ಭಾರತದಲ್ಲಿ ಚೀನದ ಪಿಎಲ್‌ಎ ಜತೆಗೆ ನಿರಂತರ ಸಂಪರ್ಕ ಹೊಂದಿರುವ ಅಲ್ಲಿನ ಕಂಪೆನಿಗಳ ಮೇಲೆ ಹದ್ದಿನಗಣ್ಣು ನೆಟ್ಟಿದೆ.
ಈ ಚೀನೀ ಕಂಪೆನಿಗಳು ಭಾರತದಲ್ಲಿದ್ದು ಕೊಂಡೇ ಸಾಗರೋತ್ತರ ಗುಪ್ತಚರ ಕೆಲಸ ನಿರ್ವಹಿಸುತ್ತಿವೆ ಎಂದು ಸರಕಾರ ಅಭಿಪ್ರಾಯಪಟ್ಟಿದೆ.
Advertisement
ಗುಪ್ತಚರ ಕಾನೂನು: ಚೀನ ಕಮ್ಯೂನಿಸ್ಟ್ ಆಡಳಿತವು 2017ರಲ್ಲಿ ನೂತನ ಗುಪ್ತಚರ ಕಾನೂನು ಜಾರಿಗೆ ತಂದಿದೆ. ಈ ಕಾನೂನಿನ 7ನೇ ವಿಧಿ “ಚೀನದ ಯಾವುದೇ ಸಂಸ್ಥೆ ಅಥವಾ ನಾಗರಿಕರು ವಿಶ್ವದ ಎಲ್ಲಿಗೆ ಹೋದರೂ ರಾಷ್ಟ್ರೀಯ ಗುಪ್ತಚರ ಸಂಸ್ಥೆಗಳ ಕಾರ್ಯಕ್ಕೆ ಸಹಕರಿಸಬೇಕು. ಇದಕ್ಕೆ ಸ್ಪಂದಿಸುವ ವ್ಯಕ್ತಿ, ಸಂಸ್ಥೆಗಳನ್ನು ಚೀನ ಸದಾ ರಕ್ಷಿಸುತ್ತದೆ’ ಎಂದು ಹೇಳಿದೆ.
Related Articles
Advertisement
1. ಕ್ಸಿಂಡಿಯಾ ಸ್ಟೀಲ್ ಲಿಮಿಟೆಡ್, ಕೊಪ್ಪಳ: ಭಾರತ- ಚೀನದ ಅತಿದೊಡ್ಡ ಜಂಟಿ ಉದ್ಯಮ ಕ್ಸಿಂಡಿಯಾ ಸ್ಟೀಲ್ ಲಿಮಿಟೆಡ್. ಈ ಕಂಪೆನಿ ಕೊಪ್ಪಳ ಜಿಲ್ಲೆಯಲ್ಲಿ 0.8 ಮಿಲಿಯನ್ ಟನ್ ಸಾಮರ್ಥ್ಯದ ಕಬ್ಬಿಣ ಅದಿರಿನ ಪೆಲಿಟ್ ಸ್ಥಾವರವನ್ನು 2011ರಲ್ಲಿ ಸ್ಥಾಪಿಸಿದೆ. ಕ್ಸಿನ್‌ಕ್ಸಿಂಗ್ ಕ್ಯಾಥೆ ಗ್ರೂಪ್ ಇದರಲ್ಲಿ 250 ಕೋಟಿ ರೂ.ಗೂ ಅಧಿಕ ಬಂಡವಾಳ ಹೂಡಿದೆ.
2. ಕ್ಸಿನ್‌ಕ್ಸಿಂಗ್ ಕ್ಯಾಥೆ, ಛತ್ತೀಸಗಢ: ಛತ್ತೀಸಗಢ ಸರಕಾರದ ಆಹ್ವಾನದ ಫಲವಾಗಿ ಕ್ಸಿನ್‌ಕ್ಸಿಂಗ್ ಕ್ಯಾಥೆ ಇಂಟರ್‌ನ್ಯಾಶನಲ್ ಗ್ರೂಪ್ ಇಲ್ಲಿ ಅತಿದೊಡ್ಡ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. 3 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರುವ ಈ ಸಂಸ್ಥೆ ಈಗಾಗಲೇ 30 ಸಾವಿರ ಕಬ್ಬಿಣದ ಪೈಪ್‌ಗ್ಳನ್ನು ಭಾರತಕ್ಕೆ ಪೂರೈಸಿದೆ.
3. ಸಿಇಟಿಸಿ, ಆಂಧ್ರಪ್ರದೇಶ: ಇದು ಚೀನದ ಪ್ರಮುಖ ಮಿಲಿಟರಿ ಎಲೆಕ್ಟ್ರಾನಿಕ್ಸ್ ತಯಾರಕ ಸಂಸ್ಥೆ. ಸಿಸಿಟಿವಿ ಉತ್ಪಾದನೆಗೆ ಹೆಸರುವಾಸಿ. 2018ರಲ್ಲಿ ಆಂಧ್ರದ ಶ್ರೀ ಸಿಟಿಯ 200 ಮೆಗಾವ್ಯಾಟ್ ಪಿವಿ ಉತ್ಪಾದನಾ ಕೇಂದ್ರದಲ್ಲಿ 320 ಕೋಟಿ ರೂ. ಹೂಡಿಕೆ ಮಾಡಿದೆ.
4. ಹುವಾಯ್, ಹೊಸದಿಲ್ಲಿ: ಪಿಎಲ್‌ಎ ಎಂಜಿನಿಯರಿಂಗ್ ಕಾರ್ಪ್ಸ್ ನ ಮಾಜಿ ಅಧಿಕಾರಿ 1987ರಲ್ಲಿ ಈ ಸಂಸ್ಥೆ ಕಟ್ಟಿದ. ಭಾರತದ ಸ್ಮಾರ್ಟ್‌ಫೋನ್ ಮತ್ತು ಸಂವಹನ ಕ್ಷೇತ್ರದಲ್ಲಿ ಇದು ಜನಪ್ರಿಯ ಬ್ರ್ಯಾಂಡ್. ಕಳೆದವರ್ಷ 12,800 ಕೋಟಿ ರೂ. ಆದಾಯ ಕಂಡಿದೆ. ಈಗ ಭಾರತದಲ್ಲಿ 5ಜಿ ತಂತ್ರಜ್ಞಾನ ಅನುಷ್ಠಾನದ ಕನಸು ಕಾಣುತ್ತಿದೆ.