Advertisement

ಕ್ಷಮಿಸಿ, ನನ್ನ ಸರ್ವನಾಶವಾಗಿದೆ: ಆಸ್ಟ್ರೇಲಿಯಕ್ಕೆ ಮರಳಿದ ಸ್ಮಿತ್‌

03:35 PM Mar 29, 2018 | udayavani editorial |

ಸಿಡ್ನಿ : ದಕ್ಷಿಣ ಆಫ್ರಿಕದಿಂದ ಇಂದು ಗುರುವಾರ ಆಸ್ಟ್ರೇಲಿಯಕ್ಕೆ ಮರಳಿರುವ ಕಳಂಕಿತ ಆಸೀಸ್‌ ಕ್ರಿಕೆಟ್‌ ನಾಯಕ ಸ್ಟೀವನ್‌ ಸ್ಮಿತ್‌ ಅವರು ಚೆಂಡು ವಿರೂಪ ಪ್ರಕರಣದಲ್ಲಿನ ತನ್ನ ಬೇಜವಾಬ್ದಾರಿಯಿಂದ ತೀವ್ರ ದುಃಖೀತರಾಗಿ ಕಣ್ಣೀರುಗರೆದು  “ಕ್ಷಮಿಸಿ, ನನ್ನಿಂದ ತಪ್ಪಾಗಿದೆ; ನನ್ನ ಸರ್ವನಾಶವಾಗಿದೆ’ ಎಂದು ಗದ್ಗದಿತರಾಗಿ ಹೇಳಿ ಕುಸಿದರು. 

Advertisement

“ನನ್ನ ಬೇಜವಾಬ್ದಾರಿಗೆ ನಾನು ಸಂಪೂರ್ಣ ಹೊಣೆ ವಹಿಸುತ್ತೇನೆ. ವಸ್ತುಸ್ಥಿತಿ ಮತ್ತು ಅದರ ಪರಿಣಾಮವನ್ನು ಅಳೆಯವಲ್ಲಿ ನನ್ನಿಂದ ಗಂಭೀರ ಪ್ರಮಾದವಾಗಿದೆ. ಇದರ ಪರಿಣಾಮಗಳನ್ನು ನಾನು ಅರಿತಿದ್ದೇನೆ. ಇದು ನನ್ನ ನಾಯಕತ್ವದ ಸಂಪೂರ್ಣ ವೈಫ‌ಲ್ಯವಾಗಿದೆ’ ಎಂದು ಸ್ಮಿತ್‌ ಕಣ್ಣೀರು ಹಾಕುತ್ತಾ ಹೇಳಿದರು. 

#WATCH Steve Smith says, ‘there was a failure of leadership, of my leadership’, breaks down as he addresses the media in Sydney. #BallTamperingRow pic.twitter.com/hXKB4e7DR2

— ANI (@ANI) March 29, 2018

Advertisement

“ಕ್ಷಮಿಸಿ, ನಾನು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದೇನೆ. ನನ್ನ ತಪ್ಪನ್ನು ಸರಿಪಡಿಸಲು ಮತ್ತು ನನ್ನ ತಪ್ಪಿನಿಂದಾಗಿರುವ ಹಾನಿಯನ್ನು ಸರಿಪಡಿಸಲು ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ನಾನು ಮಾಡುತ್ತೇನೆ. ಅದರಿಂದ ಏನಾದರೂ ಒಳ್ಳೆಯದಾಗುವುದಿದ್ದರೆ ಅದು ಇತರರಿಗೂ ಒಂದು ಪಾಠವಾಗುತ್ತದೆ. ಅಂತೆಯೇ ನಾನು ಬದಲಾವಣೆಯ ಒಂದು ಶಕ್ತಿಯಾಗಲು ಬಯಸುತ್ತೇನೆ. ನಾನು ಶೇಷಾಯುಷ್ಯದಲ್ಲಿ ನಾನು ನನ್ನ ತಪ್ಪಿಗಾಗಿ ವಿಷಾದ ಪಡುವಂತಾಗಿದೆ. ನಾನು ಸಂಪೂರ್ಣವಾಗಿ ಕುಸಿದು ಹೋಗಿದ್ದೇನೆ’ ಎಂದು ಸ್ಮಿತ್‌ ಹೇಳಿದರು. 

ತಂಡದ ಸಹ ಆಟಗಾರರಾಗಿರುವ ಡೇವಿಡ್‌ ವಾರ್ನರ್‌ ಜತೆಗೆ ಚೆಂಡು ವಿರೂಪ ಗೊಳಿಸಿರುವ ಕ್ಯಾಮೆರಾನ್‌ ಬ್ಯಾನ್‌ ಕ್ರಾಫ್ಟ್ ಗೆ  ಸಮ್ಮತಿಸುವ ಮೂಲಕ ಸ್ಮಿತ್‌ ಅಪರಾಧ ಎಸಗಿರುವುದಕ್ಕಾಗಿ ಅವರಿಗೆ 12 ತಿಂಗಳ ನಿಷೇಧ ಹೇರಲಾಗಿದೆ. ಐಪಿಎಲ್‌ ಬಾಗಿಲು ಕೂಡ ಸ್ಮಿತ್‌ಗೆ ಈಗ ಮುಚ್ಚಲ್ಪಟ್ಟಿದೆ. 

Advertisement

Udayavani is now on Telegram. Click here to join our channel and stay updated with the latest news.

Next