Advertisement

ವಾರದೊಳಗೆ ಸದನ ಬಲಾಬಲಕ್ಕೆ ಅವಕಾಶ ಕೊಡಿ: ರಾಜ್ಯಪಾಲರಿಗೆ ಎಜಿ ಸಲಹೆ

07:38 PM Feb 13, 2017 | Team Udayavani |

ಚೆನ್ನೈ :  ಓ ಪನ್ನೀರಸೆಲ್ವಂ ಅಥವಾ ವಿ ಕೆ ಶಶಿಕಲಾ ಅವರಲ್ಲಿ ಯಾರಿಗೆ ಬಹುಮತ ಇದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಒಂದು ವಾರದೊಳಗೆ ಸದನ ಬಲಾಬಲ ಪರೀಕ್ಷೆ ನಡೆಸುವಂತೆ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು ತಮಿಳು ನಾಡು ರಾಜ್ಯಪಾಲ ವಿದ್ಯಾಶಂಕರ ರಾವ್‌ ಅವರಿಗೆ ಸಲಹೆ ನೀಡಿದ್ದಾರೆ.

Advertisement

“ಜಗದಾಂಬಿಕಾ ಪಾಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು  ಉದಾಹರಣೆಯಾಗಿ ಇರಿಸಿಕೊಂಡು ಒಂದು ವಾರದೊಳಗೆ ಸದನದ ವಿಶೇಷ ಸಮಾವೇಶವನ್ನು ಕರೆದು  ಬಲಾಬಲ ಪರೀಕ್ಷೆ ನಡೆಸಬೇಕೆಂದು ರೋಹಟಗಿ ಅವರು ರಾಜ್ಯಪಾಲರಿಗೆ ಸಲಹೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಈ ಹಿಂದೆ 1998ರಲ್ಲಿ ಮುಖ್ಯಮಂತ್ರಿಯಾಗಲು ಜಗದಾಂಬಿಕಾ ಪಾಲ್‌ ಮತ್ತು ಕಲ್ಯಾಣ್‌ ಸಿಂಗ್‌ ಅವರಲ್ಲಿ ಯಾರಿಗೆ ಬಹುಮತ ಇದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು ಎಂಬ ಪೂರ್ವ ನಿದರ್ಶನವನ್ನು ಅನುಸರಿಸುವಂತೆ ರೋಹಟಗಿ ಅವರು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್‌ ಅವರಿಗೆ ಸಲಹೆ ನೀಡಿರುವುದಾಗಿ ತಿಳಿದುಬಂದಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next