Advertisement

Controversial Maldives President ಭಾರತಕ್ಕೆ !; ಇಂದು ರಾಷ್ಟ್ರಪತಿ, ಪ್ರಧಾನಿ ಮೋದಿ ಭೇಟಿ

01:55 AM Oct 07, 2024 | Team Udayavani |

ಹೊಸದಿಲ್ಲಿ: ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಅವರು ರವಿವಾರ ಭಾರತಕ್ಕೆ ಭೇಟಿ ನೀಡಿದ್ದು, ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಸ್ವಾಗತಿಸಿದ್ದಾರೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡೆದಿದೆ.

Advertisement

ಮುಯಿಜ್ಜು ಅವರ ಜತೆಗೆ ಅವರ ಪತ್ನಿ ಸಾಜಿದಾ ಮೊಹಮ್ಮದ್‌ ಅವರೂ ಆಗಮಿಸಿದ್ದು, ಅ.10ರ ವರೆಗೆ ಅವರು ಭಾರತ ಪ್ರವಾಸದಲ್ಲಿ ಇರಲಿದ್ದಾರೆ. ಕಳೆದ ವರ್ಷ ಮುಯಿಜ್ಜು ಅವರು, ಮಾಲ್ದೀವ್ಸ್‌ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದು ಅವರ ಮೊದಲ ಭಾರತ ಭೇಟಿಯಾಗಿದೆ. ಮಾಲ್ದೀವ್ಸ್‌ನಲ್ಲಿ ಇರುವ ಭಾರತೀಯ ಯೋಧರನ್ನು ತೆರವುಗೊಳಿಸಲು ಕೂಡ ಮುಯಿಜ್ಜು ಆದೇಶ ನೀಡಿದ್ದರು.

ಸೋಮವಾರ ರಾಷ್ಟ್ರಪತಿ ಭವನದಲ್ಲಿ ಅವರಿಗೆ ಅಧಿಕೃತ ಸ್ವಾಗತ ದೊರೆಯಲಿದೆ. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ರಾಜ್‌ಘಾಟ್‌ನಲ್ಲಿ ಪುಷ್ಪಾರ್ಚನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಈ ವೇಳೆ ಆರ್ಥಿಕ ಸಹಕಾರ, ಸಾಗರ ಭದ್ರತೆ, ಪ್ರಾದೇಶಿಕ ಸವಾಲು ಸಂಬಂಧಿಸಿದ ವಿವಿಧ ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಲಿದ್ದಾರೆ.

ಬೆಂಗಳೂರಿಗೂ ಮುಯಿಜ್ಜು: ಅಂತಾರಾಷ್ಟ್ರೀಯ ಉದ್ಯಮ ಹಾಗೂ ಹೂಡಿಕೆಯ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೂ ವ್ಯವಹಾರಿಕ ಸಭೆಗಾಗಿ ಮುಯಿಜ್ಜು ಬರಲಿದ್ದಾರೆ ಎನ್ನಲಾಗಿದೆ. ಆದರೆ ಬೆಂಗಳೂರು ಭೇಟಿ ಇನ್ನೂ ದೃಢಪಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next