ಮಾಡಿದ ಬಾಳೆಹಣ್ಣು, ಸೇಬು, ಕಿತ್ತಳೆ, ದಾಳಿಂಬೆ ಚೂರುಗಳು 1 ಕಪ್, 2 ಕಪ್ ಹಾಲು, 1 ಕಪ್ ಸಕ್ಕರೆ, 2 ಚಮಚ ಕಸ್ಟರ್ಡ್ ಪುಡಿ (ವೆನಿಲ್ಲಾ). ತಯಾರಿಸುವ ವಿಧಾನ: ತಣ್ಣನೆಯ ಹಾಲಿನಲ್ಲಿ ಕಸ್ಟರ್ಡ್ ಪುಡಿ ಹಾಕಿ ಕರಗಿಸಿ. ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಹಾಲು ಹಾಕಿ. ಬಿಸಿಯಾದಾಗ ಸಕ್ಕರೆ ಹಾಕಿ. ಸಕ್ಕರೆ ಕರಗಿದಾಗ ಕಲಸಿದ ಕಸ್ಟರ್ಡ್ ಪುಡಿಯ ಹಾಲಿನ ಮಿಶ್ರಣ ಹಾಕಿ ತೊಳಸಿ ಗಟ್ಟಿಯಾದಾಗ ಕೆಳಗಿಳಿಸಿ. ಒಂದು ಬೌಲ್‌ನಲ್ಲಿ ಸಣ್ಣಗೆ ತುಂಡು ಮಾಡಿದ ಬಾಳೆಹಣ್ಣು, ಸೇಬು, ಕಿತ್ತಳೆ, ದಾಳಿಂಬೆ ಬೀಜ ಹಾಕಿ. ನಂತ ತಣ್ಣಗಾದ ಹಾಲಿನ ಕಸ್ಟರ್ಡ್ ಮಿಶ್ರಣ ಹಾಕಿ ಸರಿಯಾಗಿ ಬೆರೆಸಿ. ಈಗ ರುಚಿಯಾದ ಹಣ್ಣುಗಳ ಕಸ್ಟರ್ಡ್ ಸವಿಯಲು ಬಲು ರುಚಿಯಾಗಿರುತ್ತದೆ.. ಮಿಕ್ಸೆಡ್ ಹಣ್ಣುಗಳ ಸಾಬಕ್ಕಿ ಮಿಕ್ಸ್
ಬೇಕಾಗುವ ಸಾಮಗ್ರಿ: 2 ಕಪ್ ಹಾಲು, 1 ಕಪ್ ಸಕ್ಕರೆ, ಬೇಯಿಸಿದ ಸಾಬಕ್ಕಿ 1/2 ಕಪ್, ಸಣ್ಣಗೆ ತುಂಡು ಮಾಡಿದ ಬಾಳೆಹಣ್ಣು, ಸೇಬು, ದ್ರಾಕ್ಷೆ , ದಾಳಿಂಬೆ ಬೀಜ- 1 ಕಪ್. ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಹಾಲು ಹಾಕಿ. ಬಿಸಿಯಾದಾಗ ಸಕ್ಕರೆ ಹಾಕಿ. ಸಕ್ಕರೆ ಕರಗಿದಾಗ ಬೇಯಿಸಿದ ಸಾಬಕ್ಕಿ ಹಾಕಿ ಸ್ವಲ್ಪ ಹೊತ್ತು ತೊಳಸಿ ಕೆಳಗಿಳಿಸಿ. ನಂತರ ಒಂದು ಗ್ಲಾಸಿಗೆ ತಳಭಾಗದಲ್ಲಿ ಬಾಳೆಹಣ್ಣಿನ ತುಂಡು, ಸೇಬಿನ ತುಂಡು, ದ್ರಾಕ್ಷೆ, ದಾಳಿಂಬೆ ಬೀಜ ಹಾಕಿ. ನಂತರ ಬೇಯಿಸಿದ ಸಾಬಕ್ಕಿ, ಹಾಲಿನ ಮಿಶ್ರಣ ಹಾಕಿ. ಈ ಹಣ್ಣುಗಳ ಸಾಬಕ್ಕಿ ಮಿಕ್ಸ್ ಈ ಬೇಸಿಗೆಯಲ್ಲಿ ತಿಂದರೆ ದೇಹ, ಮನಸ್ಸು ತಂಪಾಗುತ್ತದೆ. ಸರಸ್ವತಿ ಎಸ್. ಭಟ್