Advertisement

ಮನುಷ್ಯನ ಹವ್ಯಾಸಗಳ ಮೇಲೆ ಹತೋಟಿ ಅಗತ್ಯ; ಕಲ್ಲಯ್ಯಜ್ಜನವರು

06:34 PM Feb 23, 2023 | Team Udayavani |

ಹೊಳೆಆಲೂರ: ಭವಿಷ್ಯ ಬದಲಾಗಬೇಕಾದರೆ ಹವ್ಯಾಸದ ಮೇಲೆ ಹತೋಟಿ ಕಾಪಾಡಿಕೊಳ್ಳಬೇಕು. ಇಂದಿನ ಸಂಸ್ಕಾರ ರಹಿತ ಶಿಕ್ಷಣ ವ್ಯವಸ್ಥೆ ಹಾಗೂ ನೈತಿಕ ಮೌಲ್ಯಗಳ ಕುಸಿತದಿಂದ ಇಡೀ ಸಾಮಾಜಿಕ ವ್ಯವಸ್ಥೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.ಹಾಗಾಗಿ, ಮನೆಯಲ್ಲಿ ಮಾತಾ-ಪಿತರು, ಶಾಲೆಯಲ್ಲಿ ಶಿಕ್ಷಕರು, ಸಮಾಜದಲ್ಲಿ ಧಾರ್ಮಿಕ ಸಾಧು, ಸಂತರು, ಗುರು, ಹಿರಿಯರು ಕೆಟ್ಟ ಮಾರ್ಗದಲ್ಲಿರುವವರನ್ನು ತಿದ್ದಿ ತೀಡಿ ಸುಸಂಸ್ಕೃತರನ್ನಾಗಿ ಮಾಡಿದಾಗ ಸರ್ವ ಸಮಾಜ ಸುಂದರವಾಗುತ್ತದೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.

Advertisement

ಬಿ.ಎಸ್‌.ಬೇಲೇರಿ ಗ್ರಾಮದ ಸುಖಮುನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಸುಖಮುನೇಶ್ವರ ಸ್ವಾಮಿಗಳ 62ನೇ ಪುಣ್ಯಸ್ಮರಣೋತ್ಸವ, ಶರಣಬಸವೇಶ್ವರರ ಪುರಾಣ ಮಂಗಲೋತ್ಸವ, ಗ್ರಾಮದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ನಂತರ ಬೃಹತ್‌ ಧಾರ್ಮಿಕ ಸಮಾರಂಭದಲ್ಲಿ ಗ್ರಾಮಸ್ಥರಿಂದ ತಮ್ಮ 1984, 1985ನೇ ತುಲಾಭಾರ ಸ್ವೀಕರಿಸಿ ಮಾತನಾಡಿದರು.

ಮಕ್ಕಳು ಹಾಗೂ ಮಹಿಳೆಯರಿಗೆ ಇಂದು ಶಿಕ್ಷಣ ಹಾಗೂ ಸ್ವಾತಂತ್ರ್ಯಕ್ಕೆ ಕೊರತೆ ಇಲ್ಲ. ಆದರೆ, ಅದರ ಸದ್ಬಳಕೆ ಸಮಾಜಕ್ಕೆ ಆಗುತ್ತಿಲ್ಲ. ಸುಸಂಸ್ಕೃತ ವ್ಯಕ್ತಿ ಸಮಾಜ ಹಾಗೂ ದೇಶಕ್ಕೆ ಎಂದೂ ಹೊರೆಯಾಗಲಾರ. ಕಾರಣ ನೈತಿಕ ಮೌಲ್ಯಗಳನ್ನು ಶಿಕ್ಷಣ ನೀಡಿದರೆ, ಸಂಸ್ಕಾರ ಹೆತ್ತವರವರಿಂದ ಹರಿದು ಬರಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ನವಲಗುಂದ ಗವಿ ಮಠದ ಬಸವಲಿಂಗ ಸ್ವಾಮಿಗಳು ಗ್ರಾಮಸ್ಥರಿಂದ ಜೋಡಿ ತುಲಾಭಾರ ಸ್ವೀಕರಸಿ ಮಾತನಾಡಿ, ಸರ್ವಧರ್ಮ ಸಂಗಮವಾಗಿರುವ ಭಾರತೀಯರ ಸಾಮಾಜಿಕ, ರಾಜಕೀಯ ವ್ಯವಸ್ಥೆ ಸೇರಿದಂತೆ ಸಕಲ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಗುರುವಿನ ಪಾತ್ರ ಪ್ರಮುಖವಾದುದು. ಕಳೆದ 62 ವರ್ಷಗಳಿಂದ ಬಿ.ಎಸ್‌.ಬೇಲೇರಿ ಗ್ರಾಮಸ್ಥರು ಜಾತ್ಯತೀತ ಮನೋಭಾವದಿಂದ ಈ ಭಾಗದಲ್ಲಿ ಪುರಾಣ ಪ್ರವಚನದಂತಹ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾದರಿಯಾಗಿ ನಡೆಸಿಕೊಂಡು ಬಂದಿರುವುದು ಮಾದರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸುಖಮುನೇಶ್ವರ ಭಜನಾ ಸಂಘದ ಬಸವಣ್ಣನಿಗೆ ಸಕ್ಕರೆ ಮತ್ತು ಬಾಳೆಹಣ್ಣಿನ ತುಲಾಭಾರ ಮಾಡಿ ಸಂಭ್ರಮಿಸಿದರು.

Advertisement

ಬೆದವಟ್ಟಿಯ ಸಂಗಮೇಶ್ವರ ಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು, ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮಿಗಳು, ರಾಮದುರ್ಗದ ಶಾಂತವೀರ ಸ್ವಾಮಿಗಳು, ಯಲಬುರ್ಗಾದ ಬಸವಲಿಂಗಸ್ವಾಮಿಗಳು, ರಾಯನಾಳದ ರೇವಣಸಿದ್ದ ಸ್ವಾಮಿಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು, ಬೆನಹಾಳದ ಸದಾಶಿವ ಸ್ವಾಮಿಗಳು, ಭೈರನಹಟ್ಟಿಯ ಶಾಂತಲಿಂಗ ಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಸ್ವಾಮಿಗಳು, ಬದಾಮಿಯ ಶಿವಪೂಜಾ ಶಿವಾಚಾರ್ಯರರು, ಜಿಗೇರಿಯ ಗುರುಸಿದ್ಧ ಶಿವಾಚಾರ್ಯರರು, ಬಿಜೆಪಿ ಮುಖಂಡ ಉಮೇಶಗೌಡ ಪಾಟೀಲ, ನರಗುಂದ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಪ್ರವೀಣ ಯಾವಗಲ್ಲ, ಕೆಪಿಸಿಸಿ ಮಾಧ್ಯಮ ಸಂಯೋಜಕ ಡಾ|ಸಂಗಮೇಶ ಕೊಳ್ಳಿ, ಹೊಳೆಆಲೂರ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ದಶರಥ ಗಾಣಿಗೇರ, ತಾಪಂ ಮಾಜಿ ಅಧ್ಯಕ್ಷ ವೀರಯ್ಯ ಹಿರೇಮಠ, ಬಸವಂತಪ್ಪ ತಳವಾರ, ಗ್ರಾಮದ ಹಿರಿಯರು, ಸುಖಮುನೇಶ್ವರ ಭಜನಾ ಸಂಘದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next