Advertisement

Chess Olympiad: ಚೆಸ್‌ ಸಾಧಕರಿಗೆ ಮೋದಿ ಸಮ್ಮಾನ

11:16 PM Sep 25, 2024 | Team Udayavani |

ಹೊಸದಿಲ್ಲಿ: ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪುರುಷರ ಹಾಗೂ ವನಿತಾ ತಂಡಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಮ್ಮಾನಿಸಿದರು. ಭಾರತದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದರು.

Advertisement

ಡಿ. ಗುಕೇಶ್‌, ಅರ್ಜುನ್‌ ಎರಿಗೇಸಿ, ಆರ್‌. ಪ್ರಜ್ಞಾನಂದ, ವಿದಿತ್‌ ಗುಜರಾತಿ, ಪಿ. ಹರಿಕೃಷ್ಣ, ಆರ್‌. ವೈಶಾಲಿ, ಡಿ. ಹರಿಕಾ, ತಾನಿಯಾ ಸಚ್ದೇವ್‌, ದಿವ್ಯಾ ದೇಶ್‌ಮುಖ್‌, ವಂತಿಕಾ ಅಗರ್ವಾಲ್‌ ಭಾರತದ ವಿಜೇತ ತಂಡದ ಸದಸ್ಯರಾಗಿದ್ದರು.

ಈ ಸಂದರ್ಭದಲ್ಲಿ ವಿಜೇತ ಆಟಗಾರರು ಮೋದಿ ಅವರಿಗೆ ಚೆಸ್‌ ಬೋರ್ಡ್‌ ಒಂದನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪ್ರಜ್ಞಾನಂದ ಮತ್ತು ಅರ್ಜುನ್‌ ಅವರು “ಕ್ವಿಕ್‌’ ಗೇಮ್‌ ಒಂದನ್ನು ಆಡಿದರು. ಇದನ್ನು ಮೋದಿ ಅವರು ಬಹಳ ಕುತೂಹಲದಿಂದ ವೀಕ್ಷಿಸಿದರು.

3.2 ಕೋಟಿ ರೂ. ಬಹುಮಾನ
ಚೆಸ್‌ ಒಲಿಂಪಿಯಾಡ್‌ ಪ್ರಶಸ್ತಿ ವಿಜೇತರಿಗೆ ಎಐಎಫ್ಸಿ ಅಧ್ಯಕ್ಷ ನಿತಿನ್‌ ನಾರಂಗ್‌ 3.2 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ.

Advertisement

ಮೋದಿ ಭೇಟಿ ಮಾಡಲು ಭಾಕು ಕೂಟದಿಂದ ಹಿಂದೆ ಸರಿದ ವಿದಿತ್‌
ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಭಾರತ ಮೊದಲ ಸಲ ಚಿನ್ನದ ಪದಕ ಗೆಲ್ಲಲು ಮಹತ್ತರ ಪಾತ್ರ ವಹಿಸಿದ್ದ ವಿದಿತ್‌, ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾಕು ತಲುಪಿದ್ದರು. ಆದರೆ ಅಷ್ಟರಲ್ಲಿ, ಪ್ರಧಾನಿ ಮೋದಿ ಅವರು ಚೆಸ್‌ ಒಲಿಂಪಿಯಾಡ್‌ ಚಾಂಪಿಯನ್‌ ಆಟಗಾರರನ್ನು ಸಮ್ಮಾನಿಸುವ ಸುದ್ದಿ ತಿಳಿದ ಕಾರಣ ತವರಿಗೆ ವಾಪಸಾದರು.

“ಗೌರವಾನ್ವಿತ ಪ್ರಧಾನಿಯವರು ನಮ್ಮನ್ನು ಸಮ್ಮಾನಿಸುವ ವಿಷಯ ತಿಳಿಯಿತು. ನಾನು ಈ ಕಾರ್ಯಕ್ರಮದ ಭಾಗವಾಗಲು ಬಯಸಿದ್ದೇನೆ. ಅಲ್ಪಾವಧಿಯಲ್ಲೇ ಅವರು ನಮಗಾಗಿ ಬಿಡುವು ಮಾಡಿಕೊಂಡಿರುವುದು ಸಂತಸ ತಂದಿದೆ’ ಎಂದು ವಿದಿತ್‌ “ಎಕ್ಸ್‌’ನಲ್ಲಿ ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next