ಬಸವಕಲ್ಯಾಣ: ರಾಜ್ಯ ಕಾಂಗ್ರಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಸಾಕೆ ಶೈಲಜಾನಾಥ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಪಕ್ಷದ ಬೂತ್ ಕಮಿಟಿ ಪರಿಶೀಲಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಜನರಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಗೆ ಪ್ರಯತ್ನಿಸಬೇಕು.
ಕೇಂದ್ರದಲ್ಲಿ ಆಡಳಿದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಜನ ವಿರೋಧಿ ನೀತಿ ಹಾಗೂ ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾದ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಸಬೇಕು. ಬಸವಕಲ್ಯಾಣ ತಾಲೂಕಿನಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ಮೂಲಕ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ಕನಿರಾಮ ರಾಠೊಡ ಮಾತನಾಡಿದರು. ಪಕ್ಷದ ಮುಖಂಡ ಬಿ.ನಾರಾಯಣರಾವ, ನಗರ ಘಟಕದ ಅಧ್ಯಕ್ಷ ಮೀರ್ ಅಜರಲಿ ನವರಂಗ, ಎಪಿಎಂಸಿ ಸದಸ್ಯರಾದ ದಾವುದ್ ಮಂಠಾಳ, ಪಂಕಜ ಸೂರ್ಯವಂಶಿ,
ಜಿಲ್ಲಾ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿ ಶರಣು ಆಲಗೂಡ, ನ್ಯಾಯವಾದಿ ಅಮಾನತ ಅಲಿ, ಯುವ ಕಾಂಗ್ರಸ್ ತಾಲೂಕು ಅಧ್ಯಕ್ಷ ಮಿನಾಜ್, ಪ್ರಮುಖರಾದ ಅನೀಲ ಪಾಟೀಲ, ಶಿರಾಜ ಸಿಕಂದರ ಇದ್ದರು.
ತಾಲೂಕಿನ ಕಲಕೋರಾ, ಕಲಖೋರಾ ತಾಂಡಾ, ಚಿಕನಾಗಾಂವ, ಚಿಕನಾಗಾಂವ ವಾಡಿ, ಮುಡಬಿ, ಎಕಲೂರ, ಬಸವಕಲ್ಯಾಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಬೂತ್ ಕಮಿಟಿ ಪರಿಶೀಲಿಸಿದರು.