ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಸ್ಪಷ್ಟವಾಗಿದ್ದರೂ, ಕೆಲವರು ಸತ್ಯಾಂಶವನ್ನು ಮರೆಮಾಚಿ ವ್ಯವಸ್ಥಿತ ಷಡ್ಯಂತ್ರ ಮೂಲಕ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಆರೋಪಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಲ್ಲೇಶ್ವರದ ಬಿಜೆಪಿ ಕಚೇರಿ ಯಲ್ಲಿ ಸೋಮವಾರ ಶಾಸಕರು, ಸಂಸದರಿಗಾಗಿ ಹಮ್ಮಿಕೊಂಡಿದ್ದ ವಿಶೇಷ ವಿಚಾರಗೋಷ್ಠಿಯಲ್ಲಿ ಮಾತ ನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪೌರತ್ವ ನೀಡುವುದಕ್ಕೆ ಜಾರಿಗೆ ತರಲಾಗಿದೆ ಎಂಬುದು ಕಾಯ್ದೆಯಲ್ಲೇ ಸ್ಪಷ್ಟವಾಗಿದೆ. ಆದರೆ, ಕೆಲವರು ತಿದ್ದುಪಡಿ ಕಾಯ್ದೆ ಹೆಸರಿನಲ್ಲಿ ಅಮಾಯಕರನ್ನು ಹಿಂಸೆಗೆ ಪ್ರಚೋದಿಸುತ್ತಿದ್ದಾರೆ.
ಕಾಯ್ದೆಯನ್ನು ತಿರುಚಿರುವ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಆರೋಪಿಸಿದರು. ಮೋದಿಯವರ ಆಡಳಿತಾವಧಿಯಲ್ಲಿ ಪಾಕಿಸ್ತಾನ ಸೇರಿ ವಿದೇಶಗಳ 600 ಜನರಿಗೆ ಪೌರತ್ವ ನೀಡಲಾಗಿದೆ. ಪೌರತ್ವ ವಿಷಯದಲ್ಲಿ ಧರ್ಮದ ಹೆಸರಿನ ತಾರತಮ್ಯ ಮಾಡುತ್ತಿಲ್ಲ. ಸೋನಿಯಾ ಗಾಂಧಿಯವರಿಗೂ 1979ರಲ್ಲಿ ಪೌರತ್ವ ನೀಡ ಲಾಗಿತ್ತು. ಆಗ ಅವರಿಗೆ ಯಾವ ಧರ್ಮ ಎಂದು ಕೇಳಿರಲಿಲ್ಲ. 1
972ರಲ್ಲಿ ಉಗಾಂಡದಲ್ಲಿ ವಿದೇಶಿಗರನ್ನು ಹೊರ ಗಟ್ಟಿದಾಗ, ಭಾರತೀಯರೆಲ್ಲ ಸ್ವದೇಶಕ್ಕೆ ವಾಪಸ್ಸಾದರು. ಆಗ ಅವರಿಗೆ ಭಾರತದ ಪೌರತ್ವ ನೀಡಲಾಗಿತ್ತು ಎಂದು ವಿವರಿಸಿದರು. ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ 130 ಕೋಟಿ ಜನರಿಗೆ ಯಾವುದೇ ತೊಂದರೆ ಆಗು ವುದಿಲ್ಲ. ಇದು ಮಾನವೀಯ ಕಾಯ್ದೆಯಾಗಿದೆ.
ಆದರೆ, ಕಾಂಗ್ರೆಸ್ ಮತ್ತು ಕೆಲ ಪ್ರತಿಪಕ್ಷಗಳು ಇದನ್ನು ಸಮಸ್ಯೆಯನ್ನಾಗಿ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ದೂರಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಗೋವಿಂದ ಎಂ.ಕಾರಜೋಳ, ಜಗದೀಶ್ ಶೆಟ್ಟರ್ ಮತ್ತು ಪಕ್ಷದ ಸಂಸದರು, ಶಾಸಕರು ಉಪಸ್ಥಿತರಿದ್ದರು.