Advertisement

ವಿವಾದವಾದ ಬಿಎಸ್‌ವೈ ಮನೆ ಶೋಧ

11:57 AM Jul 18, 2017 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಪ್ರತಿ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಆಪ್ತ ವಿನಯ್‌ ಅಪಹರಣ ಯತ್ನ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಪೊಲೀಸರು ತಡರಾತ್ರಿ ಶೋಧ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ.

Advertisement

ತಮ್ಮ ಮನೆಯಲ್ಲಿ ಮಹಾಲಕ್ಷಿ ಲೇಔಟ್‌ ಪೊಲೀಸರು ಶನಿವಾರ ತಡರಾತ್ರಿ ಶೋಧ ನಡೆಸಿರುವ ಬಗ್ಗೆ ಯಡಿಯೂರಪ್ಪ ಅವರು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಕೆ.ಎಸ್‌.ಈಶ್ವರಪ್ಪ,  ಜಗದೀಶ್‌ ಶೆಟ್ಟರ್‌ ಅವರು ಪೊಲೀಸರ ಕ್ರಮಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೂ ಈ ಕ್ರಮವನ್ನು ಖಂಡಿಸಿದ್ದಾರೆ.

ಈಶ್ವರಪ್ಪ ಅವರ ಆಪ್ತ ವಿನಯ್‌ ಅಪಹರಣ ಯತ್ನ ಮತ್ತು ಹಲ್ಲೆ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಆಪ್ತ ಸಂತೋಷ್‌ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸುವ ನೆಪದಲ್ಲಿ ಮಹಾಲಕ್ಷ್ಮಿ ಲೇಔಟ್‌ ಪೊಲೀಸರು ಶನಿವಾರ ರಾತ್ರಿ ಬಿಎಸ್‌ವೈ  ಮನೆಗೆ ತೆರಳಿ ಶೋಧ ನಡೆಸಿದ್ದರು. ಈ ಕುರಿತಂತೆ ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದ ಯಡಿಯೂರಪ್ಪ, “ತನಿಖೆ ನಡೆಸುವುದಾದರೆ ಹಗಲು ಹೊತ್ತಿನಲ್ಲಿ ನಡೆಸಲಿ.

ಸಂತೋಷ್‌ ನನ್ನ ಸಂಬಂಧಿ ಎನ್ನುವುದು ಸತ್ಯ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಿ. ಈ ಬಗ್ಗೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರೊಂದಿಗೆ ಚರ್ಚಿಸಿದ್ದೇನೆ. ನಿಮ್ಮನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ, ಸಾಧ್ಯವಾಗಲಿಲ್ಲ. ಅನಗತ್ಯವಾಗಿ ಇತರರಿಗೆ ಕಿರುಕುಳ ನೀಡುವುದು ಬೇಡ. ಪ್ರಾಮಾಣಿಕ ತನಿಖೆ ನಡೆಸಿ’ ಎಂದು ಹೇಳಿದ್ದರು.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಗದೀಶ್‌ ಶೆಟ್ಟರ್‌, ಜವಾಬ್ದಾರಿಯುತ ಸ್ಥಾನದಲ್ಲಿರುವ ಯಡಿಯೂರಪ್ಪ ಅವರ ಮನೆಯನ್ನ ಮಧ್ಯರಾತ್ರಿ ತಲಾಶ್‌ ಮಾಡಿದ್ದು ಸರಿಯಲ್ಲ. ಅಗತ್ಯವಿದ್ದರೆ ಹಗಲಲ್ಲೇ ಹೋಗಿ ಶೋಧ ನಡೆಸಬೇಕಿತ್ತು ಅಥವಾ ಯಡಿಯೂರಪ್ಪ ಅವರನ್ನು ನೇರವಾಗಿ ಪ್ರಶ್ನಿಸಬಹುದಿತ್ತು. ಆದರೆ, ರಾಜಕೀಯ ದುರುದ್ದೇಶದಿಂದ ರಾತ್ರಿ ಶೋಧ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

ಇನ್ನೊಂದೆಡೆ ಈಶ್ವರಪ್ಪ ಕೂಡ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು,  ಮಧ್ಯರಾತ್ರಿ ಹೋಗಿ ಶೋಧ ಮಾಡುವ ಅವಶ್ಯಕತೆ ಏನಿತ್ತು? ಇÇÉೇನು ಪೊಲೀಸ್‌ ರಾಜ್ಯ ಅಧಿಕಾರದಲ್ಲಿದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಅವರ ಮನೆಯನ್ನು ಮಧ್ಯರಾತ್ರಿ ಶೋಧ ಮಾಡುವ ಅಗತ್ಯ ಇರಲಿಲ್ಲ. ಮನೆ ಶೋಧ ನಡೆಸಲು ಪೊಲೀಸರು ಸರ್ಚ್‌ ವಾರಂಟ್‌ ಹೊಂದಿದ್ದರಾ ಎಂಬುದನ್ನು ಸರ್ಕಾರ ತಿಳಿಸಬೇಕು. ಪ್ರತಿಪಕ್ಷಗಳನ್ನು ಹತ್ತಿಕ್ಕಲು ಪೊಲೀಸರನ್ನು ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನಾವ್ಯಾರೂ ಸೇಡಿನ ರಾಜಕೀಯ ಮಾಡುತ್ತಿಲ್ಲ. ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ. ತನಿಖೆ ನಡೆಸುವವರು ಯಾವಾಗ, ಎಲ್ಲಿ ಹೋಗಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ. ಇದೇ ಸಮಯದಲ್ಲಿ ಹೋಗಿ ಎಂದು ನಾವು ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದರಲ್ಲಿ ಸರ್ಕಾರ ಅಥವಾ ಕಾಂಗ್ರೆಸ್‌ಗೆ ಯಾವುದೇ ದುರುದ್ದೇಶ ಇಲ್ಲ.
-ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next