ಪೂಜಾಪುರ: ಜೈಲಿನಲ್ಲಿ ತನಗೆ ಬಡಿಸಿದ ಮಟನ್ ಕರಿ ಪ್ರಮಾಣದಿಂದ ತೃಪ್ತನಾಗದ ಕೇರಳದ ಕೈದಿಯೊಬ್ಬ ರೊಚ್ಚಿಗೆದ್ದು ಜೈಲು ಅಧಿಕಾರಿಗಳನ್ನು ಹೊಡೆದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ವಯನಾಡ್ ಮೂಲದ ಫೈಜಾಸ್ ನನ್ನು ಡ್ರಗ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಪಡಿಸಿ ಇಲ್ಲಿನ ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಹೆಚ್ಚಿನ ಭದ್ರತೆಯ ಸೆಲ್ ನಲ್ಲಿ ಇರಿಸಲಾಗಿದೆ.
ಶನಿವಾರ ಮಟನ್ ಕರಿ ಸೇರಿದಂತೆ ಆಹಾರವನ್ನು ಬಡಿಸಿದ ನಂತರ ಆತ ಜೈಲು ಅಧಿಕಾರಿಗಳನ್ನು ಹೊಡೆದಿದ್ದಾನೆ. ಅಧಿಕಾರಿಗಳ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪರಾಧಿ ಎಲ್ಲರಿಗಿಂತಲೂ ಹೆಚ್ಚಿನ ಪ್ರಮಾಣವನ್ನು ಬಯಸಿ ಆವರಣದಲ್ಲಿ ಸಮಸ್ಯೆ ಸೃಷ್ಟಿಸಿದ್ದಾನೆ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸಾಮಾನ್ಯವಾಗಿ ಶನಿವಾರದಂದು ನಾವು ಕೈದಿಗಳಿಗೆ ಮಟನ್ ಕರಿ ಬಡಿಸುತ್ತೇವೆ. ಅವರಿಗೆ ಸಾಮಾನ್ಯ ಪ್ರಮಾಣವನ್ನು ನೀಡಲಾಯಿತು ಆದರೆ ಆತ ಹೆಚ್ಚಿನದನ್ನು ಕೇಳಿ ರಾದ್ದಾಂತ ಸೃಷ್ಟಿಸಿ ತ್ಯಾಜ್ಯ ಬುಟ್ಟಿಗೆ ಎಸೆದ. ಉಪ ಅಧೀಕ್ಷಕರು ಸೇರಿದಂತೆ ಹಿರಿಯ ಜೈಲು ಅಧಿಕಾರಿಗಳ ಮೇಲೆಯೂ ಮ್ಯಾನ್ ಹ್ಯಾಂಡಲ್ ಮಾಡಿದ್ದಾನೆ” ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.