Advertisement

ಕಾಂಗ್ರೆಸ್‌ ಸಾಧನೆ ಜನರಿಗೆ ಮನವರಿಕೆ ಮಾಡಿ

01:30 PM Apr 15, 2022 | Team Udayavani |

ದೊಡ್ಡಬಳ್ಳಾಪುರ: ಬಿಜೆಪಿ ಆಡಳಿತದಲ್ಲಿ ಅಗತ್ಯ ವಸ್ತು ಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ಥರವಾಗಿದೆ. ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿ ಎಲ್ಲ ವಸ್ತುಗಳು ದುಪ್ಪಟ್ಟಾಗಿವೆ. ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿನ ದೇಶ, ರಾಜ್ಯ ಹೇಗಿತ್ತು ಎಂಬುದ ಜನಸಾಮಾನ್ಯರಿಗೆ ತಿಳಿಸಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

Advertisement

ನಗರದ ಸಮೃದ್ಧಿ ಪಾರ್ಟಿ ಹಾಲ್‌ನಲ್ಲಿ ನಡೆದ ಕಾಂಗ್ರೆಸ್‌ ನಗರ ಬ್ಲಾಕ್‌ ಸಮಿತಿ ಪದಾಧಿಕಾರಿಗಳ ಪದ ಗ್ರಹಣ ಸಮಾರಂಭದಲ್ಲಿ ಆದೇಶಪತ್ರ ವಿತರಿಸಿ ಮಾತ ನಾಡಿದ ಅವರು, ರಾಜ್ಯದಲ್ಲಿ ರೈತರು ಕಷ್ಟಪಟ್ಟು ಬೆಳೆದಿರುವ ರಾಗಿಯನ್ನು ಖರೀದಿಸಲು ರಾಜ್ಯ ಸರ್ಕಾರ ದಲ್ಲಿ ಹಣ ಇಲ್ಲದಾಗಿದೆ. ತಾಲೂಕಿನಲ್ಲಿ ಇನ್ನು ಮೂರು ಸಾವಿರ ಜನ ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಲು ಕಾದುಕುಳಿತುಕೊಳ್ಳುವಂತಾಗಿದೆ ಎಂದು ದೂರಿದರು.

ಅಭಿವೃದ್ಧಿ ಗಮನಿಸಿ: ಟಿಎಪಿಎಂಸಿಎಸ್‌ ನಿರ್ದೇಶಕ ಎಂ.ಗೋವಿಂದರಾಜ್‌ ಮಾತನಾಡಿ, ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಒಂದು ತಿಂಗಳ ಕಾಲ ನಗರ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲೂ ದಿನದಲ್ಲಿ ಎರಡು ಸಮಯ ಉಚಿತವಾಗಿ ಊಟ ನೀಡಲಾಯಿತು. ಆದರೆ, ಯುಗಾದಿ ಹಬ್ಬಕ್ಕೆ ಅಕ್ಕಿ, ಬೆಲ್ಲ ಕೊಟ್ಟಿದ್ದನ್ನು ಮಾತ್ರ ದೊಡ್ಡದು ಎಂದು ಕೆಲವರು ಮಾತನಾಡುವುದು ಸರಿಯಲ್ಲ. ಕ್ಷೇತ್ರದ ಜನರು ಕಿಟ್‌ಗಳ ವಿತರಣೆ ಹಿಂದೆ ಹೋಗದೆ ಅಭಿವೃದ್ಧಿ ಕಡೆಗೆ ನೋಡಬೇಕಿದೆ ಎಂದರು.

ಹೆಚ್ಚಿನ ಆಸಕ್ತಿ ವಹಿಸಬೇಕಿದೆ: ಕಾಂಗ್ರೆಸ್‌ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಎಂ.ಬೈರೇಗೌಡ ಮಾತನಾಡಿ, ಬೆಂಗ ಳೂರು ಗ್ರಾಮಾಂತರ ಜಿಲ್ಲೆಯಲ್ಲೇ ನಮ್ಮ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಈಗ 58 ಸಾವಿರ ಜನ ಮತದಾರರು ಸದಸ್ಯತ್ವ ಪಡೆದಿದ್ದಾರೆ. ಏ.15ರವರೆಗೂ ಸದಸ್ಯತ್ವ ನೋಂದಣಿಗೆ ಅವಕಾಶ ಇದೆ. ಕನಿಷ್ಠ 75 ಸಾವಿರ ಮತದಾರರನ್ನು ಸದಸ್ಯರನ್ನಾಗಿ ಮಾಡಬೇಕಿದೆ. ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಪ್ರದೆಶದಲ್ಲಿ ಸದಸ್ಯತ್ವ ನೋಂದಣಿ ಕಡಿಮೆಯಾಗಿದೆ. ಈ ಪ್ರದೇಶದಲ್ಲಿನ ಪಕ್ಷದ ಮುಖಂಡರು ಹೆಚ್ಚಿನ ಆಸಕ್ತಿ ವಹಿಸಬೇಕಿದೆ ಎಂದರು.

ನಗರ ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು: ಅಧ್ಯಕ್ಷ ರಾಗಿ ಕೆ.ಪಿ.ಜಗನಾಥ್‌, ಉಪಾಧ್ಯಕ್ಷರಾಗಿ ಎನ್‌. ಕೊಟ್ರೇಶ್‌, ಕೆ.ಮಂಜುಳಮ್ಮ, ಬಿ.ವಿರೂಪಾಕ್ಷ, ಎಸ್‌.ಸಿ. ಕೃಷ್ಣಮೂರ್ತಿ, ಇರ್ಫಾನ್‌ ಅಹಮದ್‌ ಷರೀಫ್‌, ಡಿ. ಪಿ.ಅಶ್ವತ್ಥಪ್ಪ. ಪ್ರಧಾನ ಕಾರ್ಯದರ್ಶಿಗಳಾಗಿ ಎನ್‌. ಆಂಜನಮೂರ್ತಿ, ಜವಾಜಿ ರಾಜೇಶ್‌, ಹೆಚ್‌.ವಿ. ಅಖೀಲೇಶ್‌, ಮೋಸಿನಾ ಮುನ್ನಾ ಹಾಗೂ ಕಾರ್ಯ ದರ್ಶಿಗಳಾಗಿ ಎಸ್‌.ಎಸ್‌.ಗುರುರಾಜ, ನಾರಾಯಣ ಸ್ವಾಮಿ, ಯಶೋಧಮ್ಮ, ಖಜಾಂಚಿ ಜಿ.ಕೆ.ಮಧು ಕುಮಾರ್‌, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಎಲ್.ಮಮತಾ, ಮುಜೀಬ್‌ ಉನ್ನೀಸಾ, ಫಯಾಜ್‌ ಸೇರಿದಂತೆ 21ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ಕೆ.ಪಿ.ಜಗನ್ನಾಥ್‌, ಕಸಬಾ ಬ್ಲಾಕ್‌ ಅಧ್ಯಕ್ಷ ವೆಂಕಟೇಶ್‌, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಒಬಿಸಿ ನಗರ ಘಟಕದ ಅಧ್ಯಕ್ಷ ಪು. ಮಹೇಶ್‌, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಷಿರ್‌, ಎಸ್ಸಿ ಘಟಕದ ಅಧ್ಯಕ್ಷ ಬಿ.ಮುನಿರಾಜು, ನಗರ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ, ಮುಖಂಡ ಬಿ.ಜಿ. ಹೇಮಂತರಾಜ್‌, ವಿಶ್ವನಾಥರೆಡ್ಡಿ, ಮಂಜುನಾಥ್‌, ರಾಮಣ್ಣ, ನಗರಸಭೆ ಸದಸ್ಯ ಆನಂದಕುಮಾರ್‌, ಸುಬ್ರಹ್ಮಣಿ, ನಾಗಮಣಿ, ನಾಗರಾಜ್‌ ಹಾಗೂ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next