ಪಶ್ಚಿಮ ಬಂಗಾಳ : ನಮ್ಮನ್ನು ನಿಯಂತ್ರಿಸುವ ಮೊದಲು ನಿಮ್ಮ ಗೃಹ ಮಂತ್ರಿಯನ್ನು ನಿಯಂತ್ರಿಸುವ ಕೆಲಸ ಮಾಡಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೊದಿಯವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕೂಚ್ ಬೆಹಾರ್ ಜಿಲ್ಲೆಯ ದಿನಹಾಟ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಮತಾ, ನಿಮ್ಮ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಮೊದಲು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಮಾಡಿ. ತದನಂತರ ನಮ್ಮನ್ನು ನಿಯಂತ್ರಿಸಿ ಎಂದು ಪ್ರಧಾನಿ ಮೋದಿಯವರಿಗೆ ಹೇಳಿದ್ದಾರೆ.
ಓದಿ : ರಾಜ್ಯದಲ್ಲಿ ಯಾವುದೇ ಲಾಕ್ ಡೌನ್, ಕರ್ಪ್ಯೂ ಇಲ್ಲ: ಸರ್ಕಾರದ ಸ್ಪಷ್ಟನೆ
ನಂದಿಗ್ರಾಮದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಪ್ರತಿ ಪಾದಿಸಿದ ಅವರು, ನನಗೆ ಇನ್ನೊಂದು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ನೀವಾಗಲಿ ನಿಮ್ಮ ಪಕ್ಷದ ಯಾವ ಸದಸ್ಯರಾಗಲಿ ಸೂಚಿಸುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.
ನಾನು ನಂದಿಗ್ರಾಮದಲ್ಲಿ ಗೆಲ್ಲುತ್ತೇನೆ ಎನ್ನುವುದು ನನಗೆ ಗೊತ್ತಿದೆ. ನನ್ನೊಂದಿಗೆ ಕನಿಷ್ಠ 200 ಮಂದಿ ಟಿಎಂಸಿ ಅಭ್ಯರ್ಥಿಗಳು ಗೆಲ್ಲಬೇಕು. ಆಗ ಮಾತ್ರ ನಾವು ಸದೃಢ ಸರ್ಕಾರವನ್ನು ರಚಿಸಲು ಸಾಧ್ಯ. ಹಾಗಾಗಿ ನಿಮ್ಮ ಅಮೂಲ್ಯ ಮತವನ್ನು ಟಿಎಂಸಿ ಅಭ್ಯರ್ಥಿಗಳಿಗೆ ಚಲಾಯಿಸಿ ಎಂದು ಜನರಲ್ಲಿ ಮಮತಾ ಮನವಿ ಮಾಡಿಕೊಂಡಿದ್ದಾರೆ.
ಓದಿ : ಕೋವಿಡ್ ಹಿನ್ನೆಲೆಯಲ್ಲಿ ಅಡುಗೆ ಉಪಕರಣಗಳಿಗೆ ಹೆಚ್ಚಿದ ಬೇಡಿಕೆ