Advertisement

ಯುಟ್ಯೂಬ್‌ ಅಡುಗೆ ಕಲಿಸುವ ಟೀಚರ್‌!

07:55 PM Sep 30, 2020 | Suhan S |

ನಮ್ಮ ಪಕ್ಕದ ಮನೆಯ ಆಂಟಿ ಚಿಂತೆಯಲ್ಲಿದ್ದರು. ಮಗಳು ಜಾಹ್ನವಿಗೆ ಮದುವೆ ಗೊತ್ತಾಗಿದೆ, ಹುಡುಗ ಬೆಂಗಳೂರಿನವನೇ. ಇವಳಿಗೆಕಾಫಿ ಮಾಡುವುದೂ ಗೊತ್ತಿಲ್ಲ. ಹೇಗೆ ಸಂಸಾರ ಮಾಡಿಕೊಂಡಿರುತ್ತಾಳ್ಳೋ, ಎಂಜಿನಿಯರಿಂಗ್‌ ಮುಗಿಯುತ್ತಿದ್ದಂತೆ ಕೆಲಸ ಸಿಕ್ಕಿತು. ಮೊದಲು ಓದು, ನಂತರ ಕೆಲಸವೆನ್ನುತ್ತಾ ಅಡುಗೆ ಮನೆಯಿಂದ ದೂರವೇ ಉಳಿದಳು- ಎಂದರು.

Advertisement

ಅಮ್ಮನ ಈ ಎಣಿಕೆಯನ್ನು ಅವರ ಸಾಫ್ಟ್ವೇರ್‌ ಎಂಜನಿಯರ್‌ ಮಗಳು ಸುಳ್ಳಾಗಿಸಿದಳು. ಗಂಡನ ಮನೆ ಸೇರಿದವಳು, ಯೂ ಟ್ಯೂಬ್‌ ನೋಡಿ ಕಾಫಿ, ಟೀ, ಅನ್ನ, ತೊವ್ವೆ ಮಾಡಲು ಮಾತ್ರವಲ್ಲ; ಇಡ್ಲಿ, ದೋಸೆ, ಚಟ್ನಿ, ಪಲಾವ್‌ ಮಾಡುವುದನ್ನೂಕಲಿತಳು. ಮನೆ ನೋಡಲುಬಂದ ಅತ್ತೆ, ಮಾವನಿಗೆಕೊತ್ತಂಬರಿ ಸೊಪ್ಪು ತೇಲುವ ಘಮಘಮಿಸುವ ಸಾರು ಮಾಡಿ ಬಡಿಸಿ ಭೇಷ್‌ ಅನಿಸಿಕೊಂಡಳು. ಲಾಕ್‌ಡೌನ್‌ ಕಾಲದಲ್ಲಂತೂ ಆಫೀಸು- ಮನೆಗೇ ಬಂತು. ಜಾಹ್ನವಿ ಸುಮ್ಮನೆಕೂರದೆಕೇಕು, ಬಿಸ್ಕೀಟು, ಐಸ್‌ಕ್ರೀಮ್‌ ಅನ್ನು ಮಾಡಿ ವಾಟ್ಸಾಪ್‌ಸ್ಟೇಟಸ್ಸಿನಲ್ಲಿ ಹಾಕಿದಾಗ ಅವಳಮ್ಮ ಸಂತೋಷ, ಹೆಮ್ಮೆಯಿಂದ ಬೀಗಿದ್ದು ಮಾತ್ರವಲ್ಲ;ಕೇಕ್‌ ಮಾಡುವುದನ್ನು ಸ್ವಲ್ಪ ಬಿಡಿಸಿ ಹೇಳೇ. ನನಗೆ ಯೂ ಟ್ಯೂಬ್‌ ಸರಿ ಬರುತ್ತಿಲ್ಲ ಎಂದರು. ಅಡುಗೆಕಲಿಯುತ್ತಿದ್ದಂತೆ ಹೊಸ ರುಚಿ ಮಾಡುವ ಹುಮ್ಮಸ್ಸೂ ಜೊತೆಯಾಗುತ್ತದೆ. ಬಗೆಬಗೆಯ ತಿನಿಸು ಮಾಡುವ ವಿಧಾನ ಕಲಿಯಲು ಮನಸ್ಸು ಹಾತೊರೆಯುತ್ತದೆ. ಎರಡು ದಶಕಗಳ ಹಿಂದೆ, ಮದುವೆಯಾಗಿ ಗಂಡನ ಮನೆಗೆ ಹೊರಟ ಹೆಣ್ಣು ಮಕ್ಕಳು, ಅಡುಗೆ ಪುಸ್ತಕವನ್ನೂ ತಪ್ಪದೆ ಜೊತೆಗೆ ಒಯ್ಯುತ್ತಿದ್ದರು. ಬಿಳಿ ಕಾಗದ ಬೂದು ಬಣ್ಣಕ್ಕೆ ತಿರುಗಿ ಅಕ್ಷರಗಳುಕದಡಿದಂತಿದ್ದರೂ, ಆ ಪುಸ್ತಕವನ್ನು ಬಹಳ ಜತನದಿಂದ ಕಾಪಾಡಿಕೊಂಡು ಬರುತ್ತಿದ್ದರು.

ರೇಡಿಯೋದಲ್ಲಿ, ಟೀವಿಯಲ್ಲಿ ಹೊಸ ರುಚಿ ಬರುತ್ತಿದ್ದಂತೆ ಪೇಪರು, ಪೆನ್ನು ಹಿಡಿದುಕೊಂಡು ಓಡಿ ಬಂದು, ಅಡುಗೆ ಮಾಡುವ ವಿಧಾನವನ್ನು ಸರಸರನೆ ಬರೆದುಕೊಳ್ಳುವ ಹೆಂಗಸರೂ ಇದ್ದರು. ಈಗಲೂ ಪೇಪರಿ ನಲ್ಲಿ, ಪುಸ್ತಕದಲ್ಲಿ ಬಂದ ಹೊಸರುಚಿ ವಿಭಾಗದ ಪೇಜನ್ನು ಹರಿದಿಟ್ಟು ಅದರದ್ದೇ ಪುಸ್ತಕ ಮಾಡಿದ ವರೂ ಕಡಿಮೆ ಇಲ್ಲ. ಈಗಲೂ ಹೆಚ್ಚಿನ ಪತ್ರಿಕೆಗಳಲ್ಲಿ ಹೊಸರುಚಿ ವಿಭಾಗಕ್ಕೆ ಪ್ರಾಮುಖ್ಯತೆ ಇದೆ. ನಮ್ಮದೀಗ ಸ್ಮಾರ್ಟ್‌ಫೋನ್‌ ಯುಗ. ನಮ್ಮ ಫೋನ್‌ಗಳಲ್ಲಿ ಇರುವ ಸ್ಮಾರ್ಟ್‌ ಆಪ್‌ಗ್ಳು ಜನರನ್ನು ಸ್ಮಾರ್ಟ್‌ ಆಗಿಸಿದವು. ಅದರಲ್ಲೊಂದು ಯೂಟ್ಯೂಬ್. ಎಲ್ಲಿಂದಲೋ ಬಂದವರು, ಬಗೆಬಗೆಯ ಅಡುಗೆ ಮಾಡಿ ತೋರಿಸಿದರು. ಅದನ್ನು ನೋಡಿಕೊಂಡು ಅಡುಗೆಕಲಿತವರಿಗೆ ಲೆಕ್ಕವಿಲ್ಲ. ನಿಜ ಹೇಳಬೇಕೆಂದರೆ, ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಅಡುಗೆ ಮಾಡುವಕಲೆಯನ್ನು ಯು ಟ್ಯೂಬ್‌ ಹೇಳಿಕೊಟ್ಟಿದೆ. ಆ ಮೂಲಕ ಅಡುಗೆ ಮನೆಯಲ್ಲಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದೆ.

 

– ಗೀತಾ ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next