Advertisement

ಕಪ್ಪು ಹಣ ನಿಯಂತ್ರಣ: 2018ರಲ್ಲಿ ಸ್ವಿಸ್‌ ಖಾತೆಗಳ ವಿವರ

03:45 AM Jan 13, 2017 | Team Udayavani |

ಮಂಗಳೂರು: ಕೆಲವು ಹೊರದೇಶಗಳಲ್ಲಿದ್ದ ಕಪ್ಪು ಹಣ ಪುನಃ “ರೌಂಡ್‌ ಟ್ರಿಪ್ಪಿಂಗ್‌’ನಂತೆ ಬಂಡವಾಳ ರೂಪದಲ್ಲಿ ಭಾರತಕ್ಕೆ ಬಂದು ಬಿಳಿಯಾಗುತ್ತಿತ್ತು. ಇದನ್ನು ನಿಯಂತ್ರಿಸಲು ಸೈಪ್ರಸ್‌, ಮಾರಿಷಸ್‌ ಹಾಗೂ ಸಿಂಗಾಪುರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೀಗ ಸ್ವಿಟ್ಜರ್ಲೆಂಡ್‌ ಜತೆಯೂ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅಲ್ಲಿನ ಭಾರತೀಯರ ಖಾತೆಯ ಪೂರ್ಣ ಮಾಹಿತಿ 2018ರಿಂದ ದೊರೆಯಲಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ನಗರದ ಓಶಿಯನ್‌ ಪರ್ಲ್ ಹೋಟೆಲ್‌ನ ಸಭಾಂಗಣದಲ್ಲಿ ಗುರುವಾರ ಕೇಂದ್ರ ಸರಕಾರದ ನಗದು ಅಪಮೌಲಿÂàಕರಣ ಕುರಿತು ಅವರು ಉಪನ್ಯಾಸ ನೀಡಿದರು. ಈ ಒಪ್ಪಂದಗಳಿಂದ ಅವರ ಬಳಿ ಕಪ್ಪು ಹಣ ಇದೆಯೇ? ಅಥವಾ ನಿಯಮಾನುಸಾರ ಗಳಿಸಿದ ಹಣವೇ ಎನ್ನುವ ಪೂರ್ಣ ಮಾಹಿತಿ ತಿಳಿದು ಬರಲಿದೆ. ಒಂದು ವೇಳೆ ಕಪ್ಪು ಹಣ ಇದ್ದಲ್ಲಿ ಈ ಹಣ ಎತ್ತ ಸಾಗುತ್ತದೆ ಎನ್ನುವುದು ಕೂಡ ತಿಳಿಯಲು ಸಾಧ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲು, ಕೇಂದ್ರ ಸರಕಾರ ದೇಶದ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಹಣ ವ್ಯಯಿಸಿದೆ ಎಂದರು.

ಈ ಸಂದರ್ಭ ಅಪಮೌಲಿÂàಕರಣ ಹಾಗೂ ಡಿಜಿಟಲ್‌ ಪೇಮೆಂಟ್‌ ಮಾಹಿತಿ ಕುರಿತು ಕೈಪಿಡಿಯನ್ನು ಸಚಿವೆ ಬಿಡುಗಡೆಗೊಳಿಸಿದರು.
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ದ.ಕ. ಜಿಲ್ಲಾ ಬಿಜೆಪಿ ಪ್ರಭಾರಿ ಉದಯಕುಮಾರ್‌ ಶೆಟ್ಟಿ ಹಾಜರಿದ್ದರು. ಉಮಾನಾಥ ಕೋಟ್ಯಾನ್‌ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next