Advertisement

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

09:21 AM Mar 01, 2021 | Team Udayavani |

ಅಹ್ಮದಾಬಾದ್‌: ಇಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯ ಎರಡೇ ದಿನದಲ್ಲಿ ಮುಗಿದು ಹೋಯಿತು. ಇಂಗ್ಲೆಂಡ್‌ ವಿರುದ್ಧ ಭಾರತ ತಂಡ ಗೆದ್ದೂ ಆಯಿತು. ಅಲ್ಲಿಗೆ ಅಂಕಣ ಸರಿಯಿಲ್ಲ, ಸರಿಯಿದೆ ಎನ್ನುವುದರ ಬಗ್ಗೆ ಶುರುವಾದ ಚರ್ಚೆ ಈಗ ತಾರಕಕ್ಕೇರಿದೆ.

Advertisement

ಇದರ ವಿರುದ್ಧ ಇಂಗ್ಲೆಂಡ್‌ನ‌ ಮಾಜಿ ಕ್ರಿಕೆಟಿಗರು ಸತತವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದುಕಡೆ ಭಾರತೀಯರು ಪಿಚ್‌ ಬೆಂಬಲಕ್ಕೆ ನಿಂತಿದ್ದಾರೆ. ಈ ವಾದ ವಿವಾದದಲ್ಲಿ ಯಾರ್ಯಾರು ಏನು ಹೇಳಿದ್ದಾರೆ ಎಂಬ ಚುಟುಕು ಸಂಗ್ರಹ ಇಲ್ಲಿದೆ

ಉತ್ತಮ ಟೆಸ್ಟ್‌ ಅಂಕಣವೆಂದರೇನು? ಅದನ್ನು ನಿರ್ಧರಿಸುವವರು ಯಾರು? ಇಂತಹ ಚರ್ಚೆಗಳಿಂದೆಲ್ಲ ಹೊರಬನ್ನಿ. ಇಂಗ್ಲೆಂಡ್‌ನ‌ ಯಾವುದೇ ಆಟಗಾರ ಪಿಚ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಾನು ನೋಡಿಲ್ಲ. ಅವರೆಲ್ಲ ಸುಧಾರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

 ಆರ್.ಅಶ್ವಿ‌ನ್, ಭಾರತ ತಂಡದ ಸ್ಪಿನ್ನರ್‌

ಯಾವಾಗ ಚೆಂಡು ಸ್ಪಿನ್‌ ಆಗಲು ಶುರುವಾಗುತ್ತದೋ, ಆಗ ವಿವಾದಗಳು ಶುರುವಾಗುತ್ತವೆ. ಹೀಗೇಕೆಂದು ನನಗೆ ಅರ್ಥವಾಗುತ್ತಿಲ್ಲ. ನಾನು ರಾತ್ರಿಯಿಡೀ ಅಹ್ಮದಾಬಾದ್‌ ಪಂದ್ಯವನ್ನು ನೋಡಿದ್ದೇನೆ. ಬಹಳ ಖುಷಿ ನೀಡಿತು.

Advertisement

 ನಥನ್‌ ಲಿಯೋನ್‌, ಆಸ್ಟ್ರೇಲಿಯ ಸ್ಪಿನ್ನರ್‌

ಇದನ್ನೂ ಓದಿ:ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ : 8ನೇ ಸ್ಥಾನಕ್ಕೆ ಏರಿದ ರೋಹಿತ್‌ ಶರ್ಮ

ಅಹ್ಮದಾಬಾದ್‌ ಪಿಚ್‌ ಐಸಿಸಿಗೆ ಒಪ್ಪಿಗೆಯಾಗುವುದಾದರೆ, ಟೆಸ್ಟ್‌ ಕ್ರಿಕೆಟ್‌ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.

 ಡೇವಿಡ್‌ ಲಾಯ್ಡ್, ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ

ವಿಶ್ವದ ಬಹುದೊಡ್ಡ ಕ್ರಿಕೆಟ್‌ ಮೈದಾನವೆನಿಸಿಕೊಂಡಿರುವ ಅಹ್ಮದಾಬಾದ್‌ನಲ್ಲಿ ಪಂದ್ಯವೊಂದು ಎರಡು ದಿನದಲ್ಲಿ ಮುಗಿಯುವುದು ಶೋಭೆಯೆನಿಸುವುದಿಲ್ಲ. ಒಂದು ವೇಳೆ ಅಹ್ಮದಾಬಾದ್‌ ನಲ್ಲಿ ನಡೆಯುವ 4ನೇ ಟೆಸ್ಟ್‌ ಕೂಡಾ ಹೀಗೆಯೇ ಆದರೆ, ಐಸಿಸಿ ಭಾರತದ ಅಂಕಗಳನ್ನು ತಡೆಹಿಡಿಯಬೇಕು.

 ಮಾಂಟಿ ಪನೇಸರ್‌, ಇಂಗ್ಲೆಂಡ್‌ ಮಾಜಿ ಸ್ಪಿನ್ನರ್‌

ಇಂಗ್ಲೆಂಡ್‌ ತರಬೇತುದಾರ ಕ್ರಿಸ್‌ ಸಿಲ್ವರ್‌ವುಡ್‌ ಪಿಚ್‌ ಅನ್ನು ದೂಷಿಸುವುದು, ಸೋತವರ ಮನಃ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಹೀಗೆ ದೂಷಿಸುವುದರ ಬದಲು, ಮುಂದಿನ ಟೆಸ್ಟ್‌ಗೆ ಹೇಗೆ ತಯಾರಿ ಮಾಡಿಕೊಳ್ಳುವುದು, ದೋಷಗಳನ್ನು ತಿದ್ದಿಕೊಳ್ಳುವುದು ಹೇಗೆ ಎಂಬ ಕಡೆ ಗಮನಹರಿಸಬೇಕು.

 ಕೆವಿನ್‌ ಪೀಟರ್ಸನ್‌, ಇಂಗ್ಲೆಂಡ್‌ ಕ್ರಿಕೆಟ್‌ ಮಾಜಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next